ETV Bharat / state

ಕಳಪೆ ಉತ್ಪನ್ನ ನೀಡಿ ನುಣುಚಿಕೊಳ್ಳಲು ಮುಂದಾದ ಇ ಕಾಮರ್ಸ್​ ಕಂಪನಿಗೆ ದಂಡ - e commerce company fraud case

ಪ್ರತಿಷ್ಠಿತ ಇ ಕಾಮರ್ಸ್​ ಕಂಪನಿಯೊಂದಕ್ಕೆ ನಗರದ ಗ್ರಾಹಕರ ವಿವಾದಗಳ ಪರಿಹಾರ ಆಯೋಗ ತರಾಟೆಗೆ ತೆಗೆದುಕೊಂಡಿದ್ದು 15 ಸಾವಿರ ರೂ. ದಂಡ ವಿಧಿಸಿದೆ.

Penalty to e commerce company that offered poor product
ಕಳಪೆ ಉತ್ಪನ್ನ ನೀಡಿ ನುಣುಚಿಕೊಳ್ಳಲು ಮುಂದಾದ ಇ ಕಾಮರ್ಸ್​ ಕಂಪೆನಿಗೆ ದಂಡ
author img

By

Published : Sep 24, 2022, 8:07 PM IST

ಬೆಂಗಳೂರು: ಕಳಪೆ ಗುಣಮಟ್ಟದ ಉತ್ಪನ್ನವನ್ನು ಗ್ರಾಹಕರಿಗೆ ರವಾನಿಸಿ, ನಾವು ಉತ್ಪನ್ನಗಳಿಗೆ ಮಾರುಕಟ್ಟೆ ವೇದಿಕೆ ಒದಗಿಸುತ್ತೇವೆ, ಯಾವುದೇ ಉತ್ಪನ್ನವನ್ನು ಸಿದ್ಧಪಡಿಸುವುದಿಲ್ಲ ಎಂಬುದಾಗಿ ವಾದಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮುಂದಾಗಿದ್ದ ಪ್ರತಿಷ್ಠಿತ ಇ-ಕಾಮರ್ಸ್​ ಕಂಪೆನಿಯೊಂದಕ್ಕೆ ನಗರದ ಗ್ರಾಹಕರ ವಿವಾದಗಳ ಪರಿಹಾರ ಆಯೋಗ ತರಾಟೆಗೆ ತೆಗೆದುಕೊಂಡಿದ್ದು 15 ಸಾವಿರ ರೂ. ದಂಡ ವಿಧಿಸಿದೆ.

ಇ ಕಾಮರ್ಸ್​ ಕಂಪನಿ ಉತ್ಪನ್ನ ಸಿದ್ಧಪಡಿಸುವುದಿಲ್ಲ ಎಂದಾದರೆ ಅದು ಕಳಪೆ ಗುಣಮಟ್ಟದ ವಸ್ತುಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಿದೆ. ಇದೊಂದು ಅನ್ಯಾಯದ ನಡೆಯಾಗಿದ್ದು, ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರಗಾರಿಕೆಯಾಗಿದೆ ಎಂದು ನಗರದ ಗ್ರಾಹಕರ ವೇದಿಕೆಯ ಅಧ್ಯಕ್ಷರಾದ ಎಂ.ಶೋಭಾ, ಸದಸ್ಯರಾದ ಬಿ.ದೇವರಾಜು, ವಿ.ಅನುರಾಧ ಅವರಿದ್ದ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ. ಅಲ್ಲದೇ, ಇ-ಕಾಮರ್ಸ್​ ವೇದಿಕೆಯಿಂದ ದಂಡದ ರೂಪದಲ್ಲಿ ಪಡೆದ ಮೊತ್ತವನ್ನು ನೊಂದ ಗ್ರಾಹಕರಿಗೆ ಪರಿಹಾರದ ರೂಪದಲ್ಲಿ ಮೂರು ತಿಂಗಳಲ್ಲಿ ನೀಡಲು ಸೂಚಿಸಿದೆ.

ಪ್ರಕರಣದ ಹಿನ್ನೆಲೆ: ನಗರದ ಟಿಎಂಕ್ಯೂ ಅಧಿಕಾರಿಗಳ ಕ್ವಾಟ್ರಸ್​ನಲ್ಲಿ ನೆಲೆಸಿರುವ ಮೇಜರ್​ ಡಿ. ಭುವನೇಶ್ವರಿ ಎಂಬುವವರು ಇ-ಕಾಮರ್ಸ್​ ವೇದಿಕೆಯಲ್ಲಿ ಅತ್ಯಂತ ಆಕರ್ಷಕವಾಗಿ ಕಂಡಿದ್ದ ಮನೆಯಲ್ಲಿಯೇ ಬಳಸಬಹುದಾದ 40 ಕೆ.ಜಿ ತೂಕದ ದೇಹದಾರ್ಢ್ಯ ಉಪಕರಣವನ್ನು 2,699 ರೂ.ಗಳನ್ನು ಪಾವತಿಸಿ ಆನ್ಲೈನ್​ ಮೂಲಕ ಖರೀದಿಸಿದ್ದರು.

ಉಪಕರಣ ಮನೆಗೆ ಬಂದ ಬಳಿಕ ಬಾಕ್ಸ್ ತೆಗೆದು ನೋಡಿದಾಗ ಉಪಕರಣ ಕಳಪೆ ಗುಣಮಟ್ಟದ್ದಾಗಿತ್ತು. ಜತೆಗೆ, ತೂಕದ ವಸ್ತುಗಳಲ್ಲಿ ಮಣ್ಣು ತುಂಬಿದ್ದು, ಒಡೆದು ಹೋಗಿತ್ತು. ಇದರಿಂದ ನಿರಾಶೆಗೊಳಗಾದ ಗ್ರಾಹಕರು ಕಸ್ಟಮರ್​ ಕೇರ್​ಗೆ ಸಂಪರ್ಕ ಮಾಡಿ ದೂರು ದಾಖಲಿಸಿದರು. ಅಲ್ಲದೇ, ಉಪಕರಣ ಹಿಂಪಡೆದು ಹಣ ಪಾಪಸ್​ ಮಾಡಲು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಸ್ಟಮರ್​ ಕೇರ್​ನ ಪ್ರತಿನಿಧಿ, ತಾವೇ ಸ್ವಂತ ವೆಚ್ಚದಲ್ಲಿ ಉಪಕರಣ ಪ್ಯಾಕ್​ ಮಾಡಿ ಕೊರಿಯರ್​ ಮೂಲಕ ಹಿಂದಿರುಗಿಸಲು ಸೂಚನೆ ನೀಡಿದ್ದರು. ಅಲ್ಲದೇ, ಉಪಕರಣ ಉಗ್ರಾಣ ಸೇರಿದ ಬಳಿಕ ಪ್ಯಾಕೇಜ್​ ಮತ್ತು ಕೊರಿಯರ್​ನ ಶುಲ್ಕವನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರು. ನಂತರ ಸುಮಾರು 45 ಕೆಜಿ ತೂಕರ ಉಪಕರಣವನ್ನು 2,150 ರೂ.ಗಳಲ್ಲಿ ಕೊರಿಯರ್​ ಮತ್ತು 300 ರೂ.ಗಳಲ್ಲಿ ಪ್ಯಾಕೇಜ್​ ಮಾಡಿ ಹಿಂದಿರುಗಿಸಿದ್ದರು. ಈ ಸಂಬಂಧ ಉಗ್ರಾಣ ತಲುಪಿರುವುದಾಗಿ ಕೊರಿಯರ್​ ಸಂಸ್ಥೆಯಿಂದ ಸಂದೇಶವೂ ಲಭ್ಯವಾಗಿತ್ತು.

ಈ ನಡುವೆ ಇ-ಕಾಮರ್ಸ್​ ಕಸ್ಟಮರ್​ ಕೇರ್​ಗೆ ಮತ್ತೆ ಕರೆ ಮಾಡಿ ಪ್ಯಾಕೇಜಿಂಗ್​ಗಾಗಿ 300 ರೂ. ಮತ್ತು ಕೊರಿಯರ್​ ಚಾಜ್​ರ್ಗೆ 2,150 ರೂ.ಗಳಾಗಿದೆ ಎಂದು ವಿವರಿಸಿದ್ದರು. ಇದಕ್ಕೆ ಪ್ರತಿನಿಧಿ ಸಮ್ಮತಿಸಿದ್ದರು. ಜೊತಗೆ ಇ-ಮೇಲ್​ ಮೂಲಕ ಒಪ್ಪಿಗೆ ಸೂಚಿಸಿ, ಕೊರಿಯರ್​ ಬಿಲ್​ನ್ನು ರವಾನಿಸಲು ಸೂಚಿಸಿದ್ದರು. ನಂತರ ಉಪಕರಣದ ವೆಚ್ಚ ಹಾಗೂ ಕೊರಿಯರ್​ ಕಳಿಸಿದ ವೆಚ್ಚ ಸೇರಿ ಒಟ್ಟು 5,137 ಕೊಡಲು ಒಪ್ಪಿಗೆ ಸೂಚಿಸಲಾಗಿತ್ತು.

ಆದರೆ, ಉಪಕರರಣದ ವೆಚ್ಚ 2,699 ಗಳನ್ನು ನೀಡುವುದಾಗಿ ಹೇಳಿದ್ದ ಇ-ಕಾಮರ್ಸ್​ ಕಂಪನಿ, ಕೊರಿಯರ್​ ಮೊತ್ತ 2,137 - ಪ್ಯಾಕಿಂಗ್​ ಮೊತ್ತ 300 ನೀಡುವುದಕ್ಕೆ ನಿರಾಕರಿಸಿದ್ದರು. ಬದಲಾಗಿ ಎರಡಕ್ಕೂ ಒಟ್ಟಾಗಿ ಕೇವಲ 400 ರೂ.ಗಳನ್ನು ಮಾತ್ರ ಪಾವತಿಸಿತ್ತು. ಇನ್ನುಳಿದ 2,037 ರೂ.ಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿತ್ತು.

ಇದನ್ನು ಪ್ರಶ್ನಿಸಿ ಭುವನೇಶ್ವರಿ ಗ್ರಾಹಕರ ಪರಿಹಾರ ವೇದಿಕೆಗೆ ದೂರು ದಾಖಲಿಸಿದ್ದರು. ಅಲ್ಲದೇ, ಮಾನಸಿಕ ಹಿಂಸೆ ಅನುಭವಿಸಿದ್ದಕ್ಕಾಗಿ 10 ಸಾವಿರ ರೂ. ಮತ್ತು ಕೊರಿಯರ್​ ವೆಚ್ಚವಾಗಿ 2,037 ಮೊತ್ತವನ್ನು ಹಿಂದಿರುಗಿಸಲು ಸೂಚನೆ ನೀಡಬೇಕು. ಕಾನೂನು ಹೋರಾಟದ ವೆಚ್ಚವಾಗಿ 5 ಸಾವಿರ ರೂ.ಗಳನ್ನು ನೀಡಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು.

ಇ-ಕಾಮರ್ಸ್​ ಸಂಸ್ಥೆ ಹೇಳಿದ್ದೇನು?: ಪ್ರಕರಣ ಸಂಬಂಧ ಇ-ಕಾಮರ್ಸ್​ ಸಂಸ್ಥೆ ಪರ ವಕೀಲರು ಹಾಜರಾಗಿ, ನಮ್ಮ ಸಂಸ್ಥೆ ಕೇವಲ ಆನ್ಲೈನ್​ ಮಾರುಕಟ್ಟೆ ವೇದಿಕೆಯಾಗಿದೆ. ನಾವು ಯಾವುದೇ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಿಲ್ಲ. ನಮ್ಮ ಮಾರುಕಟ್ಟೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ಪಟ್ಟಿ ಮಾಡಿರುತ್ತಾರೆ.

ಕೊಡು-ಕೊಳ್ಳುವಿಕೆ ವ್ಯವಹಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಉತ್ಪನ್ನ ಕಂಪನಿಯೇ ಬೇರೆ ಇರಲಿದೆ. ಆದ್ದರಿಂದ ಉಪಕರಣದ ಉತ್ಪನ್ನದ ಕಂಪೆನಿಯೊಂದಿಗೆ ಗ್ರಾಹಕರು ಹಕ್ಕುಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕು. ಆದರೆ, ದೂರುದಾರರು ಈ ಅಂಶ ತಿಳಿಯದೇ ನಮ್ಮ ಸಂಸ್ಥೆಯ ನಿರ್ದೇಶಕರನ್ನು ಪ್ರತಿವಾದಿಯನ್ನಾಗಿ ಮಾಡಿದ್ದಾರೆ. ಆದ್ದರಿಂದ ದೂರನ್ನು ರದ್ದುಪಡಿಸಬೇಕು ಎಂದು ವಿವರಿಸಿದರು.

ಇದನ್ನೂ ಓದಿ: ಬುಲೆಟ್​ ಟ್ರೈನ್​​ಗಾಗಿ ಪ್ರಥಮ ಬಾರಿಗೆ ಸಮುದ್ರದಾಳದಲ್ಲಿ ಸುರಂಗ

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ದೂರುದಾರರಿಗೆ ಇ-ಕಾಮರ್ಸ್​ ಕಂಪೆನಿಗೆ ದಂಡ ವಿಧಿಸಿದೆ. ಅಲ್ಲದೇ ಮುಂದಿನ 60 ದಿನಗಳಲ್ಲಿ ದಂಡದ ಮೊತ್ತವನ್ನು ಹಿಂದಿರುಗಿಸಬೇಕು ಎಂದು ಸೂಚನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.