ETV Bharat / state

ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಶಾಸಕ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಪ್ರತಿಭಟನೆ..

ಬ್ಯಾಟರಾಯನಪುರ ಕ್ಷೇತ್ರದ ಹಲವು ಗ್ರಾಮದ ಜನರಿಗೆ 94 ಸಿಸಿ ಅರ್ಜಿಗಳ ಪ್ರಕಾರ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರು ಉತ್ತರ ತಾಲೂಕಿನ ಬೆಳ್ಳಹಳ್ಳಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯ್ತು.

ಹಕ್ಕು ಪತ್ರ ವಿತರಿಸುವಂತೆ ಪ್ರತಿಭಟನೆ
author img

By

Published : Sep 23, 2019, 8:09 PM IST

ಬೆಂಗಳೂರು:ಬ್ಯಾಟರಾಯನಪುರ ಕ್ಷೇತ್ರದ ಹಲವು ಗ್ರಾಮದ ಜನರಿಗೆ 94 ಸಿಸಿ ಅರ್ಜಿಗಳ ಪ್ರಕಾರ ಹಕ್ಕು ಪತ್ರ ನೀಡುವುದು ಸೇರಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ರು.

ಬೆಂಗಳೂರು ಉತ್ತರ ತಾಲೂಕಿನ ಬೆಳ್ಳಹಳ್ಳಿ ಸರ್ಕಲ್ ಬಳಿ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ರು. ನಮ್ಮ ಕ್ಷೇತ್ರದ ಹಲವಾರು ಗ್ರಾಮದ ಜನರು 94 ಸಿಸಿ ಅರ್ಜಿಗಳನ್ನು ಸಲ್ಲಿಸಿದ್ದು, ಅವರಿಗೆ ಹಕ್ಕು ಪತ್ರವನ್ನು ನೀಡಿಲ್ಲ. ಸರ್ಕಾರ ಹಾಗೂ‌ ಬಿಬಿಎಂಪಿ‌ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದ್ರು. ತಮ್ಮ ಕ್ಷೇತ್ರದ ಬಿಬಿಎಂಪಿ‌ಗೆ ಸೇರುವ ವಾರ್ಡ್‌ಗಳ ಅಭಿವೃದ್ಧಿಯ ಅನುದಾನವನ್ನು ಕಡಿಮೆ ಮಾಡಲಾಗಿದ್ದು ಏಕೆ? ಬೇರೆ ಕ್ಷೇತ್ರದ ವಾರ್ಡ್‌ಗಳಿಗೆ ಹೆಚ್ಚು ನಮ್ಮ ಕ್ಷೇತ್ರದ ವಾರ್ಡ್‌ಗೆ ಕಡಿಮೆ ಅನುದಾನ ಎಂದು ಅಧಿಕಾರಿಗಳಿಗೆ ಶಾಸಕರು ಪ್ರಶ್ನೆಗಳ ಸುರಿಮಳೆಗೈದರು.

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಪ್ರತಿಭಟನೆ..

ಅದೇ ರೀತಿ ಬಿಬಿಎಂಪಿ‌ ಬೆಳ್ಳಹಳ್ಳಿ ಕಲ್ಲು ಕ್ವಾರಿಯಲ್ಲಿ ಕಸ ಹಾಕುವುದಕ್ಕೆ ಮಾತ್ರ ಈ ಗ್ರಾಮದ ಜಾಗ ಬೇಕು. ಅಭಿವೃದ್ಧಿ ವಿಚಾರದಲ್ಲಿ ಈ ಗ್ರಾಮಗಳು ಬೇಡ ಎಂದು ಬಿಬಿಎಂಪಿ‌ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಇದೇ ವೇಳೆ ಸ್ಥಳಕ್ಕೆ ಬಂದ ಬಿಬಿಎಂಪಿ ಸ್ಪೆಷಲ್‌ ಕಮಿಷನರ್ ರಣದೀಪ್ ಅವರು ಸಮಸ್ಯೆಗಳನ್ನು ಆಲಿಸಿ‌ದ್ರು. ಹಾಗೇ ಸಮಸ್ಯೆಗಳನ್ನು ನಮ್ಮ ಕಮಿಷನರ್ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಯಲಹಂಕ ತಹಶೀಲ್ದಾರ್​ ರಘುಮೂರ್ತಿ ಕೂಡ ಹಕ್ಕು ಪತ್ರಗಳನ್ನು ಪರಿಶೀಲಿಸಿ ಅಕ್ಟೋಬರ್ 15ರವರೆಗೆ ಕಂಪ್ಲೀಟ್ ಮಾಡಿ ನಿಮಗೆ ವರದಿ ನೀಡುತ್ತೇವೆ. ಯಾರು ಫಲಾನುಭವಿಗಳಾಗಿದ್ದಾರೋ ಅವರಿಗೆ ನ್ಯಾಯಯುತವಾಗಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದ್ರು.

Intro:KN_BNG_02_23_protest_Ambarish_7203301
Slug: ಬಿಬಿಎಂಪಿಗೆ‌ ಮತ್ತೊಮ್ಮೆ ಕಸದ ಸಮಸ್ಯೆ ಶುರು.. ಬೆಳ್ಳಹಳ್ಳಿ ಕ್ವಾರಿಯಲ್ಲಿ‌ ತ್ಯಾಜ್ಯ ವಿಲೇವಾರಿ ವಿರೋಧಿಸಿ ಸ್ಥಳೀಯರಿಂದ ಪ್ರತಿಭಟನೆ: ಪ್ರತಿಭಟನೆ ಗೆ ಮಾಜಿ ಸಚಿವರಿಂದ‌ ಬೆಂಬಲ

ಬೆಂಗಳೂರು: ಮಂಡೂರು ಆದ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮತ್ತೊಮ್ಮೆ ಕಸದ ಸಮಸ್ಯೆ ಕಾಣಿಸಿಕೊಂಡಿದೆ.. ತಾತ್ಕಾಲಿಕವಾಗಿ ಬೆಂಗಳೂರು ಉತ್ತರ ತಾಲ್ಲೂಕಿನ ಬೆಳ್ಳಹಳ್ಳಿಯ ಕಲ್ಲು ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಗೆ ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಕೃಷ್ಣಬೈರೇಗೌಡರು ಬೆಂಬಲ ನೀಡಿದ್ದಾರೆ..

ಕೆಲವು ದಿನಗಳಿಂದ ತಣ್ಣಗಾಗಿದ್ದ ಪ್ರತಿಭಟನೆಯ ಕಾವು‌ ಮತ್ತೆ ಆರಂಭವಗಿದ್ದು, ತ್ಯಾಜ್ಯ ವಿಲೇವಾರಿ ವಿರೋಧಿಸಿ ಇಂದು ಕೂಡ ಹೋರಾಟ ನಡೆಸಿದ್ರು.. ಈ ಪ್ರತಿಭಟನೆಯಲ್ಲಿ ಸ್ಥಳಿಯ ಶಾಸಕ ಹಾಗೂ ಮಾಜಿ ಸಚಿವ ಕೃಷ್ಣಬೈರೇಗೌಡರು ಪಾಲ್ಗೊಂಡಿದ್ದು, ಸರ್ಕಾರದ ವಿರುದ್ದ ಹಾಗು ಬಿಬಿಎಂಪಿ‌ ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿದ್ರು.. ಅಲ್ಲದೇ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಹೇಳುತ್ತಾ ಧರಣಿಗೆ ಕುಳಿತುಕೊಂಡಿದ್ದಾರೆ.. ಮಳೆಯ ನಡುವೆಯು ಸ್ಥಳೀಯರೊಂದಿಗೆ ಶಾಸಕರು ‌ಪ್ರತಿಭಟನೆ ನಡೆಸಿದ್ರು..

ಪ್ರತಿ ದಿನ‌ ಬೆಳ್ಳಹಳ್ಳಿ ಕ್ವಾರಿಗೆ ಎರಡು ಸಾವಿರ ಟನ್ ಗೂ ಹೆಚ್ಚು ಮಿಶ್ರ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ.. ಇದರ ಜೊತೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಬಿಬಿಎಂಪಿ‌ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡಲಾಗಿತ್ತು.. ಆದರೆ ಸರ್ಕಾರ ಅದನ್ನು ತಡೆಹಿಡಿದಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳು ಅಭಿವೃದ್ಧಿಯಲ್ಲಿ‌ ಹಿಂದೆ ಬಿದ್ದಿವೆ..‌ಕೂಡಲೇ ಹಣ ಬಿಡುಗಡೆ ಮಾಡಿ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ರು..

ಇದರ ಜೊತೆಯಲ್ಲಿ ಬೆಳ್ಳಹಳ್ಳಿ ಕ್ವಾರಿ ಭರ್ತಿಯಾಗಿದ್ದು, ಅದರ ಪಕ್ಕದಲ್ಲೇ ಇರುವ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಡಂಪಿಂಗ್ ಮಾಡಲಾಗುತ್ತಿತ್ತು.. ಇದೀಗ ಅವರು ವಿರೋಧ‌ ವ್ಯಕ್ತಪಡಿಸುತ್ತಿದ್ದು, ಬೆಂಗಳೂರಿನ ಕಸವನ್ನು ಎಲ್ಲಿ ಹಾಕಬೇಕು ಅನ್ನೋ ಚಿಂತೆ ಬಿಬಿಎಂಪಿಗೆ ಶುರುವಾಗಿದೆ.. Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.