ಬೆಂಗಳೂರು: ಕೊರೊನಾ ವೈರಸ್ನಿಂದ ಮಂಕಾಗಿರುವ ಜನರಿಗೆ ಪಿಂಕ್ ಮೂನ್ ಕಾಣಿಸಿ ಸಂತಸ ನೀಡಿದೆ.
ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಿವಾಸಿ ಮಂಜುಳಾ ರಾಘವೇಂದ್ರ ಅವರು ರಾತ್ರಿ 9.55ಕ್ಕೆ ಪಿಂಕ್ ಮೂನ್ ಆವರಿಸಿದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಪಿಂಕ್ ಮೂನ್ ಎಂಬ ಅಪರೂಪದ ಖಗೋಳ ವಿಸ್ಮಯ ಗೋಚರಿಸಿದ ಪರಿಣಾಮ ಹಲವಾರು ಮಂದಿ ಮೋಡ ಮುಸುಕುವ ಮುನ್ನವೇ ತಮ್ಮ ಕಣ್ಣು ಹಾಗೂ ಕ್ಯಾಮೆರಾ ಕಣ್ಣಿನ ಮೂಲಕ ಸೆರೆ ಹಿಡಿದರು.

ಶುಭ್ರ ಆಗಸದಲ್ಲಿ ಗುಲಾಬಿ ಬಣ್ಣದ ಚಂದಿರನನ್ನು ಕಂಡು ಜನರು ಆಶ್ಚರ್ಯ ಪಟ್ಟರು. ತಮ್ಮ ಮನೆಯ ತಾರಸಿ ಮೇಲೇರಿ ಜನ ಪಿಂಕ್ ಮೂನ್ ನೋಡಿದರು.

ಭೂಮಿಯ ಅತೀ ಸಮೀಪಕ್ಕೆ ಬರುವ ಚಂದ್ರ ಅಂಡಾಕಾರದಲ್ಲಿರುತ್ತಾನೆ. ಆಗ ಸೂಪರ್ ಮೂನ್ ಎಂದು ಕರೆಯಲಾಗುವುದು. ಚೈತ್ರಾ ಪೂರ್ಣಿಮೆಯ ದಿನದಂದು ಚಂದ್ರ ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದಾನೆ. ಹೀಗಾಗಿ, ಪಿಂಕ್ ಮೂನ್ ಎಂದು ಕರೆಯಲಾಯಿತು.