ETV Bharat / state

ಬೆಂಗಳೂರು ಇದೇ ವೇಗದಲ್ಲಿ ಅಭಿವೃದ್ಧಿಯಾದರೆ ಆರ್ಥಿಕ ರಾಜಧಾನಿಯಾಗಿ ಮುಂಬೈ ಹಿಂದಕ್ಕಲಿದೆ: ಪಿಯೂಷ್ ಗೊಯೆಲ್

ಕೇಂದ್ರ ಸರಕಾರವು ದೊಡ್ಡ ಉದ್ಯಮಿಗಳಂತೆಯೇ ಸಣ್ಣಪುಟ್ಟ ವ್ಯಾಪಾರಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಓಪನ್ ಡೇಟಾ ಇ ಕಾಮರ್ಸ್‌ ವ್ಯವಸ್ಥೆಗೆ ಚಾಲನೆ ನೀಡಿದ್ದು, ಇದು ಬೆಂಗಳೂರಿನಿಂದಲೇ ಆರಂಭವಾಗಬೇಕು ಎಂದು ಕೇಂದ್ರ ಸಚಿವ ಪಿಯೂಷ್ ಗೊಯೆಲ್ ಆಶಯ ವ್ಯಕ್ತ ಪಡಿಸಿದರು.

KN_BNG
ವಿಷನ್​ ಇಂಡಿಯಾ ಕಾರ್ಯಾಗಾರ
author img

By

Published : Nov 19, 2022, 9:55 PM IST

Updated : Nov 19, 2022, 10:49 PM IST

ಬೆಂಗಳೂರು: ಬೆಂಗಳೂರು ಇದೇ ವೇಗದಲ್ಲಿ ಅಭಿವೃದ್ಧಿಯಾದರೆ, ಸದ್ಯದಲ್ಲೇ ಆರ್ಥಿಕ ರಾಜಧಾನಿಯಾಗಿ ಮುಂಬೈಯನ್ನು ಹಿಂದಿಕ್ಕಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೊಯೆಲ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ವಿಷನ್ ಇಂಡಿಯಾ@2047 ಎರಡು ದಿನಗಳ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ವಿಷನ್ ಇಂಡಿಯಾ@2047ನ್ನು ಸಾಧಿಸಲು ಸ್ಟಾರ್ಟ್ ಅಪ್ ಉದ್ಯಮಿಗಳು ಆಗಾಗ್ಗೆ ತೊಡಗಿಸುವಿಕೆ, ಪಾಲುದಾರಿಕೆ ಮತ್ತು ವಿಚಾರಗಳನ್ನು ವಿನಿಮಯ ಮಾಡಬೇಕು ಎಂದು ಕರೆ ನೀಡಿದರು. ಮಹಾತ್ಮಾ ಗಾಂಧಿ ಉಲ್ಲೇಖವನ್ನು ಉಲ್ಲೇಖಿಸುತ್ತಾ ದೃಢ ನಿಶ್ಚಯಿ, ಸಮಚಿತ್ತದ ಸಣ್ಣ ಜನರ ಗುಂಪು ಇತಿಹಾಸದ ಪಥವನ್ನು ಬದಲಾಯಿಸಬಲ್ಲರು ಎಂದರು.

ಸ್ಟಾರ್ಟ್ ಅಪ್ ಪರಿಸರದ ಅಭಿವೃದ್ಧಿಯ ಅವಶ್ಯಕತೆಯನ್ನು ವಿವರಿಸುತ್ತಾ, ವಿವಿಧ ರಾಜ್ಯಗಳ ಮಧ್ಯೆ ಸ್ಪರ್ಧಾತ್ಮಕ ಸ್ಫೂರ್ತಿ ಮತ್ತು ಸ್ಟಾರ್ಟ್ ಅಪ್​ನ್ನು ಉತ್ತೇಜಿಸುವ ಅಗತ್ಯತೆ ಹಾಗೂ ಸ್ಟಾರ್ಟ್ ಅಪ್​ಗಳಿಗೆ ಎರಡನೇ ಸುತ್ತಿನ ಇನ್ ಕ್ಯುಬೇಟರ್​ಗಳನ್ನು ಪ್ರೋತ್ಸಾಹಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು. ಇದಕ್ಕಾಗಿ ದೇಶದ 40ಕ್ಕೂ ಅಧಿಕ ಕ್ಯಾಂಪಸ್​ನ್ನು ಆಯ್ಕೆ ಮಾಡಿ, ಭವಿಷ್ಯದಲ್ಲಿ ಹೆಚ್ಚಿನ ಇನ್ ಕ್ಯುಬರೇಟರ್​ಗಳನ್ನು ಪ್ರಾರಂಭಿಸುವ ಬಗ್ಗೆ ಸಲಹೆ ನೀಡಿದರು.

ಕೇಂದ್ರ ಸರಕಾರವು ದೊಡ್ಡ ಉದ್ಯಮಿಗಳಂತೆಯೇ ಸಣ್ಣಪುಟ್ಟ ವ್ಯಾಪಾರಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಓಪನ್ ಡೇಟಾ ಇ-ಕಾಮರ್ಸ್‌ ವ್ಯವಸ್ಥೆಗೆ ಚಾಲನೆ ನೀಡಿದ್ದು, ಇದೂ ಸಹ ಬೆಂಗಳೂರಿನಿಂದಲೇ ಆರಂಭವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಈಗಿಂದಲೇ ತಯಾರಿ ಅಗತ್ಯ: ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ಭಾರತ 2047ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವನ್ನಾಗಿಸುವುದೇ ವಿಷನ್ ಇಂಡಿಯಾ@2047 ಗುರಿ. ಭಾರತ 2047ಕ್ಕೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಈಗಿನಿಂದಲೇ ಎಲ್ಲ ಕ್ಷೇತ್ರಗಳಲ್ಲೂ ತಯಾರಿ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.‌

30 ಟ್ರಿಲಿಯನ್ ಡಾಲರ್ ಆರ್ಥಿಕತೆ ದೇಶವಾದಾಗ ಅಭಿವೃದ್ದಿ ಹೊಂದಿದ ರಾಷ್ಟ್ರವಾಗಿ ಭಾರತ ಬದಲಾಗಿರುತ್ತೆ. ದೇಶಕ್ಕೆ ಹೇರಳವಾದ ವಿದ್ಯುತ್ ಅವಶ್ಯಕತೆ ಇದ್ದು, ಅದಕ್ಕಾಗಿ ಕಲ್ಲಿದ್ದಲು ಉತ್ಪಾದನೆಯನ್ನೂ ಹೆಚ್ಚಿಸುವತ್ತ ಕೇಂದ್ರ ಕಲ್ಲಿದ್ದಲು ಸಚಿವಾಲಯ ಗಮನ ಹರಿಸಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರವು ಮುಂಬರುವ 25 ವರ್ಷಗಳಲ್ಲಿ ಭಾರತವನ್ನು ಹೇಗೆ ಪ್ರಗತಿಯ ಪಥದಲ್ಲಿ ಮುನ್ನಡೆಸಬಹುದು ಎಂಬ ಬಗ್ಗೆ ಸ್ಟಾರ್ಟಪ್‌ಗಳು ಮತ್ತು ಉದ್ಯಮಶೀಲತೆ ಕೇಂದ್ರೀಕರಿಸಲಿದೆ ಎಂದು ಇದೇ ವೇಳೆ, ಹೇಳಿದರು.

ಇದನ್ನೂ ಓದಿ: ಮತದಾರರ ಪರಿಷ್ಕರಣೆ ಅಕ್ರಮ ಬಗ್ಗೆ 2013 ರಿಂದ ಸಮಗ್ರ ತನಿಖೆ ಕೈಗೊಳ್ಳಿ: ಬಿಜೆಪಿ ನಿಯೋಗ ದೂರು

Last Updated : Nov 19, 2022, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.