ETV Bharat / state

ಪೊಲೀಸ್​ ಎಂದು ಹೇಳಿಕೊಂಡು ಮೊಬೈಲ್ ಸುಲಿಗೆ ಮಾಡುತ್ತಿದ್ದವನ ಬಂಧನ - ಸುಬ್ರಮಣ್ಯ ನಗರ ಪೊಲೀಸ್ ಠಾಣೆ

ಪೊಲೀಸ್​ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಮೊಬೈಲ್ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನ ಉತ್ತರ ವಿಭಾಗದ ಸುಬ್ರಹ್ಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ವಿವಿಧ ಕಂಪನಿಗಳ 20 ಮೊಬೈಲ್, ನಗದು, ದ್ವಿಚಕ್ರ ವಾಹನ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

police
police
author img

By

Published : Jun 24, 2020, 4:27 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಹೆಚ್ಚಿದೆ. ಹೀಗಾಗಿ ಪೊಲೀಸರೇ ರಸ್ತೆಗಿಳಿಯಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಪೊಲೀಸ್​ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಮೊಬೈಲ್ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನ ಉತ್ತರ ವಿಭಾಗದ ಸುಬ್ರಹ್ಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹೆಶ್ ಎಂದು ಗುರುತಿಸಲಾಗಿದೆ.

ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಕೆ ಪ್ರಿಂಟಿಗ್ ಪಾಯಿಂಟ್ ಬಳಿ ವೇದಮೂರ್ತಿ ಎಂಬುವವರು ತಮ್ಮ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಆರೋಪಿ‌ ಮಹೇಶ್ತಾ ತಾನು ಪೊಲೀಸ್ ಅಧಿಕಾರಿಯೆಂದು ಪರಿಚಯ ಮಾಡಿಕೊಂಡು ಬಾಡಿಗೆಗೆ ಕಾರು ಬೇಕೆಂದು ಕರೆದೊಯ್ದಿದ್ದಾನೆ. ನಂತರ ಪೊಲೀಸ್ ಎಂದು ಹೆದರಿಸಿ ಮೊಬೈಲ್ ಸುಲಿಗೆ‌ ಮಾಡಿದ್ದಾನೆ.

arrest
ಆರೋಪಿಯ ಬಂಧನ

ಹೀಗಾಗಿ ವೇದಮೂರ್ತಿ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪ್ರಕರ ದಾಖಲಿಸಿದ್ದರು. ಸದ್ಯ ಆರೋಪಿಯನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆರೋಪಿ ಜೆ.ಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಒಂದು ದ್ವಿಚಕ್ರ ವಾಹನ ಕಳ್ಳತನ ಮಾಡಿ ನಂತರ ನಂಬರ್ ಪ್ಲೇಟ್ ಬದಲಾಯಿಸಿ ಅದರ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಾರ್ವಜನಿಕರಿಗೆ ಬೆದರಿಸಿ ಹಣ, ಮೊಬೈಲ್ ಲೂಟಿ ಮಾಡ್ತಿದ್ದ ವಿಚಾರ ಬಾಯಿ ಬಿಟ್ಟಿದ್ದಾನೆ.

ಪೊಲೀಸರು ಆರೋಪಿಯಿಂದ ವಿವಿಧ ಕಂಪನಿಗಳ 20 ಮೊಬೈಲ್, ನಗದು, ದ್ವಿಚಕ್ರ ವಾಹನ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.‌ ಆರೋಪಿ ‌ನಗರದ ಹಲವೆಡೆ ಇದೇ ರೀತಿ ಸುಲಿಗೆ ಮಾಡಿರುವ ಮಾಹಿತಿ ಇದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.