ETV Bharat / state

ಸಂವಿಧಾನವನ್ನು ಕಾಪಾಡುತ್ತೇವೆ ಎಂದು ಪ್ರತಿಜ್ಞೆ ಮಾಡೋಣ: ಸಿಪಿಐಎಂ - ಸೆಪ್ಟೆಂಬರ್ 1 ರಂದು ಸಿಪಿಐಎಂ ಪ್ರತಿಭಟನೆಗೆ ಕರೆ

ಸೆಪ್ಟೆಂಬರ್ 1 ರಂದು ಎಡಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿವೆ. ಜೊತೆಗೆ ಸಂವಿಧಾನವನ್ನು ಕಾಪಾಡುತ್ತೇವೆ ಮತ್ತು ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುತ್ತೇವೆ ಎಂದು ಪ್ರತಿಜ್ಞೆ ತೆಗೆದುಕೊಳ್ಳೋಣ ಎಂದು ಸಿಪಿಐಎಂ ಕರೆ ಕೊಟ್ಟಿದೆ.

Cpim
Cpim
author img

By

Published : Aug 15, 2020, 3:45 PM IST

ಬೆಂಗಳೂರು: ಸ್ವಾತಂತ್ರ್ಯ ದಿನದಂದು ನಮ್ಮ ಸಂವಿಧಾನವನ್ನು ಕಾಪಾಡುತ್ತೇವೆ ಮತ್ತು ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುತ್ತೇವೆ ಎಂಬ ಪ್ರತಿಜ್ಞೆ ತೆಗೆದುಕೊಳ್ಳೋಣ ಎಂದು ಸಿಪಿಐಎಂ ಕರೆ ಕೊಟ್ಟಿದೆ.

ಸಿಪಿಐಎಂ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಕೊವಿಡ್-19 ಮತ್ತು ಲಾಕ್ ಡೌನ್‌ ಅವಧಿಯಲ್ಲಿ ಜನರು ಸಂಕಷ್ಟ ಎದುರಿಸಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಒದಗಿಸುವುದರ ಬಗ್ಗೆ ಗಮನ ಕೇಂದ್ರೀಕರಿಸುವ ಬದಲು, ಆರ್ ಎಸ್ ಎಸ್ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಭಾರತೀಯ ಸಂವಿಧಾನದ ಮೂಲತತ್ವಗಳನ್ನೇ ಆಕ್ರಮಣಕಾರಿ ರೀತಿಯಲ್ಲಿ ಶಿಥಿಲಗೊಳಿಸುತ್ತಿದೆ ಎಂದು ಆರೋಪಿಸಿದೆ.

ಸಂಸತ್ತಿನಿಂದ ಹಿಡಿದು ನ್ಯಾಯಾಂಗ, ಚುನಾವಣಾ ಆಯೋಗ, ಸಿ.ಬಿ.ಐ., ಇ.ಡಿ.ಯಂತಹ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಗಳು ದಾಳಿಗೊಳಗಾಗಿವೆ. ಅವುಗಳ ಸ್ವಾಯತ್ತತೆಯನ್ನು ಶಿಥಿಲಗೊಳಿಸಲಾಗುತ್ತಿದೆ. ಭಾರತದ ಸಂವಿಧಾನದ ರಕ್ಷಣೆಯಲ್ಲಿ ಈ ಸಂಸ್ಥೆಗಳು ಸ್ವಾತಂತ್ರವಾಗಿ ಕಾರ್ಯ ನಿರ್ವಹಿಸದೆ ಶಿಥಿಲಗೊಳಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯ ತೀವ್ರ ದಾಳಿಗೊಳಗಾಗಿದೆ. ಸರ್ಕಾರದ ಧೋರಣೆಗಳ ವಿರುದ್ಧ ಯಾವುದೇ ಭಿನ್ನಮತ ವ್ಯಕ್ತಗೊಳಿಸುವುದನ್ನು ‘ರಾಷ್ಟ್ರ-ವಿರೋಧಿ’ ಎಂದು ಜರಿಯಲಾಗುತ್ತಿದೆ. ಜನರನ್ನು, ಹೋರಾಟಗಾರರನ್ನು ಹಾಗೂ ಚಿಂತಕರನ್ನು ಯುಎಪಿಎ, ರಾಜದ್ರೋಹ ಮುಂತಾದ ಕರಾಳ ಕಾಯ್ದೆಗಳಡಿ ಶಿಕ್ಷಿಸಲಾಗುತ್ತಿದೆ. ಸಂವಿಧಾನದ ಒಂದು ಮೂಲ ಲಕ್ಷಣವಾದ ಒಕ್ಕೂಟ ತತ್ವಗಳನ್ನು ನಿರಾಕರಣೆ ಮಾಡಿ ಎಲ್ಲ ಅಧಿಕಾರಗಳನ್ನು ಕೇಂದ್ರೀಕರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಡಪಕ್ಷಗಳು ಹೇಳಿವೆ.

'ಆತ್ಮನಿರ್ಭರ ಭಾರತ' ದ ನಿರಾಕರಣೆಗೆ ಪ್ರತಿಭಟನೆ:

ಅಮೆರಿಕ ಸಂಯುಕ್ತ ಸಂಸ್ಥಾನಗಳ ಆದೇಶಗಳಿಗೆ ಬಿಜೆಪಿ ಕೇಂದ್ರ ಸರ್ಕಾರ ಸೇವಕನಂತೆ ತಲೆ ಬಾಗುತ್ತಿದೆ. ಜಾಗತಿಕ ಅಧಿಪತ್ಯವನ್ನು ಬಲಗೊಳಿಸಿಕೊಳ್ಳುವುದು ಅಮೆರಿಕದ ತಂತ್ರಗಳ ಒಂದು. ಭಾರತ ತನ್ನ ವಿದೇಶಾಂಗ ಧೋರಣೆಯ ದಿಕ್ಕನ್ನು ಸರಿಪಡಿಸಿಕೊಳ್ಳಬೇಕು. ಅಮೆರಿಕಕ್ಕೆ ಮತ್ತು ಅಮೆರಿಕ-ಇಸ್ರೇಲ್ ಕೂಟಕ್ಕೆ ಅಡಿಯಾಳಾಗುವ ವಿದೇಶಾಂಗ ಧೋರಣೆ ಭಾರತದ ಸಾರ್ವಭೌಮತ್ವವನ್ನು ಶಿಥಿಲಗೊಳಿಸುತ್ತದೆ ಮತ್ತು ಅದು ಭಾರತದ ಸ್ವಾವಲಂಬನೆಯ, ‘ಆತ್ಮನಿರ್ಭರ ಭಾರತ'ದ ನಿರಾಕರಣೆಯಾಗುತ್ತದೆ ಎಂದಿರುವ ಎಡಪಕ್ಷಗಳು, ಸೆಪ್ಟೆಂಬರ್ 1 ರಂದು ಈ ಕುರಿತು ಪ್ರತಿಭಟನೆ ನಡೆಸುವಂತೆ ಕರೆ ನೀಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.