ಬೆಂಗಳೂರು: ಆಡುಗೋಡಿ ಸಿಸಿಬಿ ಟೆಕ್ನಿಕಲ್ನಲ್ಲಿ ಫೋನ್ ಟ್ಯಾಪ್ ಆಗಿರುವ ಮಾಹಿತಿ ಮೇರೆಗೆ, ಸಿಬಿಐ ತಂಡ ಆಡುಗೋಡಿ ಭೇಟಿ ನೀಡಿ ಅಲ್ಲಿ ಸಿಸಿಟಿವಿ ಹಾಗೂ ಕೆಲ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಆಡುಗೋಡಿಯಲ್ಲಿ 16 ಫೋನ್ ಟ್ಯಾಪಿಂಗ್ ಮಷಿನ್ಗಳು ಇದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು 300 ರಾಜಕಾರಣಿಗಳ ಫೋನ್ ಟ್ಯಾಪಿಂಗ್ ನಡೆದಿದೆ ಎಂದಿದ್ದರು. ಹೀಗಾಗಿ ಹಿಂದಿನ ವರ್ಷದಿಂದ ಈ ವರ್ಷದವರೆಗೆ ಫೋನ್ ಕಾಲ್ ರೆಕಾರ್ಡ್ ತೆಗೆಯಲು ಸಿಬಿಐ ಮುಂದಾಗಿದೆ ಎಂದು ಹೇಳಲಾಗ್ತಿದೆ.
ಹಾಗೆಯೇ ಬೆಂಗಳೂರಲ್ಲಿ ಪೋಂಜಿ ಸ್ಕೀಮ್ ಪ್ರಕರಣ ನಡೆದಾಗ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಪೋಂಜಿ ಸ್ಕೀಮ್ನಲ್ಲಿ ಭಾಗಿಯಾದ ಆರೋಪಿಗಳ ಫೋನ್ ಟ್ಯಾಪಿಂಗ್ ನಡೆಸಲಾಗಿತ್ತು ಎನ್ನಲಾಗ್ತಿದೆ. ಈ ಬಗ್ಗೆಯೂ ಮಾಹಿತಿ ಕಲೆ ಹಾಕಿರುವ ಸಿಬಿಐ ಅದಿಕಾರಿಗಳು ಯಾರಿಂದ ಅನುಮತಿ ಪಡೆದು ಫೋನ್ ಟ್ಯಾಪಿಂಗ್ ಮಾಡಿದ್ರಿ ಎಂದು ಭಾಗಿಯಾದ ಇನ್ಸ್ಟ್ರಕ್ಟರ್ಗಳನ್ನು ಪ್ರಶ್ನಿಸಿದ್ದಾರೆ. ಇನ್ನು ಸೈಬರ್ ಕ್ರೈಂ ಪೊಲೀಸ್ ಇನ್ಸ್ಪೆಕ್ಟರ್ ಅವರಿಂದಲೂ ಸಹ ಕೆಲ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.