ETV Bharat / state

ಉಸಿರಾಟ ತಪಾಸಣೆ ಸ್ಥಗಿತಗೊಳಿಸಲು ಕೋರಿ ಪಿಐಎಲ್​​​: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​​

ಕೆಐಎಎಲ್​ ಸಿಬ್ಬಂದಿಗೆ ಅವೈಜ್ಞಾನಿಕವಾಗಿ ಉಸಿರಾಟ ತಪಾಸಣೆ ನಡೆಸಲಾಗುತ್ತಿದೆ. ಟ್ರಾಫಿಕ್ ಪೊಲೀಸರು ಡ್ರಂಕ್​ ಅಂಡ್ ಡ್ರೈವ್ ವೇಳೆ ಬಳಸುವ ಬ್ರೇತ್​​ ಅನಲೈಸರ್​ನ್ನೇ ಸಿಬ್ಬಂದಿಯ ಪರೀಕ್ಷೆಗೆ ಬಳಸುತ್ತಿದ್ದಾರೆ. ಹಾಗಾಗಿ ಕೊರೊನಾ ಸೋಂಕು ಕಡಿಮೆ ಆಗುವವರೆಗೆ ಇದನ್ನು ನಿಲ್ಲಿಸುವಂತೆ ಪಿಐಎಲ್​​ ಸಲ್ಲಿಸಲಾಗಿತ್ತು.

High Court
ಹೈಕೋರ್ಟ್
author img

By

Published : Mar 23, 2020, 8:35 PM IST

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅವೈಜ್ಞಾನಿಕವಾಗಿ ಉಸಿರಾಟ ಪರೀಕ್ಷೆ (ಬ್ರೇತ್​ ಅನಲೈಸ್) ಮಾಡುತ್ತಿರುವುದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಇದೇ ವೇಳೆ ಕೊರೊನಾ ವೈರಸ್​ ಹರಡದಂತೆ ತಡೆಯಲು ಬ್ರೇತ್​ ಅನಲೈಸರ್ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಡೆಸದಂತೆಯೂ ಏರ್​ಪೋರ್ಟ್ ಆಡಳಿತ ವಿಭಾಗಕ್ಕೆ ಸೂಚಿಸಿದೆ. ದೇಶವು ಕೊರೊನಾ ವೈರಸ್ ಸೋಂಕು ಮುಕ್ತವಾಗುವವರೆಗೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಉಸಿರಾಟ ತಪಾಸಣಾ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಏರ್ ಟ್ರಾಫಿಕ್ ಕಂಟ್ರೋಲರ್ಸ್‌ ಗಿಲ್ಡ್ (ಇಂಡಿಯಾ) ಸಂಸ್ಥೆಯ ಬೆಂಗಳೂರು ಶಾಖೆ ಕಾರ್ಯದರ್ಶಿ ಕೆ.ಟಿ.ಅನೂಪ್ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಕೆಐಎಎಲ್​ ಸಿಬ್ಬಂದಿಗೆ ಅವೈಜ್ಞಾನಿಕವಾಗಿ ಉಸಿರಾಟ ತಪಾಸಣೆ ನಡೆಸಲಾಗುತ್ತಿದೆ. ಟ್ರಾಫಿಕ್ ಪೊಲೀಸರು ಡ್ರಂಕ್​​ ಅಂಡ್ ಡ್ರೈವ್ ವೇಳೆ ಬಳಸುವ ಬ್ರೇತ್​ ಅನಲೈಸರ್​ನ್ನೇ ಸಿಬ್ಬಂದಿಯ ಪರೀಕ್ಷೆಗೆ ಬಳಸುತ್ತಿದ್ದಾರೆ. ಅದರಲ್ಲೂ ಒಂದೇ ಉಪಕರಣವಿದ್ದು, ಎಲ್ಲರಿಗೂ ಅದನ್ನೇ ಬಳಸುತ್ತಿರುವುದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ. ಹೀಗಾಗಿ ಬ್ರೇತ್​​ ಅನಲೈಸರ್ ಬಳಸದಂತೆ ನಿರ್ದೇಶಿಸಬೇಕು ಎಂದು ಕೋರಿದರು.

ವಾದ ಆಲಿಸಿದ ಪೀಠ, ಕೇಂದ್ರ ವಿಮಾನಯಾನ ಸಚಿವಾಲಯ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ, ರಾಜ್ಯ ಸರ್ಕಾರ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.