ETV Bharat / state

ಆನ್​ಲೈನ್​​ ಬೆಟ್ಟಿಂಗ್ ನಿಷೇಧ ಕೋರಿ ಪಿಐಎಲ್​​: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್! - A public interest petition seeking to ban online betting

ರಾಜ್ಯದಲ್ಲಿ ಸೂಕ್ತ ನಿಯಮಾವಳಿ ರೂಪಿಸುವ ತನಕ ಎಲ್ಲಾ ರೀತಿಯ ಆನ್​ಲೈನ್​ ಬೆಟ್ಟಿಂಗ್ ನಿಷೇಧಿಸುವಂತೆ ಕೋರಿ ದಾವಣಗೆರೆ ನಿವಾಸಿ ಡಿ. ಶಾರದಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಜನವರಿ 12ರೊಳಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

High Court
ಹೈಕೋರ್ಟ್
author img

By

Published : Dec 4, 2020, 9:47 PM IST

ಬೆಂಗಳೂರು: ಆನ್​ಲೈನ್​ ಬೆಟ್ಟಿಂಗ್​ ನಿಷೇಧ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ರಾಜ್ಯದಲ್ಲಿ ಸೂಕ್ತ ನಿಯಮಾವಳಿ ರೂಪಿಸುವ ತನಕ ಎಲ್ಲಾ ರೀತಿಯ ಆನ್​ಲೈನ್​ ಬೆಟ್ಟಿಂಗ್ ನಿಷೇಧಿಸುವಂತೆ ಕೋರಿ ದಾವಣಗೆರೆ ನಿವಾಸಿ ಡಿ. ಶಾರದಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಜನವರಿ 12ರೊಳಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಇದನ್ನೂ ಓದಿ: ಮರಾಠ ನಿಗಮದ ವಿರುದ್ಧ ಕನ್ನಡಿಗರ ಕಿಚ್ಚು: ಬಂದ್ ಯಶಸ್ವಿಯಾಗುತ್ತಾ? ಪ್ರತಿಭಟನೆಗೆ ಮಾತ್ರವೇ ಸೀಮಿತವಾಗುತ್ತಾ?

ಅರ್ಜಿದಾರರು, ಆನ್​ಲೈನ್​ ಜೂಜು ನಿಯಂತ್ರಿಸಲು ಸರ್ಕಾರ ಯಾವುದೇ ನಿಯಮ ಅಥವಾ ಕಾನೂನು ರೂಪಿಸಿಲ್ಲ. ಇದರಿಂದಾಗಿ ಯುವಕರು ಮೋಸ ಹೋಗುತ್ತಿದ್ದಾರೆ. ಇದನ್ನು ನಿಯಂತ್ರಿಸುವ ವಿಧಾನಗಳನ್ನು ಅಧ್ಯಯನ ನಡೆಸಲು ಗುಜರಾತ್ ಹಾಗೂ ತಮಿಳುನಾಡು ಹೈಕೋಟ್​ಗಳು ತಮ್ಮ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿವೆ.

ಆನ್​ಲೈನ್​ ಜೂಜು ಅದೃಷ್ಟದ ಆಟವೇ ಅಥವಾ ಕೌಶಲ್ಯ ಒಳಗೊಂಡಿರುವುದೇ ಎಂಬುದರ ಬಗ್ಗೆ ಮೇಲ್ವಿಚಾರಣೆ ನಡೆಸಲು ಯಾವುದೇ ಕಾರ್ಯವಿಧಾನ ಇಲ್ಲ. ಈ ಕುರಿತು ನಿಯಮ ರೂಪಿಸಲು ಸರ್ಕಾರವೂ ಮುಂದಾಗಿಲ್ಲ. ಆದ್ದರಿಂದ ಆನ್​ಲೈನ್​ ಜೂಜು ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.