ETV Bharat / state

ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿಗೆ ಸಿಎಂ ಬೊಮ್ಮಾಯಿ, ಬಿಎಸ್​ವೈ ಶುಭ ಹಾರೈಕೆ

ಕಿತ್ತೂರು ರಾಣಿ ಚೆನ್ನಮ್ಮರ ಜಯಂತಿ ಹಿನ್ನೆಲೆ ನಾಡಿನ ರಾಜಕೀಯ ನಾಯಕರು ಸ್ಮರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್​ವೈ ನಾಡಿನ ಜನತೆಗೆ ಚೆನ್ನಮ್ಮನ ಸಂದೇಶ ಸಾರಿದ್ದಾರೆ.

vpolitical-leaders-wished-for-kittur-rani-chennamma-jayanti
ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿಗೆ ಹರಸಿದ ರಾಜಕೀಯ ನಾಯಕರು
author img

By

Published : Oct 23, 2021, 2:23 PM IST

ಬೆಂಗಳೂರು: ಕಿತ್ತೂರು ರಾಣಿ ಚೆನ್ನಮ್ಮನವರ ಧೈರ್ಯ ಸಾಹಸ ಸದಾ ಸ್ವಾಭಿಮಾನದ ಪ್ರತೀಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಮರಿಸಿದ್ದಾರೆ‌.

ಕನ್ನಡನಾಡಿನ ವೀರ ವನಿತೆ, ಧೈರ್ಯ, ಸ್ವಾಭಿಮಾನದ ಸಾಕಾರಮೂರ್ತಿ ಕಿತ್ತೂರಿನ ರಾಣಿ ಚೆನ್ನಮ್ಮನವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ನಾಡಿನ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಚೆನ್ನಮ್ಮನವರ ಶೌರ್ಯ, ಸಾಹಸ, ಹೋರಾಟಗಳು ನಾಡಿನ ಹೆಮ್ಮೆಯ ಇತಿಹಾಸವಾಗಿದ್ದು, ಸದಾ ಪ್ರೇರಣೆ ನೀಡುತ್ತಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

  • ಅಪ್ರತಿಮ ದೇಶಭಕ್ತೆ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ ನಾಡಿನ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಾಜೀ ಅವರ ಜಯಂತಿಯಂದು ಗೌರವ ನಮನಗಳು. #kitturchennamma pic.twitter.com/vXqanu8K0m

    — Basavaraj S Bommai (@BSBommai) October 23, 2021 " class="align-text-top noRightClick twitterSection" data=" ">

ವೀರ ಮಹಿಳೆ, ದಿಟ್ಟ ಹೋರಾಟಗಾರ್ತಿ ಕಿತ್ತೂರಿನ ರಾಣಿ ಚೆನ್ನಮ್ಮಾಜಿ ಅವರ ಜಯಂತಿಯಂದು ಅವರಿಗೆ ಆದರಪೂರ್ವಕ ಪ್ರಣಾಮಗಳನ್ನು ಸಲ್ಲಿಸೋಣ. ನಾಡಿನ ಸ್ವಾತಂತ್ರ್ಯಕ್ಕಾಗಿ ಆಕ್ರಮಣಕಾರರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು ಹೋರಾಡಿದ ಆಕೆಯ ಧೈರ್ಯ, ಪರಾಕ್ರಮ, ಸಾಹಸಗಾಥೆಗಳು, ಸ್ವಾಭಿಮಾನದ ಪ್ರತೀಕವಾಗಿವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

  • ವೀರ ಮಹಿಳೆ, ದಿಟ್ಟ ಹೋರಾಟಗಾರ್ತಿ ಕಿತ್ತೂರಿನ ರಾಣಿ ಚೆನ್ನಮ್ಮಾಜಿ ಅವರ ಜಯಂತಿಯಂದು ಅವರಿಗೆ ಆದರಪೂರ್ವಕ ಪ್ರಣಾಮಗಳನ್ನು ಸಲ್ಲಿಸೋಣ. ನಾಡಿನ ಸ್ವಾತಂತ್ರ್ಯಕ್ಕಾಗಿ ಆಕ್ರಮಣಕಾರರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು ಹೋರಾಡಿದ ಆಕೆಯ ಧೈರ್ಯ, ಪರಾಕ್ರಮ, ಸಾಹಸಗಾಥೆಗಳು, ಸ್ವಾಭಿಮಾನದ ಪ್ರತೀಕವಾಗಿದೆ. pic.twitter.com/cFmPlen83c

    — B.S. Yediyurappa (@BSYBJP) October 23, 2021 " class="align-text-top noRightClick twitterSection" data=" ">

ಪುತಿನ ಕೊಡುಗೆ ಅನನ್ಯ

ನವೋದಯ ಕಾವ್ಯಶಿಲ್ಪಿ, ಶ್ರೇಷ್ಠ ಕವಿ, ಕನ್ನಡ ಸಾರಸ್ವತ ಲೋಕದ ಹಿರಿಯ ಸಾಹಿತಿ ಶ್ರೀ ಪು.ತಿ.ನರಸಿಂಹಾಚಾರ್ ಅವರ ಪುಣ್ಯತಿಥಿಯಂದು ಆದರಪೂರ್ವಕ ನಮನಗಳು. ಹಂಸದಮಯಂತಿ ಮತ್ತು ಇತರ ರೂಪಕಗಳು, ಗೋಕುಲ ನಿರ್ಗಮನ ಸೇರಿದಂತೆ ಹಲವಾರು ಗೇಯ ಕಾವ್ಯ, ನಾಟಕ ಪ್ರಬಂಧಗಳ ವಿಶಿಷ್ಟ ಕೃತಿಗಳನ್ನು ರಚಿಸಿರುವ ಪು.ತಿ.ನ ಅವರ ಕೊಡುಗೆ ಅನನ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಮರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.