ಯಲಹಂಕ (ಬೆಂಗಳೂರು): ಕೊರೊನಾ ನಿಯಂತ್ರಣಕ್ಕೆ ಯಲಹಂಕ ತಹಶೀಲ್ದಾರ್ ರಘುಮೂರ್ತಿ ನೇತೃತ್ವದ ತಂಡ ಮುಂದಾಗಿದ್ದು, ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ದಂಡ ವಿಧಿಸುತ್ತಿದ್ದಾರೆ. ಕಳೆದ 20 ದಿನದಲ್ಲಿ 3 ಲಕ್ಷದ 80 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.
ಕೊರೊನಾ ಬಗ್ಗೆ ಎಚ್ಚರಿಕೆ ಮತ್ತು ಜಾಗೃತಿ ಮೂಡಿಸುವ ಕಾರಣಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಮಾರ್ಷಲ್‌ಗಳ ತಂಡದೊಂದಿಗೆ 'ಮಾಸ್ಕ್ ಡ್ರೈವ್' ನಡೆಯುತ್ತಿದೆ.
ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ಯಲಹಂಕ ತಾಲೂಕಿನಲ್ಲಿ ಕಳೆದ 20 ದಿನಗಳಲ್ಲಿ 10 ಮಾಸ್ಕ್ ಡ್ರೈವ್ ಮಾಡಿದ್ದು 3 ಲಕ್ಷದ 80 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಪ್ರತಿದಿನ ಸಂಜೆ ಬಿಡಿಕೆ ವೃತ್ತ, ಎನ್.ಇ.ಎಸ್ ವೃತ್ತ, ಓಲ್ಡ್ ಟೌನ್, ನ್ಯೂ ಟೌನ್, ಕೊಗಿಲು ವೃತ್ತ ಸೇರಿದಂತೆ ಹಲವು ಜನನಿಬಿಡ ಪ್ರದೇಶಗಳಿಗೆ ತರಳಿ ಮಾಸ್ಕ್ ಹಾಕದೆ ಬೀದಿಗೆ ಬಂದ ಸಾರ್ವಜನಿಕರಿಗೆ ದಂಡ ವಿಧಿಸಲಾಗುತ್ತಿದೆ.
ಮಾಸ್ಕ್ ಹಾಕದೆ ಬೀದಿಗೆ ಬಂದವರಿಂದ ಹಣ ವಸೂಲಿ ಮಾಡುವುದರ ಜೊತೆಗೆ ಜನರಿಗೆ ಮಾಸ್ಕ್ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸಹ ಮಾಡಲಾಗ್ತಿದೆ ಎಂದು ರಘುಮೂರ್ತಿ ತಿಳಿಸಿದರು.