ಬೆಂಗಳೂರು: ಕಳ್ಳರು ಹಾಗೂ ಹಂತಕರ ಪಾಲಿಗೆ ಸಿಂಹ ಸ್ವಪ್ನವಾಗಿರೋದು ಕೇವಲ ಪೊಲೀಸರು ಮಾತ್ರವಲ್ಲ. ಬದಲಿಗೆ ಪೊಲೀಸರ ಜೊತೆ ಅಪರಾಧ ದಳದ ಶ್ವಾನಗಳು ಸಹ ತಮ್ಮ ಚಾಣಕ್ಷ ತನದಿಂದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗುತ್ತವೆ.
ಕೆಲ ಕ್ರಿಮಿನಲ್ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ಶ್ವಾನದಳ ಕೂಡ ಸಾಥ್ ನೀಡುತ್ತದೆ. ಹಾಗೆ ನಮ್ಮ ರಾಜ್ಯ ಪೊಲೀಸ್ ಇಲಾಖೆಯ ಶ್ವಾನಗಳಿಗೆ ಹಲವಾರು ಪ್ರಶಸ್ತಿ ಕಿರೀಟ ಕೂಡ ಸಿಕ್ಕಿದೆ.
ಸದ್ಯ ಸಿಲಿಕಾನ್ ಸಿಟಿಯಲ್ಲಿ ಸರಗಳ್ಳರ ಹಾವಳಿ ಜಾಸ್ತಿಯಾಗಿದ್ದು, ಒಂಟಿ ಮಹಿಳೆಯರು, ವಾಕಿಂಗ್ ತೆರಳುವವರು, ವೃದ್ಧರನ್ನೇ ಟಾರ್ಗೆಟ್ ಮಾಡಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಸದ್ಯ ಈ ಪ್ರಕರಣಗಳನ್ನ ಪೊಲೀಸರು ಒಂದು ಕಡೆ ಭೇದಿಸಿದರೆ, ಮತ್ತೊಂದೆಡೆ ಪೊಲೀಸ್ ಇಲಾಖೆಯ ಶ್ವಾನಗಳು ಕೂಡ ಪ್ರಕರಣ ಭೇದಿಸೋದಕ್ಕೆ ತಯಾರಾಗ್ತಿವೆ.
ಸದ್ಯ ಎರಡು ರಾನ ಹಾಗೂ ನಿಧಿ ಶ್ವಾನಗಳು ಎಂಟ್ರಿಯಾಗಿದ್ದು, ಅವುಗಳಿಗೆ ಸರಗಳ್ಳತನ ಪ್ರಕರಣಗಳನ್ನ ಯಾವ ರೀತಿ ಭೇದಿಸುವುದು ಅನ್ನೋದ್ರ ಟ್ರೈನಿಂಗ್ ನೀಡಲಾಗ್ತಿದೆ. ಈಗಾಗಲೇ ಇವುಗಳು ಪೊಲೀಸರ ತರಬೇತಿಗೆ ಒಗ್ಗಿಕೊಂಡಿದ್ದು, ಸಿಲಿಕಾನ್ ಸಿಟಿಯಲ್ಲಿ ಅನುಮಾನಸ್ಪಾದ ಸ್ಥಳಗಳಿಗೆ ಎಂಟ್ರಿ ಕೊಟ್ಟು ಕಳ್ಳರ ಹಿಡಿಯುವ ಪ್ರಯತ್ನದಲ್ಲಿ ತೊಡಗಿದೆ.