ಹೊಸಕೋಟೆ: ಕೆಲಸ ಕೊಡಿಸುವುದಾಗಿ ಹೊರ ರಾಜ್ಯದಿಂದ ಹುಡುಗಿಯರನ್ನ ಕರೆತಂದು ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಹೊಸಕೋಟೆ ಪೊಲೀಸರು ಬಲವಂತವಾಗಿ ವೇಶ್ಯವಾಟಿಕೆಯಲ್ಲಿ ಸಿಲುಕಿದ್ದ ಯುವತಿಯನ್ನು ರಕ್ಷಿಸಿದ್ದಾರೆ.
ಅಲಿಯಾ ತಾಜ್, ಅಂಬಿಕಾ, ಸೋಮಶೇಖರ್, ಪ್ರಸನ್ನ ಎಂಬುವವರು ಬಂಧನಕ್ಕೊಳಗಾಗಿದ್ದಾರೆ. ಇವರು ಹೊರರಾಜ್ಯಗಳಿಂದ ಕೆಲಸದ ಅಮಿಶ ಹೊಡ್ಡಿ ಯುವತಿಯರನ್ನ ಕರೆದುಕೊಂಡು ಬಂದು, ಅವರನ್ನು ಮನೆಯಲ್ಲಿಯೇ ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಹೊಸಕೋಟೆ ಪೊಲೀಸರು ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಹೊಸಕೋಟೆ ಟೌನಿನ ಬಸವೇಶ್ವರ ನಗರದ ಮನೆಯ ಮೇಲೆ ದಾಳಿ ನಡೆಸಿ ಕೃತ್ಯವನ್ನು ಬಯಲು ಮಾಡಿದ್ದಾರೆ.
ಅಲ್ಲದೆ ದಂದೆಯಲ್ಲಿ ಸಿಲುಕಿಕೊಂಡಿದ್ದ ಕೊಲ್ಕತ್ತಾ ಮೂಲದ ಸಂತ್ರಸ್ತ ಯುವತಿಯನ್ನು ರಕ್ಷಿಸಿ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಆರೋಪಿಗಳಿಂದ ಪೊಲೀಸರು ವೇಶ್ಯಾವಾಟಿಕೆ ಕೃತ್ಯಕ್ಕೆ ಬಳಸುತ್ತಿದ್ದ 3 ಮೊಬೈಲ್ ಹಾಗೂ 1120ನಗದು ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಾದ ಅಲಿಯಾ ತಾಜ್ ಮತ್ತು ಅಂಬಿಕಾ ಸುಮಾರು 2 ತಿಂಗಳುಗಳಿಂದ ಮನೆಯಲ್ಲಿಯೇ ಗಿರಾಕಿಗಳನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಹುಡುಗಿಯರನ್ನು ಹಾಗೂ ಗಿರಾಕಿಗಳನ್ನು ಸೋಮಶೇಖರ್ ಕರೆದುಕೊಂಡು ಬಂದು ಬಿಡುತ್ತಿದ್ದ ಎಂಬುದು ತಿಳಿದು ಬಂದಿದೆ.
ಇದನ್ನು ಓದಿ: ವಿದೇಶಿ ಮಹಿಳೆಯರನ್ನು ಕರೆತಂದು ವೇಶ್ಯಾವಾಟಿಕೆ: ಮೂವರು ಆರೋಪಿಗಳ ಬಂಧನ