ETV Bharat / state

ಜನಪ್ರತಿನಿಧಿಗಳ ಫೋನ್​ ಕದ್ದಾಲಿಕೆ: 54 ಪೊಲೀಸ್ ಇನ್ಸ್‌ಪೆಕ್ಟರ್​ಗಳಿಗೆ ನೋಟಿಸ್​ ಜಾರಿ ಮಾಡಿದ ಸಿಬಿಐ

ರಾಜ್ಯದ 54 ಪೊಲೀಸ್‌ ಇನ್ಸ್‌ಪೆಕ್ಟರ್​ಗಳಿಗೆ ನೋಟಿಸ್​ ಜಾರಿ ಮಾಡಿ ನವೆಂಬರ್ 4,5 ಮತ್ತು 6 ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚಿಸಿದೆ ಎಂದು ತಿಳಿದುಬಂದಿದೆ.

ಫೋನ್​ ಕದ್ದಾಲಿಕೆ ಪ್ರಕರಣ
author img

By

Published : Nov 3, 2019, 12:27 PM IST

Updated : Nov 3, 2019, 12:34 PM IST

ಬೆಂಗಳೂರು: ಜನಪ್ರತಿನಿಧಿಗಳ ಫೋನ್​ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ಬಗ್ಗೆ ಟೆಲಿಗ್ರಾಫ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಕೇಂದ್ರ ತನಿಖಾ ಸಂಸ್ಥೆ ಅಧಿಕಾರಿಗಳು ಒಟ್ಟು 54 ಮಂದಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ವಿಚಾರಣೆ ಹಾಜರಾಗುವಂತೆ ತಿಳಿಸಿ ನೋಟಿಸ್ ಜಾರಿ ಮಾಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇರೆಗೆ ಈ ಹಿಂದೆ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್, ಆಡುಗೋಡಿ ಟೆಕ್ನಿಕಲ್ ಸೆಲ್​ನ ಎಸಿಪಿ ಇನ್ಸ್ ಪೆಕ್ಟರ್​ಗಳನ್ನ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.

ಇದೀಗ ಬೇರೆ ಬೇರೆ ಠಾಣೆಯ ಒಟ್ಟು 54 ಇನ್ಸ್‌ಪೆಕ್ಟರ್​ಗಳಿಗೆ ನೋಟಿಸ್​ ಜಾರಿ ಮಾಡಿ ನವೆಂಬರ್ 4,5 ಮತ್ತು 6 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಈ ಎಲ್ಲಾ ಪೊಲೀಸರು ತನಿಖೆಯ ಉದ್ದೇಶದಿಂದ ಹಲವು ಪ್ರಕರಣಗಳಲ್ಲಿ ತಮ್ಮ ವ್ಯಾಪ್ತಿಗೊಳಪಟ್ಟ ಆರೋಪಿಗಳ ಫೋನ್ ಟ್ಯಾಪಿಂಗ್​ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಇವರಿಗೆ ನೋಟಿಸ್​ ನೀಡಿರುವ ಸಿಬಿಐ, ಫೋನ್​ ಟ್ಯಾಪಿಂಗ್ ಯಾವ ಉದ್ದೇಶಕ್ಕಾಗಿ ಮಾಡಲಾಗಿದೆ? ನಿಮಗೆ ಸಿಕ್ಕ ಮಾಹಿತಿ ಏನು? ಎಂದು ಹೇಳುವಂತೆ ಇನ್ಸ್‌ಪೆಕ್ಟರ್​ಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Intro:ಫೋನೊ ಟ್ಯಾಪಿಂಗ್ ಪ್ರಕರಣ
ಸಿಬಿಐ ಅಧಿಕಾರಿಗಳಿಂದ ತನಿಖೆ ಚುರುಕು

ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ ಫೊನೊ ಟ್ಯಾಪಿಂಗ್ ಪ್ರಕರಣ ಸಂಬಂಧಿಸಿದಂತೆ ಸಿಬಿ ಲಐ ಅಧಿಕಾರಿಗಳು ಮತ್ತೆ ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಈಗಾಗ್ಲೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇರೆಗೆ ಹಿರಿಯ ಅಧಿಕಾರಿ ಅಲೋಕ್ ಕುಮಾರ್ , ಹಾಗೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇರೆಗೆ ಆಡುಗೋಡಿ ಟೆಕ್ನಿಕಲ್ ಸೆಲ್ ನ ಎಸಿಪಿ, ಇನ್ಸ್ಪೆಕ್ಟರ್, ಗಳನ್ನ ವಿಚಾರಣೆಗೆ ಒಳಪಡಿಸಿದ್ರು.

ಆದ್ರೆ ಇದೀಗ ಬೇರೆ ಬೇರೆ ಠಾಣೆಯ ಒಟ್ಟು 54 ಇನ್ಸ್ಪೆಕ್ಟರ್ ಗಳಿಗೆ ಕೂಡ ನೋಟಿಸ್ ಜಾರಿ ಮಾಡಿ ನವೆಂಬರ್_4,5,6,ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ
ಈ ಇನ್ಸ್ಪೆಕ್ಟರ್ ಗಳು ವಿವಿಧ ಅಪರಾಧ ಪ್ರಕರಣಗಳ ತನಿಖಾಧಿಕಾರಿಗಳಾಗಿದ್ದು ಕೊಲೆ ,ಕೊಲೆಯತ್ನ ರೌಡಿಸಂ, ಹೀಗೆ ನಾನಾ ಅಪರಾಧ ಪ್ರಕರಣದಲ್ಲಿ ಭಾಗಿಯಾದವರ ಪೋನೊ ಟ್ಯಾಪ್ ಮಾಡಲಾಗಿತ್ತು.
ಹೀಗಾಗಿ ಯಾವ ಪ್ರಕರಣಕ್ಕೆ ಪೊನೊ ಟ್ಯಾಪ್ ಮಾಡಿದ್ರಿ. ಅವ್ರಿಂದ ಏನ್ ಮಾಹಿತಿ ಸಿಕ್ತು ಸಂಪುರ್ಣ ವರದಿ ನೀಡಿ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆಂದು ತಿಳಿದು ಬಂದಿದೆBody:,KN_BNG_05_PHONE_7204498Conclusion:KN_BNG_05_PHONE_7204498
Last Updated : Nov 3, 2019, 12:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.