ETV Bharat / state

ಕೊರೊನಾ ಕಾಲದಲ್ಲಿ ಶಾಲಾ ಶುಲ್ಕ ಕಟ್ಟುವುದಾದರೂ ಹೇಗೆ? ಪೋಷಕರ ಆತಂಕ

ಶಾಲೆಗಳು ಪೋಷಕರಿಗೆ ಶಾಲಾ ಶುಲ್ಕ ಕಟ್ಟುವಂತೆ ಒತ್ತಾಯ ಹೇರುತ್ತಿದೆಯೆನ್ನುವ ಆರೋಪ ಕೇಳಿಬರುತ್ತಿದೆ. ನಂದಿನಿ ಲೇಔಟ್​​ನಲ್ಲಿರುವ ಪ್ರೆಸಿಡೆನ್ಸಿ ಶಾಲೆಯ ಮುಂದೆ ಇಂದು ನೂರಾರು ಪೋಷಕರು ಜಮಾಯಿಸಿ, ಕೊರೊನಾದಂತಹ ಈ ಸಮಯದಲ್ಲಿ ಲಕ್ಷಗಟ್ಟಲೆ ಶಾಲಾ ಶುಲ್ಕ ಕಟ್ಟುವುದಾದರೂ ಹೇಗೆ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

parents are worry about their children school fees
ಶಾಲಾ ಶುಲ್ಕ ಕುರಿತು ಪೋಷಕರ ಆತಂಕ
author img

By

Published : Jun 8, 2021, 12:18 PM IST

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2021-22ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಜುಲೈ 1 ರಿಂದ ಪ್ರಾರಂಭಿಸಲು ಆದೇಶಿಸಲಾಗಿದೆ‌. ಜೂನ್ 15 ರಿಂದ ದಾಖಲಾತಿ ಪ್ರಕ್ರಿಯೆ ಶುರು ಮಾಡುವಂತೆ ಸೂಚಿಸಲಾಗಿದೆ. ಆದರೆ ನಗರದ ಹಲವು ಶಾಲೆಗಳು ನಿಗಧಿ ಮಾಡಿದ ದಿನಾಂಕಕ್ಕೂ ಮುನ್ನವೇ ಪೋಷಕರಿಗೆ ಶಾಲಾ ಶುಲ್ಕ ಕಟ್ಟುವಂತೆ ಒತ್ತಾಯ ಹೇರುತ್ತಿದೆಯೆನ್ನುವ ಆರೋಪ ಕೇಳಿಬರುತ್ತಿದೆ.

ಪ್ರೆಸಿಡೆನ್ಸಿ ಶಾಲೆಯ ಮುಂದೆ ಜಮಾಯಿಸಿದ ಪೋಷಕರು

ನಗರದ ನಂದಿನಿ ಲೇಔಟ್​​ನಲ್ಲಿರುವ ಪ್ರೆಸಿಡೆನ್ಸಿ ಶಾಲೆಯ ಮುಂದೆ ಇಂದು ನೂರಾರು ಪೋಷಕರು ಜಮಾಯಿಸಿದ್ದಾರೆ. ಶೈಕ್ಷಣಿಕ ವರ್ಷ ಆರಂಭವೇ ಆಗಿಲ್ಲ, ಅದಕ್ಕೂ ಮುನ್ನವೇ ಫೀಸ್ ಕಟ್ಟಿ ಅನ್ನೋದು ಎಷ್ಟು ಸರಿ? ಫೀಸ್ ಕಟ್ಟಿಲ್ಲ ಅಂದರೆ ಆನ್​ಲೈನ್ ತರಗತಿ ಇಲ್ಲ ಎಂದು ಹೇಳುತ್ತಿದ್ದಾರೆ. ಈಗಾಗಲೇ ಫೀಸ್ ಕಟ್ಟದ ಮಕ್ಕಳನ್ನು ಆನ್ ಲೈನ್ ಕ್ಲಾಸ್​​ನಿಂದ ರಿಮೂವ್ ಮಾಡಿದ್ದಾರಂತೆ. ಹೀಗಾಗಿ, ಆತಂಕಕ್ಕೆ ಒಳಗಾದ ಪೋಷಕರು, ಶಾಲೆಯ ಮುಂದೆ ಜಮಾಯಿಸಿದ್ದಾರೆ.

ಇದನ್ನೂ ಓದಿ: ಜಪ್ತಿ​​ ಮಾಡಿರವ ಬೈಕ್ ಕೊಡಿ ಎಂದು ಎಸಿಪಿ ಕಾಲಿಗೆ ಬಿದ್ದ ಯುವಕ: ವಿಡಿಯೋ ವೈರಲ್​

ಕೊರೊನಾದಂತಹ ಈ ಸಮಯದಲ್ಲಿ ಶುಲ್ಕ ಹೆಚ್ಚಳ ಮಾಡಿದರೆ ಹೇಗೆ ಕಟ್ಟೋದು? ಕಳೆದ ಬಾರಿ ಮಕ್ಕಳು ಶಾಲೆಗೆ ಹೋಗಿಲ್ಲ? ಆನ್ ಲೈನ್ ಪಾಠಕ್ಕೆ ಲಕ್ಷ-ಲಕ್ಷ ಶುಲ್ಕ ಕಟ್ಟಿದ್ದೇವೆ‌. ಮೂರನೇ ಅಲೆ ಇರುವಾಗ ಶಾಲೆಗಳು ತೆರೆಯುತ್ತೋ ಇಲ್ವೋ ಎಂಬ ಗೊಂದಲ ಇರುವ ಈ ವೇಳೆ ಲಕ್ಷ ಲಕ್ಷ ಫೀಸ್ ಕಟ್ಟಿ ಅಂದರೆ ಹೇಗೆ? ಅನ್ನೋದು ಪೋಷಕರ ಪ್ರಶ್ನೆ. ಪೋಷಕರು ದೌಡಾಯಿಸಿದ ಕಾರಣ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.