ಬೆಂಗಳೂರು: ಬೀದರ್ನಿಂದ ಡಿ.ಕೆ. ಶಿವಕುಮಾರ್ ಸಹೋದರ ಡಿಕೆ ಸುರೇಶ್ ನಿವಾಸಕ್ಕೆ ಆಗಮಿಸಿದ್ದಾರೆ. ಅಕ್ರಮವಾಗಿ ಹಣ ಸಂಪಾದನೆ ಮಾಡಿರುವ ಆರೋಪ ಹೊತ್ತಿರುವ ಡಿಕೆಶಿಗೆ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ನಂತರ ಡಿಕೆ ಹೆಬ್ಬಾಳ ಬಳಿಯ ಗಂಗಾನಗರ ಸಿಬಿಐ ಕಚೇರಿ ಮುಂದೆ ಹಾಜರಾಗಲಿದ್ದಾರೆ.
ಸುರೇಶ್ ಮನೆಯಲ್ಲಿ ಮೀಟಿಂಗ್ ಮಾಡುತ್ತಿದ್ದು, ಮೀಟಿಂಗ್ನಲ್ಲಿ ಆಡಿಟರ್, ವಕೀಲರು ಭಾಗಿಯಾಗಿದ್ದಾರೆ. ಸಹೋದರ ಸುರೇಶ್ ಜೊತೆ ಮಾತನಾಡಿದ ಬಳಿಕ ಸಿಬಿಐ ವಿಚಾರಣೆಗೆ ತೆರಳಲಿದ್ದಾರೆ. ಇನ್ನು ಈ ಹಿಂದೆ ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ ನಡೆದಾಗ ಕಾರ್ಯಕರ್ತರು ಗುಂಪು ಸೇರಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಯಾವುದೇ ತೊಂದರೆಯಾಗಬಾರದೆಂದು ಸದ್ಯ ಆರ್ಟಿ ನಗರ ಪೊಲೀಸರು ಭದ್ರತೆ ಮಾಡಿದ್ದು, ಸ್ಥಳದಲ್ಲಿ 1 ಕೆಎಸ್ಆರ್ಪಿ ನಿಯೋಜನೆ ಮಾಡಲಾಗಿದೆ. ಹಾಗೆಯೇ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಕಾನ್ಸ್‌ಟೇಬಲ್ ಮೊಕ್ಕಾಂ ಹೂಡಿದ್ದಾರೆ.
ಇನ್ನು ಡಿಕೆಶಿ ವಿಚಾರಣೆಗೆ ಹಾಜರಾಗುವ ಸಂದರ್ಭದಲ್ಲಿ ಯಾರನ್ನೂ ಸಿಬಿಐ ಕಚೇರಿ ಸುತ್ತ ಸೇರದಂತೆ ಪೊಲೀಸರು ತಡೆಯಲಿದ್ದಾರೆ.