ETV Bharat / state

ಯಾವುದೇ ಫೋನ್ ಕದ್ದಾಲಿಕೆ ಆಗಿಲ್ಲ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟನೆ - prime minister Narendra modi

ಬಿಜೆಪಿಗರ ಪೋನ್ ಟ್ಯಾಪಿಂಗ್ ವಿಚಾರದ ಕುರಿತು ಮಾತನಾಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್​, ರಾಜಕಾರಣಕ್ಕಾಗಿ ಮಾತನಾಡುವ ಬಿಜೆಪಿಗರು ಈ ವಿಚಾರವಾಗಿ ದೂರು ಕೊಡಬೇಕಿತ್ತು ಎಂದು ಕಿಡಿಕಾರಿದ್ದಾರೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್
author img

By

Published : Aug 16, 2019, 3:34 PM IST

ಬೆಂಗಳೂರು : ಯಾವುದೇ ಫೋನ್ ಟ್ಯಾಪಿಂಗ್ ಆಗಿಲ್ಲ. ರಾಜಕಾರಣ ಮಾಡುವುದು ಬಿಟ್ಟು ದೂರು ಕೊಡಬೇಕಿತ್ತು ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಿಜೆಪಿಗರ ವಿರುದ್ಧ ಗುಡುಗಿದ್ದಾರೆ.

ತಮ್ಮ ನಿವಾಸದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ಮಾಧ್ಯಮಗಳಿಗೆ ಯಾವ ರೀತಿ ಲೀಕ್ ಆಯ್ತು ಗೊತ್ತಿಲ್ಲ. ನಾನು ಈ ಬಗ್ಗೆ ಅಧಿಕಾರಿಗಳನ್ನು ಕೂಡ ವಿಚಾರಿಸಿದ್ದೇನೆ. ಅವರು ಏನು ಆಗಿಲ್ಲ ಎಂದಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರು ಈ ಬಗ್ಗೆ ಸೂಕ್ತ ತನಿಖೆ ನಡೆಸಲಿ ಎಂದರು.

ಆರ್. ಅಶೋಕ್ ಕೇವಲ ರಾಜಕಾರಣಕ್ಕಾಗಿ ಈ ರೀತಿಯ ಹೇಳಿಕೆ ಕೊಡೋದು ಸರಿಯಲ್ಲ. ಅವರು ದೂರು ಕೊಡಬೇಕಿತ್ತು‌‌. ನಮ್ಮದೆಲ್ಲ ಫೋನ್ ಗಳು ಏನೇನು ಆಯ್ತು ಅನ್ನೋ ಪಟ್ಟಿ ಕೊಡಲಾ?. ನಮ್ಮದೆಲ್ಲಾ ರೇಡ್ ಆದಾಗ ಐಟಿಗಳು ಸುಮ್ಮನೆ ಸುಮ್ಮನೆ ಬಂದು ಬಿಡ್ತಾರಾ? ಎಂದು ಪ್ರಶ್ನಿಸಿದರು.

ರೈತರಿಗೆ ಹಲವು ಯೋಜನೆಗಳನ್ನು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಘೋಷಣೆ ‌ಮಾಡಿದ್ರು. ಇವಾಗ ಈ ಘೋಷಣೆಗೆ ಅವರು ಹೊಸ ಬಣ್ಣ ಹಾಕಿಕೊಂಡು ಹೊರಟಿದ್ದಾರೆ. ನಾನು ಹೊಸದಾಗಿ ಮಾಡಿದ್ದೇನೆ ಅಂತಾ ಎಲ್ಲಾ ಕಡೆ ಜಾಹೀರಾತು ಕೊಟ್ಟು ಚೆನ್ನಾಗಿ ಕಾಣ್ತಿದ್ದಾರೆ. ಯಡಿಯೂರಪ್ಪ ಚೆನ್ನಾಗಿ ಕಾಣಲಿ ಎಂದು ವ್ಯಂಗ್ಯವಾಗಿ ನುಡಿದರು. ಇಂದಿರಾ ಕ್ಯಾಂಟಿನ್ ಸೇರಿದಂತೆ ಸಿದ್ದರಾಮಯ್ಯನವರು ಘೋಷಣೆ ಮಾಡಿದ ಯಾವುದೇ ಕಾರ್ಯಕ್ರಮಗಳನ್ನು ತಡೆ ಹಿಡಿಯಬಾರದು. ಒಂದು ವೇಳೆ ನಿಲ್ಲಿಸಿದರೆ ನಾವಂತೂ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಸಿಎಂ ಪ್ರಧಾನಿ ನರೇಂದ್ರ ಮೋದಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಏನೇನು ಗಿಫ್ಟ್ ತರ್ತಾರೋ ನೋಡೋಣ. ನಮ್ಮ ಎಂಎಲ್ ಎ ಗಳಿಗೂ ಏನು ಗಿಫ್ಟ್ ತಂದು ಕೊಡ್ತಾರೋ. ನಮ್ಮ ಫ್ರೆಂಡ್ಸ್ ಗಳಿಗೂ ( ಅನರ್ಹಗೊಂಡ ಶಾಸಕರಿಗೆ) ಗಿಫ್ಟ್ ತಂದು ಕೊಡಲಿ. ಆದಷ್ಟು ಬೇಗ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ‌ಮಾಡಲಿ. ನಮ್ಮ ಎಂಎಲ್ಎ ಗಳು ತ್ಯಾಗ ಮಾಡಿದ್ದಾರೆ, ಬಲಿದಾನ ಮಾಡಿದ್ದಾರೆ ಎಂದು ಅನರ್ಹ ಶಾಸಕರಿಗೆ ಟಾಂಗ್ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಆಗ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನನಗೆ ಯಾವುದು ಹುದ್ದೆ ಬೇಡ, ನಾನು ನನ್ನ ಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಶೀಲನೆ ‌ಮಾಡಿದ್ದೇನೆ. ಪ್ರವಾಹ ಪರಿಹಾರದ ಕುರಿತು ಸಿಎಂ ಒಂದು ಮಾತು ಕೊಟ್ಟಿದ್ದಾರೆ. ಪ್ರತಿ ಮನೆಗೂ 5,000 ಬಾಡಿಗೆ ಕೊಡ್ತೇನೆ ಅಂದಿದ್ದಾರೆ. 1 ಲಕ್ಷ ಕೊಡ್ತೇನೆ, 5 ಲಕ್ಷ ಕೊಡ್ತೇನೆ, 10,000 ಇವಾಗ್ಲೇ ಕೊಡ್ತೇನೆ ಎಂದಿದ್ದಾರೆ. ಅವರು ಏನು ಹೇಳಿದ್ದಾರೋ ಅದು ನಡೆದರೆ ಸಾಕಾಗಿದೆ. ನಾವು ಸಹಕಾರ ಕೊಡೋಕೆ ಸಿದ್ದರಿದ್ದೇವೆ ಎಂದು ಹೇಳಿದರು.

ಸಿಎಂ ಪರಿಹಾರ ನಿಧಿಗೆ 50 ಲಕ್ಷ

ನಾನು ಸಿಎಂ ಪರಿಹಾರ ನಿಧಿಗೆ 50 ಲಕ್ಷ ಕೊಡಲು ತೀರ್ಮಾನ ಮಾಡಿದ್ದೇನೆ. ಸದ್ಯದಲ್ಲೇ ಪರಿಹಾರ ಕೊಡುವ ಬಗ್ಗೆ ಮುಖ್ಯಮಂತ್ರಿಗೂ ಪತ್ರ ಬರೆಯುತ್ತೇನೆ ಎಂದರು.

ವಿರೋಧ ಪಕ್ಷದ ಸ್ಥಾನಕ್ಕೆ ನಾಯಕರ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ನಾನು ಇವಾಗ ಸೀನಿಯರ್ ಅಲ್ಲ, ನಾನು ಜೂನಿಯರ್. ಅಧಿಕಾರದಲ್ಲಿ ಇಲ್ಲದೆ ಬರೀ ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದ ಜನರ ಸೇವೆಗೆ ಅವಕಾಶ ಮಾಡಿಕೊಟ್ಟರೆ ಸಾಕು. ಪಕ್ಷದ ನಾಯಕರು ಈ ಬಗ್ಗೆ ಏನೂ ತೀರ್ಮಾನ ಮಾಡ್ತಾರೆ ಅದಕ್ಕೂ ನಾನು ಬದ್ದನಾಗಿ ಇರುತ್ತೇನೆ ಎಂದು ಹೇಳಿದರು.

Intro:ಬೆಂಗಳೂರು : ಯಾವುದೇ ಫೋನ್ ಟ್ಯಾಪಿಂಗ್ ಆಗಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.Body:ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ಮಾಧ್ಯಮಗಳಿಗೆ ಯಾವ ರೀತಿ ಲೀಕ್ ಆಯ್ತು ಗೊತ್ತಿಲ್ಲ‌. ನಾನು ಈ ಬಗ್ಗೆ ಅಧಿಕಾರಿಗಳನ್ನು ಕೂಡ ವಿಚಾರಿಸಿದ್ದೇನೆ. ಅವರು ಏನು ಆಗಿಲ್ಲ ಅಂದಿದ್ದಾರೆ.
ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರು ಈ ಬಗ್ಗೆ ಸೂಕ್ತ ತನಿಖೆ ನಡೆಸಲಿ ಎಂದರು.
ಹಿಂದಿನ ಗೃಹ ಸಚಿವ ಆರ್.ಅಶೋಕ್ ಅವರು ರಾಜಕಾರಣ ಮಾಡುತ್ತಿದ್ದಾರೆ. ಕೇವಲ ರಾಜಕಾರಣಕ್ಕಾಗಿ ಈ ರೀತಿಯ ಹೇಳಿಕೆ ಕೊಡೋದು ಸರಿಯಲ್ಲ. ಅವರು ಅಧಿಕಾರದಲ್ಲಿದ್ದಾಗ ಈ ಬಗ್ಗೆ ದೂರು ಕೊಡಬೇಕಿತ್ತು‌‌. ನಮ್ಮದೆಲ್ಲಾ ಫೋನ್ ಗಳು ಏನೇನು ಆಯ್ತು ಅನ್ನೋ ಪಟ್ಟಿ ಕೊಡಲಾ?. ನಮ್ಮದೆಲ್ಲಾ ರೇಡ್ ಆದಾಗ ಸುಮ್ಮನೆ ಸುಮ್ಮನೆ ಬಂದು ಬಿಟ್ಟಿದ್ದಾರೆ ಯೇ ಎಂದು ಪ್ರಶ್ನಿಸಿದರು.
ಸುಮ್ಮನೆ ಏನೇನು ‌ಬೇಕೋ ಅದನ್ನು ಮಾಡುತ್ತಾರೆ. ಆಮೇಲೆ ಏನು ಇಲ್ಲ ಅಂತಾರೆ. ಅವರು ಏನು ಬೇಕಾದರೂ ತನಿಖೆ ಮಾಡಿಸಲಿ ಎಂದು ಆಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.
ರೈತರಿಗೆ ಹಲವು ಯೋಜನೆಗಳನ್ನು ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಘೋಷಣೆ ‌ಮಾಡಿದ್ರು. ಇವಾಗ ಈ ಘೋಷಣೆಗೆ ಅವರು ಹೊಸ ಬಣ್ಣ ಹಾಕಿಕೊಂಡು ಹೊರಟಿದ್ದಾರೆ. ಇದೀಗ ನಾನು ಹೊಸದಾಗಿ ಮಾಡಿದ್ದೇನೆ ಅಂತಾ ಎಲ್ಲಾ ಕಡೆ ಜಾಹೀರಾತು ಕೊಟ್ಟು ಚೆನ್ನಾಗಿ ಕಾಣ್ತಿದ್ದಾರೆ.
ಯಡಿಯೂರಪ್ಪ ಚೆನ್ನಾಗಿ ಕಾಣಲಿ ಎಂದು ವ್ಯಂಗ್ಯವಾಗಿ ನುಡಿದರು.
ಇಂದಿರಾ ಕ್ಯಾಂಟಿನ್ ಸೇರಿದಂತೆ ಸಿದ್ದರಾಮಯ್ಯನವರು ಘೋಷಣೆ ಮಾಡಿದ ಯಾವುದೇ ಕಾರ್ಯಕ್ರಮಗಳನ್ನು ತಡೆ ಹಿಡಿಯಬಾರದು. ಒಂದು ವೇಳೆ ಆ ಕಾರ್ಯಕ್ರಮಗಳನ್ನು ನಿಲ್ಲಿಸಿದರೆ ನಾವಂತೂ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಮಗೂ ಒಂದು ಬದ್ಧತೆ ಇದೆ. ಯಡಿಯೂರಪ್ಪನವರು ದ್ವೇಷದ ರಾಜಕಾರಣ ‌ಮಾಡೋದಿಲ್ಲ ಎಂದು ಹೇಳಿದ್ದಾರೆ. ಅವರು ನುಡಿದಂತೆ ನಡೆದುಕೊಂಡರೆ ಅಷ್ಟೇ ಸಾಕು. ಒಂದು ವೇಳೆ ನಮ್ಮ ಕಾರ್ಯಕ್ರಮ ರದ್ದು ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಸಿಎಂ ಗೆ ಎಚ್ಚರಿಕೆ ಕೊಟ್ಟರು.
ಯಡಿಯೂರಪ್ಪನವರು ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆಶಿ, ಯಡಿಯೂರಪ್ಪ ಏನೇನು ಗಿಫ್ಟ್ ತರ್ತಾರೋ ನೋಡೋಣ.
ನಮ್ಮ ಎಂಎಲ್ ಎ ಗಳಿಗೂ ಏನು ಗಿಫ್ಟ್ ತಂದು ಕೊಡ್ತಾರೋ.
ನಮ್ಮ ಫ್ರೆಂಡ್ಸ್ ಗಳಿಗೂ ( ಅನರ್ಹಗೊಂಡ ಶಾಸಕರಿಗೆ) ಗಿಫ್ಟ್ ತಂದು ಕೊಡಲಿ. ಆದಷ್ಟು ಬೇಗ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ‌ಮಾಡಲಿ. ನಮ್ಮ ಎಂಎಲ್ಎ ಗಳು ತ್ಯಾಗ ಮಾಡಿದ್ದಾರೆ, ಬಲಿದಾನ ಮಾಡಿದ್ದಾರೆ. ನಾವು ಅವರಿಗೆ ಹೂವಿನ ಗಿಫ್ಟ್ ತಗೊಂಡು ಹೋಗೋಣ ಎಂದು
ಅನರ್ಹ ಶಾಸಕರಿಗೆ ಟಾಂಗ್ ನೀಡಿದರು.
ಕೆಪಿಸಿಸಿ ಅಧ್ಯಕ್ಷ ರಾಗ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನನಗೆ ಯಾವುದು ಹುದ್ದೆ ಬೇಡ ಎಂದ ಡಿಕೆಶಿ, ನಾನು ನನ್ನ ಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಶೀಲನೆ ‌ಮಾಡಿದ್ದೇನೆ. ಪ್ರವಾಹ ಪರಿಹಾರದ ಕುರಿತು ಸಿಎಂ ಒಂದು ಮಾತು ಕೊಟ್ಟಿದ್ದಾರೆ. ಪ್ರತಿ ಮನೆಗೂ 5000 ಬಾಡಿಗೆ ಕೊಡ್ತೇನೆ ಅಂದಿದ್ದಾರೆ. 1 ಲಕ್ಷ ಕೊಡ್ತೇನೆ, 5 ಲಕ್ಷ ಕೊಡ್ತೇನೆ, 10,000 ಇವಾಗ್ಲೇ ಕೊಡ್ತೇನೆ ಎಂದಿದ್ದಾರೆ. ಅವರು ಏನು ಹೇಳಿದ್ದಾರೋ ಅದು ನಡೆದರೆ ಸಾಕಾಗಿದೆ. ನಾವು ಅವರಿಗೆ ಏನು ಸಹಕಾರ ಕೊಡಬೇಕೋ ಅದನ್ನು ಕೊಡೋಕೆ ಸಿದ್ದರಿದ್ದೇವೆ ಎಂದು ಹೇಳಿದರು.
ಸಿಎಂ ಪರಿಹಾರ ನಿಧಿಗೆ 50 ಲಕ್ಷ : ನಾನು ಸಿಎಂ ಪರಿಹಾರ ನಿಧಿಗೆ 50 ಲಕ್ಷ ಕೊಡಲು ತೀರ್ಮಾನ ಮಾಡಿದ್ದೇನೆ. ಸದ್ಯದಲ್ಲೇ ಪರಿಹಾರ ಕೊಡುವ ಬಗ್ಗೆ ಮುಖ್ಯಮಂತ್ರಿಗೂ ಪತ್ರ ಬರೆಯುತ್ತೇನೆ ಎಂದರು.
ವಿರೋಧ ಪಕ್ಷದ ಸ್ಥಾನಕ್ಕೆ ನಾಯಕರ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ನಾನು ಇವಾಗ ಸೀನಿಯರ್ ಅಲ್ಲ, ನಾನು ಜೂನಿಯರ್. ನಾನು ಇವಾಗ ಅಧಿಕಾರದಲ್ಲಿ ಇಲ್ಲದೆ ಬರೀ ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದ ಜನರ ಸೇವೆಗೆ ಅವಕಾಶ ಮಾಡಿಕೊಟ್ಟರೆ ಸಾಕು. ನನಗೆ ಇವಾಗ ಯಾವುದಕ್ಕೂ ಅರ್ಜೆಂಟ್ ಇಲ್ಲ. ನನಗೆ ಯಾವುದು ಬೇಡ‌ ಇರೋರಿಗೆ ಸಹಕಾರ ಕೊಡ್ತೇನೆ ಅಷ್ಟೇ. ಜೊತೆಗೆ ಶಾಸಕಾಂಗ ಪಕ್ಷದ ನಾಯಕರು ಈ ಬಗ್ಗೆ ಏನೂ ತೀರ್ಮಾನ ಮಾಡ್ತಾರೆ ಅದಕ್ಕೂ ನಾನು ಬದ್ದನಾಗಿ ಇರುತ್ತೇನೆ ಎಂದು ಹೇಳಿದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.