ಬೆಂಗಳೂರು: ಸಿಲಿಕಾನ್ ಸಿಟಿಯ ಬ್ಯುಸಿನೆಸ್ ಮ್ಯಾನ್ ದೀಪಕ್ ಎಂಬುವವರ ಮನೆಯಲ್ಲಿ ದರೋಡೆಕೋರರು ಬರೋಬ್ಬರಿ ಒಂದೂವರೆ ಕೋಟಿ ದೋಚಿ ಎಸ್ಕೇಪ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಬಂಧಿತರನ್ನ ವಿಜಯ್ ಕುಮಾರ್, ಉತ್ತಮ್ ಸಿಂಗ್,ಅಮರ್ ಸಿಂಗ್, ಕರಣ್ ಸಿಂಗ್ ಎಂದು ಗುರುತಿಸಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಯಾಗಿರುವ ವಿಜಯ್ ಕುಮಾರ್ ಬೇರಾರೂ ಅಲ್ಲ. ಆತ ಬ್ಯುಸಿನೆಸ್ ಮ್ಯಾನ್ ದೀಪಕ್ ಅವರ ದೊಡ್ಡಪ್ಪನ ಮಗ. ಹೌದು, ಆರೋಪಿ ವಿಜಯ್ ಕುಮಾರ್ ಮೂಲತಃ ರಾಜಸ್ಥಾನದವನಾಗಿದ್ದು, ಈತ ಚಿಕ್ಕಪೇಟೆಯಲ್ಲಿ ಎಲೆಕ್ಟ್ರಾನಿಕ್ ವ್ಯಾಪಾರ ನಡೆಸುತಿದ್ದ. ಆದರೆ ಲಾಭ ಮಾತ್ರ ಬಿಡುಗಾಸು ಇರಲಿಲ್ಲ. ಆದ್ರೆ ದೀಪಕ್ ಮಾತ್ರ ವ್ಯಾಪಾರದಲ್ಲಿ ಲಾಭ ಪಡೆದು ಕೋಟಿ ಕೋಟಿ ಸಂಪಾದಿಸಿದ್ದ, ಹೀಗಾಗಿ ಅಂತ ತನ್ನ ಸಂಬಂಧಿ ದೀಪಕ್ ಮನೆಯಲ್ಲಿ ಕೋಟಿ ಕೋಟಿ ಕಳ್ಳತನ ಮಾಡಿಸೋಕೆ ಫ್ಲಾನ್ ಮಾಡಿದ್ದ ಎನ್ನಲಾಗಿದೆ.
ಈ ಪ್ಲಾನ್ನಂತೆ ವಿಜಯ್, ಉತ್ತಮ್ ಸಿಂಗ್,ಅಮರ್ ಸಿಂಗ್, ಕರಣ್ ಸಿಂಗ್ ಜೊತೆ ಸೇರಿ ಒಂದು ಸಣ್ಣ ಸುಳಿವು ಕೊಡದೇ 2.5 ಕೆಜಿ ಚಿನ್ನಾಭರಣ ಹಾಗೂ 60 ಲಕ್ಷ ರೂ ನಗದು ದೋಚಿ ಎಸ್ಕೇಪ್ ಆಗಿಬಿಟ್ಟಿದ್ದರು.
ನಂತ್ರ ದೀಪಕ್ ಈ ಸಂಬಂಧ ಹನುಂತನಗರ ಪೊಲೀಸರಿಗೆ ದೂರು ನೀಡಿದ್ದ. ದೂರಿನ ಆಧಾರದ ಮೇರೆಗೆ ತನಿಖೆ ಶುರುಮಾಡಿದಾಗ, ಆರೋಪಿಗಳು ರಾಜಸ್ಥಾನದ ಶೀರೋಹಿಯಲ್ಲಿ ತಲೆಮರೆಸಿಕೊಂಡಿರುವ ವಿಚಾರ ತಿಳಿದು ಬಂತು. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ಪೊಲೀಸರು, ಸತತ 20 ದಿನಗಳ ಕಾಲ ರಾಜಸ್ಥಾನ, ಮುಂಬೈ, ದೆಹಲಿಯಲ್ಲಿ ಆರೋಪಿಗಳನ್ನ ಹುಡುಕುತ್ತಾ ಅಲೆದಾಟ ನಡೆಸಿ ಕೊನೆಗೆ ರಾಜಸ್ಥಾನದಲ್ಲಿ ಇವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳ ಹೆಡೆಮುರಿ ಕಟ್ಟಿ 75 ಲಕ್ಷ ಮೌಲ್ಯದ ಚಿನ್ನಾಭರಣ, 21.5 ಲಕ್ಷರೂ ನಗದು ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ.