ETV Bharat / state

ಆರೋಪಿಗಳು ಖುಲಾಸೆ ಬಳಿಕ ತನಿಖಾಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದಡಿ ದಂಡ ವಿಧಿಸಲಾಗದು: ಹೈಕೋರ್ಟ್

ಮಾನವ ಹಕ್ಕುಗಳ ಆಯೋಗವು 10 ಸಾವಿರ ರೂಪಾಯಿ ದಂಡ ವಿಧಿಸಿ ಹೊರಡಿಸಿದ ಆದೇಶ ರದ್ದು ಮಾಡುವಂತೆ ಕೋರಿ ಪೊಲೀಸ್ ಅಧಿಕಾರಿಯೊಬ್ಬರು ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್
ಹೈಕೋರ್ಟ್
author img

By

Published : Feb 21, 2023, 10:49 PM IST

ಬೆಂಗಳೂರು : ಅಪರಾಧ ಪ್ರಕರಣದಲ್ಲಿ ಆರೋಪಿಗಳನ್ನು ವಿಚಾರಣಾ ನ್ಯಾಯಾಲಯ ಆರೋಪ ಮುಕ್ತಗೊಳಿಸಿದ ಬಳಿಕ ತನಿಖಾಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಆರೋಪದಲ್ಲಿ ಮಾನವ ಹಕ್ಕುಗಳ ಆಯೋಗ ದಂಡ ವಿಧಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಾನವ ಹಕ್ಕುಗಳ ಆಯೋಗವು 2015ರ ಜೂ. 20ರಂದು 10 ಸಾವಿರ ರೂ ದಂಡ ವಿಧಿಸಿ ಹೊರಡಿಸಿದ ಆದೇಶ ರದ್ದು ಕೋರಿ ಪೊಲೀಸ್ ಅಧಿಕಾರಿ ಎಸ್.ಟಿ.ಸಿದ್ದಲಿಂಗಪ್ಪ ಎಂಬುವರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ವಿಚಾರಣಾ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿ ಕಾನೂನು ಪ್ರಕಾರ ಆದೇಶ ಮಾಡುವ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಒಂದೊಮ್ಮೆ ಖುಲಾಸೆ ಆದೇಶವು ತೃಪ್ತಿದಾಯಕವಾಗಿರದಿದ್ದರೆ, ಅದನ್ನು ದೂರುದಾರರು ಕಾನೂನು ಪ್ರಕಾರ ಸೂಕ್ತ ವೇದಿಕೆಯಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶವಿದೆ.

ಅರ್ಜಿದಾರರು ಹಿರಿಯ ಶ್ರೇಣಿಯ ಅಧಿಕಾರಿಯಾಗಿದ್ದು, ತಮ್ಮ ಅಧೀನದ ಅಧಿಕಾರಿಗೆ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಹಾಗಾಗಿ, ದೂರುದಾರರು ಆರೋಪಿಸಿದಂತೆ ಅರ್ಜಿದಾರರು ಕರ್ತವ್ಯ ಲೋಪ ಎಸಗಿಲ್ಲ. ಈ ವಿಚಾರವನ್ನು ಕಡೆಗಣಿಸಿ ಅರ್ಜಿದಾರರಿಗೆ ದಂಡ ವಿಧಿಸಿದ ಆಯೋಗದ ಕ್ರಮ ಕಾನೂನು ಬಾಹಿರವಾಗಿದೆ ಎಂದು ತಿಳಿಸಿರುವ ಹೈಕೋರ್ಟ್ ಮಾನವ ಹಕ್ಕುಗಳ ಆಯೋಗದ ಆದೇಶವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: 2010ರ ಸೆ. 26ರಂದು ಚಿಕ್ಕಬಳ್ಳಾಪುರದಲ್ಲಿ ವೃತ್ತ ನಿರೀಕ್ಷಕರಾಗಿದ್ದ ಅರ್ಜಿದಾರ ಸಿದ್ದಲಿಂಗಪ್ಪಗೆ ಕರೆ ಮಾಡಿದ್ದ ಅಪ್ಪಣ್ಣ ಎಂಬುವರು, ಸೆ. 15ರಂದು ಲಕ್ಷ್ಮೀಕಾಂತ್ ಹಾಗೂ ಇತರೆ 15 ಮಂದಿ ಜಮೀನು ಖರೀದಿಯ ಸಂಬಂಧ ಕಮೀಷನ್ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ. ಈ ನಡುವೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ದೂರು ದಾಖಲಿಸಬೇಕು ಎಂದು ಕೋರಿದ್ದರು. ಈ ಅಂಶವನ್ನು ಅರ್ಜಿದಾರರಾದ ಸಿದ್ದಲಿಂಗಪ್ಪ ಪೊಲೀಸ್​ ಸಬ್​ಇನ್ಸ್​ಪೆಕ್ಟರ್ ರಾಜೇಂದ್ರ ಕುಮಾರ್ ಅವರಿಗೆ ಕರೆ ಮಾಡಿ ಪ್ರಕರಣ ಸಂಬಂಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಈ ಸಂಬಂಧ ಲಕ್ಷ್ಮೀಕಾಂತ್ ಮತ್ತು ಇತರೆ 15 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ರಾಜೇಂದ್ರ ಕುಮಾರ್, ತನಿಖೆ ಪೂರ್ಣಗೊಳಿಸಿ ವಿವಿಧ ಅಪರಾಧ ಕೃತ್ಯಗಳಡಿ ದೋಷಾರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ದೊಡ್ಡಬಳ್ಳಾಪುರ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು (ವಿಚಾರಣಾ ನ್ಯಾಯಾಲಯ) ಆರೋಪಿಗಳನ್ನು ಖುಲಾಸೆಗೊಳಿಸಿ 2013ರ ಜು.15ರಂದು ಆದೇಶಿಸಿದ್ದರು.

ಈ ನಡುವೆ ದೂರುದಾರ ಅಪ್ಪಣ್ಣ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ, ರಾಜೇಂದ್ರ ಕುಮಾರ್ ವಿರುದ್ಧ ಕರ್ತವ್ಯ ಲೋಪದ ಆರೋಪ ಮಾಡಿದ್ದರು. ಆ ದೂರಿನ ಕುರಿತು ಐಜಿಪಿಯಿಂದ ವಿಚಾರಣೆ ವರದಿ ತರಿಸಿಕೊಂಡಿದ್ದ ಆಯೋಗ, ರಾಜೇಂದ್ರ ಕುಮಾರ್ ಮತ್ತು ಅರ್ಜಿದಾರರಿಗೆ 10 ಸಾವಿರ ರೂ. ದಂಡ ವಿಧಿಸಿತ್ತು. ಇದರಿಂದ ಸಿದ್ದಲಿಂಗಪ್ಪ ಹೈಕೋರ್ಟ್ ಮೆಟ್ಟಿಲೇರಿ, ದೂರುದಾರರಿಂದ ಕರೆ ಸ್ವೀಕರಿಸಿದ ನಂತರ ಕಾನೂನು ಪ್ರಕಾರ ಕ್ರಮ ಜರುಗಿಸಲು ತಮ್ಮ ಅಧೀನದ ಸಬ್​ಇನ್ಸ್​ಪೆಕ್ಟರ್​​ಗೆ ಸೂಚಿಸಿದ್ದೇನೆ. ಆ ಮೂಲಕ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದು, ಯಾವುದೇ ಕರ್ತವ್ಯ ಲೋಪ ಎಸಗಿಲ್ಲ. ಆದ್ದರಿಂದ ಆಯೋಗದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಇದೀಗ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಮಾನವ ಹಕ್ಕು ಆಯೋಗದ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ.

ಇದನ್ನೂ ಓದಿ: ತುರ್ತು ನೆರವಿಗೆ ಸಾರ್ವಜನಿಕರು ಸುರಕ್ಷಾ ಆ್ಯಪ್​ ಬಳಸಬಹುದು: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.