ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎರಡನೇ ದಿನದ ಲಾಕ್ಡೌನ್ ಮುಂದುವರೆದಿದ್ದು, ಸದ್ಯ ಸಿಟಿ ಜನತೆ ಲಾಕ್ಡೌನ್ ಕುರಿತು ಈಟಿವಿ ಭಾರತದ ಜೊತೆ ತಮ್ಮಅನಿಸಿಕೆ ತಿಳಿಸಿದ್ದಾರೆ.
ಲಾಕ್ಡೌನ್ ಹೇರಿರುವುದು ಬಹಳ ಒಳ್ಳೆಯ ವಿಚಾರ. ಸದ್ಯ ನಗರದಲ್ಲಿ ಸಾವಿರಕ್ಕೂ ಹೆಚ್ಚು ಕೇಸ್ಗಳು ದಿನೇ ದಿನೆ ಬರ್ತಿವೆ. ಹೀಗಿರುವಾಗ ಲಾಕ್ಡೌನ್ ಮಾಡಿರುವುದು ಒಳ್ಳೆಯದು. ಆದರೆ, ಜನ ಮಧ್ಯಾಹ್ನ 12ರ ವರೆಗೆ ಹೊರಗಡೆ ಬರ್ತಿದ್ದಾರೆ. ಅಗತ್ಯ ಸೇವೆ ವಸ್ತುಗಳು ಮನೆಗೆ ಬೇಕಲ್ಲವೇ ಅದನ್ನ ಖರೀದಿ ಮಾಡಲು ಹೊರಗಡೆ ಬರ್ತಿದ್ದೇವೆ ಎನ್ನುತ್ತಿದ್ದಾರೆ.
ಇನ್ನು ದಿನಸಿ ಅಂಗಡಿಯ ಮಾಲೀಕ ಮಾತನಾಡಿ, ಏರಿಯಾ ಸಮಸ್ಯೆ ನಿವಾರಣೆ ಮಾಡಲು ಲಾಕ್ಡೌನ್ ಹೇರಿದ್ದು, ನಿಜಕ್ಕೂ ಖುಷಿಯ ವಿಚಾರ. ಆದರೆ, ಸದ್ಯ ಯಾವುದೇ ವ್ಯಾಪಾರ ಇಲ್ಲ. ಎಲ್ಲ ಊರು ಕಡೆ ಹೊರಟಿದ್ದಾರೆ. ಸದ್ಯ ಸರ್ಕಾರ ಜನರಿಗೆ ಉಪಯೋಗವಾಗಲಿ ಎಂದು ಓಪನ್ ಮಾಡಲು ಅವಕಾಶ ಕೊಟ್ಟಿದೆ. ಅದಕ್ಕೆ ಅಂಗಡಿ ಓಪನ್ ಮಾಡಿದ್ದೇವೆ. ನನ್ನ 20 ವರ್ಷದ ವ್ಯಾಪಾರದ ಅನುಭವದಲ್ಲಿ ಸದ್ಯ ಇದೇ ಮೊದಲ ಬಾರಿಗೆ ಈ ರೀತಿ ಸಮಸ್ಯೆ ನೋಡಿದ್ದೇವೆ ಎಂದಿದ್ದಾರೆ.
ತರಕಾರಿ ಮಾರಾಟ ಮಾಡುವ ಹುಡುಗ ಮಾತನಾಡಿ, ಮೊದಲಿನ ವ್ಯಾಪಾರ ಸದ್ಯ ಇಲ್ಲ. ಜನ ಕೊರೊನಾ ಇರುವ ಕಾರಣ ಅಂಗಡಿಗಳಿಗೂ ಬರುವುದಕ್ಕೆ ಹೆದರುತ್ತಿದ್ದಾರೆ. ಆದರೆ, ನಾವು ಸರಕಾರ ಹಾಗೂ ಪೊಲೀಸರ ನಿಯಮ ಪಾಲನೆ ಮಾಡಿ ಮಧ್ಯಾಹ್ನ 12ರ ನಂತರ ತರಕಾರಿ ಮಾರಾಟ ಮಾಡುವುದನ್ನ ಸ್ಥಗಿತ ಮಾಡುತ್ತೇವೆ ಎಂದಿದ್ದಾರೆ.