ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪೀಕ್ ಲೇವಲ್ಗೆ ಹೋಗುತ್ತಿದ್ದು, ಇಷ್ಟು ದಿನ 2000 ಗಡಿದಾಟುತ್ತಿದ್ದ ಸೋಂಕಿತರ ಸಂಖ್ಯೆ ಇಂದು ಒಂದೇ ದಿನ 3,176 ಹೊಸ ಪಾಸಿಟಿವ್ ಕೇಸ್ ಬಂದಿದೆ. ಇತ್ತ 87 ಸೋಂಕಿತರು ಕೊರೊನಾಗೆ ಬಲಿಯಾಗಿದ್ದು, ಅನ್ಯ ಕಾರಣಕ್ಕೆ 6 ಮಂದಿ ಸಾವನ್ನಪ್ಪಿದ್ದಾರೆ.
ಈವರೆಗೆ ರಾಜ್ಯದಲ್ಲಿ 928 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 47,253 ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 18,466 ಜನ ಗುಣಮುಖರಾಗಿದ್ದಾರೆ. 27,853 ಸೋಂಕಿತರು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 597 ಇದ್ದು ಚಿಕಿತ್ಸೆ ಮುಂದುವರೆದಿದೆ. ಇನ್ನುಳಿದಂತೆ ಪ್ರತಿ ಜಿಲ್ಲೆಯ ಸಂಪೂರ್ಣ ಕೋವಿಡ್-19 ವರದಿ ಇಲ್ಲಿದೆ.
ಹಾಸನ : ಜಿಲ್ಲೆಯಲ್ಲಿ ಓರ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆಯೂ 740ಕ್ಕೆ ಏರಿಕೆಯಾಗಿದೆ. ಈವರೆಗೆ 486 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 232 ಸಕ್ರಿಯ ಸೋಂಕಿತರು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ರದುರ್ಗ : ಜಿಲ್ಲೆಯಲ್ಲಿಂದು 3 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಚಿತ್ರದುರ್ಗದ 38, 47 ಹಾಗೂ 55 ವರ್ಷದ ಪುರುಷರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 130ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 133ಕ್ಕೆ ಏರಿಕೆಯಾಗಿದ್ದು, 83 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.
ರಾಮನಗರ : ಜಿಲ್ಲೆಯಲ್ಲಿ ಇಂದು 3 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಚನ್ನಪಟ್ಟಣ 2 ಮತ್ತು ಮಾಗಡಿ 1 ಪ್ರಕರಣ ಪತ್ತೆಯಾಗಿದೆ. ಇವರನ್ನು ರಾಮನಗರದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 393 ಪ್ರಕರಣ ದಾಖಲಾಗಿವೆ. ಈ ಪೈಕಿ ಕನಕಪುರ 85, ಮಾಗಡಿ 137, ಚನ್ನಪಟ್ಟಣ 74 ಮತ್ತು ರಾಮನಗರದ 97 ಪ್ರಕರಣ ಸೇರಿವೆ.
ಜಿಲ್ಲೆಯಲ್ಲಿ ದಾಖಲಾಗಿರುವ 393 ಪ್ರಕರಣಗಳ ಪೈಕಿ 250 ಜನರು ಗುಣಮುಖರಾಗಿದ್ರೆ, 134 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಮನಗರದಲ್ಲಿ ಒಬ್ಬರು ಹಾಗೂ ಮಾಗಡಿಯಲ್ಲಿ 8 ಜನ ಮೃತ ಪಟ್ಟಿದ್ದು, ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಹಾವೇರಿ : ಜಿಲ್ಲೆಯಲ್ಲಿ 14 ಕೊರೊನಾ ಪ್ರಕರಣ ದೃಢಪಟ್ಟಿವೆ. ಈ ಕುರಿತಂತೆ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 322ಕ್ಕೆ ಏರಿದಂತಾಗಿದೆ. ಹಿರೇಕೆರೂರು ತಾಲೂಕಿನಲ್ಲಿ ನಾಲ್ಕು ರಾಣೇಬೆನ್ನೂರು ತಾಲೂಕಿನಲ್ಲಿ ಮೂವರು. ಹಾವೇರಿ,ಸವಣೂರು ಹಾಗೂ ಬ್ಯಾಡಗಿ ತಾಲೂಕಿನಲ್ಲಿ ತಲಾ ಎರಡು ಪ್ರಕರಣ ವರದಿಯಾಗಿವೆ. ಹಾನಗಲ್ ತಾಲೂಕಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 322 ಕ್ಕೇರಿದೆ.
ಚಿಕ್ಕಬಳ್ಳಾಪುರ : ಇಂದು ಸಹ ಕೊರೊನಾ ಜಿಲ್ಲೆಯಲ್ಲಿ ತನ್ನ ಹಟ್ಟಹಾಸ ಮುಂದುರೆಸಿದ್ದು 32 ಜನರಿಗೆ ಕೊರೊನಾ ವಕ್ಕರಿಸಿದೆ. ಈವರೆಗೂ 279 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, 204 ಸಕ್ರಿಯ ಸೋಂಕಿತರಿಗೆ ಜಿಲ್ಲೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಗೇಪಲ್ಲಿ 4, ಚಿಂತಾಮಣಿ 3, ಶಿಡ್ಲಘಟ್ಟ 3 ಸೇರಿದಂತೆ ಗೌರಿಬಿದನೂರು ಗುಡಿಬಂಡೆಯಲ್ಲಿ ಒಂದು ಸೋಂಕಿತ ಪ್ರಕರಣ ಪತ್ತೆಯಾಗಿವೆ. ಗೌರಿಬಿದನೂರಿನ 68 ವರ್ಷದ ವೃದ್ಧೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಹಿನ್ನೆಲೆ ಸೋಂಕು ದೃಢಪಟ್ಟಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಿವಮೊಗ್ಗ : ಜಿಲ್ಲೆಯಲ್ಲಿಂದು 42 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ 644 ಸೊಂಕಿತರು ದಾಖಲಾದಂತೆ ಆಗಿದೆ. ಇಂದು 5 ಜನ ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 244 ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ 388 ಜನ ಚಿಕಿತ್ಸೆಯಲ್ಲಿದ್ದಾರೆ. ಇಂದು ಹೊನ್ನಾಳಿಯ ಶ್ರೀರಾಂಪುರದ ಸ್ವಾಮಿಜಿಯೊಬ್ಬರು ಬಲಿಯಾಗಿದ್ದಾರೆ. ಇದರಿಂದ ಕೊರೊನಾಗೆ ಬಲಿಯಾದವರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.
ಬೀದರ್ : 36 ಜನರಲ್ಲಿ ಸೋಂಕು ಧೃಡವಾಗಿದ್ದು, ಸೋಂಕಿತರ ಸಂಖ್ಯೆ 1139ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಬಸವಕಲ್ಯಾಣ, ಹುಮನಾಬಾದ್, ಭಾಲ್ಕಿ, ಬೀದರ್ ತಾಲೂಕಿನ ಒಟ್ಟು 36 ಜನರಲ್ಲಿ ಸೋಂಕು ದೃಢವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 1139ಕ್ಕೆ ಏರಿಕೆಯಾದ್ರೆ, 670 ಜನರು ಗುಣಮುಖರಾಗಿದ್ದಾರೆ. ಈವರೆಗೆ 53 ಜನರು ಬಲಿಯಾಗಿದ್ದು, 416 ಜನರು ಚಿಕಿತ್ಸೆಪಡೆಯುತ್ತಿದ್ದಾರೆ.
ಉತ್ತರಕನ್ನಡ : ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮೆರೆದಿದ್ದು, ಇಂದು ಒಂದೇ ದಿನ 76 ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಹಳಿಯಾಳದಲ್ಲಿ ಅತಿಹೆಚ್ಚು 37 ಪ್ರಕರಣ ಪತ್ತೆಯಾಗಿವೆ. ಉಳಿದಂತೆ ಯಲ್ಲಾಪುರದಲ್ಲಿ 16, ಶಿರಸಿಯಲ್ಲಿ 8, ಕುಮಟಾ 6, ಕಾರವಾರ 4, ಮುಂಡಗೋಡ 3, ಭಟ್ಕಳ 2 ಸೋಂಕಿತರು ಪತ್ತೆಯಾಗಿದ್ದಾರೆ. ಧೃಡಪಟ್ಟ ಸೋಂಕಿತರ ಪೈಕಿ ಬಹುತೇಕರಿಗೆ ಪ್ರಾಥಮಿಕ ಸಂಪರ್ಕದಿಂದ ಬಂದಿದೆ. ಇದರೊಂದಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 774 ಏರಿಕೆಯಾಗಿದ್ದು, 309 ಮಂದಿ ಗುಣಮುಖರಾಗಿದ್ದಾರೆ. 8 ಮಂದಿ ಸಾವನ್ನಪ್ಪಿದ್ದು, 457 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಪ್ಪಳ : ಇಂದು ಮತ್ತೆ 12 ಕೊರೊನಾ ಪಾಸಿಟಿವ್ ಹೊಸ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 368ಕ್ಕೆ ಏರಿಕೆಯಾಗಿದೆ. ಇದರಲ್ಲಿ ಗಂಗಾವತಿ ತಾಲೂಕಿನಲ್ಲಿ 6, ಕೊಪ್ಪಳ ತಾಲೂಕಿನಲ್ಲಿ 5 ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 9 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇದರ ಜೊತೆಗೆ ಇಂದು 41 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಯಾದಗಿರಿ: ಜಿಲ್ಲೆಯಲ್ಲಿಂದು ಮತ್ತೆ 49 ಜನರಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1501 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಪೈಕಿ ಇಲ್ಲಿಯವರೆಗೆ 1038 ಜನ ಕರೋನಾ ವೈರಸ್ನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, 462 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.
ರಾಯಚೂರು : ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ದಿನ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಂದು ಕಂಡು ಬಂದ 26 ಪ್ರಕರಣ ಮೂಲಕ ಸೋಂಕಿತರ ಸಂಖ್ಯೆ 814ಕ್ಕೆ ತಲುಪಿದೆ. ಇಂದು ಬಂದಿರುವ ವರದಿಗಳಲ್ಲಿ ರಾಯಚೂರು ತಾಲೂಕಿನ 16, ಮಾನವಿ 7, ದೇವದುರ್ಗ 2, ಸಿಂಧನೂರು 1 ಪ್ರಕರಣ ಪತ್ತೆಯಾಗಿವೆ. ಸೋಂಕಿತರನ್ನ ಈಗಾಗಲೇ ಐಸೋಲೋಷನ್ ವಾರ್ಡ್‌ಗೆ ಚಿಕಿತ್ಸೆ ದಾಖಲಿಸಲಾಗಿದೆ.
ಈವರೆಗೆ ಬಂದಿರುವ 814 ಸೋಂಕಿತರ ಪೈಕಿ 484 ಸೋಂಕಿತರು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 318 ಪ್ರಕರಣ ಸಕ್ರಿಯವಾಗಿವೆ. ಇವರಲ್ಲಿ 170 ಜನರನ್ನ ಒಪೆಕ್ ಆಸ್ಪತ್ರೆ ಐಸೋಲೋಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಇಬ್ಬರು ಸಾವಿಗೀಡಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 12 ಜನ ಕೊರೊನಾಗೆ ಬಲಿಯಾಗಿದ್ದಾರೆ.
ಕಲಬುರಗಿ: ಜಿಲ್ಲೆಯಲ್ಲಿ ಇಂದು ಮತ್ತೆ ಹೊಸದಾಗಿ 67 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಓರ್ವರು ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಇಲ್ಲಿವರೆಗೆ 2380 ಪಾಸಿಟಿವ್ ಪ್ರಕರಣಗಳು,1520 ಗುಣಮುಖ,37 ಸಾವು ಸಂಭವಿಸಿದ್ದು, 823 ಜನ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗದಗ : ಜಿಲ್ಲೆಯಲ್ಲಿ ಇಂದು ಮತ್ತೆ 39 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 370 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ನಾಲ್ವರು ಇಂದು ಸಾವಿಗೀಡಾಗಿದ್ದಾರೆ. ಸುಳ್ಯ ತಾಲೂಕಿನವೊಬ್ಬರು, ಬಂಟ್ವಾಳ ತಾಲೂಕಿನ ಮೂವರು ಕೊರೊನಾಗೆ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 73 ಮಂದಿಗೆ ಇಂದು ಕೊರೊನಾ ದೃಢಪಟ್ಟಿದೆ. ಇವರಲ್ಲಿ 11 ಮಂದಿ ಪ್ರಾಥಮಿಕ ಸಂಪರ್ಕದಿಂದ, 23 ಮಂದಿ ಐಎಲ್ಐ ಪ್ರಕರಣದಲ್ಲಿ, 3 ಮಂದಿ ಸಾರಿ ಪ್ರಕರಣದಲ್ಲಿ, 3 ಮಂದಿ ವಿದೇಶಿ ಪ್ರವಾಸದಿಂದ, ಅಂತರ್ ಜಿಲ್ಲಾ ಪ್ರವಾಸದಿಂದ ಬಂದ ಒಬ್ಬರಿಗೆ ವರಿಗೆ ಕೊರೊನಾ ದೃಢಪಟ್ಟಿದೆ.
ಬಳ್ಳಾರಿ : ಜಿಲ್ಲೆಯಲ್ಲಿಂದು ಹೊಸದಾಗಿ 135 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 2025ಕ್ಕೆ ಏರಿಕೆಯಾಗಿದೆ. ಇನ್ನು, 1120 ಮಂದಿ ಗುಣಮುಖರಾಗಿದ್ದಾರೆ. 54 ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ. 854 ಸಕ್ರಿಯ ಪ್ರಕರಣ ಜಿಲ್ಲೆಯಲ್ಲಿವೆ.
ಮೈಸೂರು : 99 ಮಂದಿಗೆ ಕೊರೊನಾ ಸೋಂಕು ದೃಢಪಟ್ಟರೆ, 6 ಮಂದಿ ಕೊರೊನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಸಂಪರ್ಕದಿಂದ 26, ಐಎಲ್‌ಐ ಪ್ರಕರಣ 29, ಪ್ರಯಾಣದಿಂದ 36, ಎ ಸಿಂಪ್ಟೊಮೆಟಿಕ್ 8 ಸೇರಿ ಒಟ್ಟು 99 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 6 ಮಂದಿಗೆ ಕೊರೊನಾಗೆ ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 47ಕ್ಕೇರಿದೆ. ಬುಧವಾರ 5 ಮಂದಿ ಮಾತ್ರ ಡಿಸ್ಚಾರ್ಜ್ ಆಗಿದ್ದಾರೆ. ಮೈಸೂರಿನಲ್ಲಿ 29,420 ಮಂದಿಗೆ ಕೊರೊನಾ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 28,171 ಮಂದಿಯ ವರದಿ ನೆಗೆಟಿವ್ ಬಂದಿವೆ. 1190 ಕೊರೊನಾ ಸೋಂಕಿತರ ಪೈಕಿ ಗುಣಮುಖರಾದ 503 ಜನರು ಡಿಸ್ಚಾರ್ಜ್ ಆಗಿದ್ದಾರೆ. 640 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ 35 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 633ಕ್ಕೇರಿದೆ. ದಾವಣಗೆರೆಯಲ್ಲಿ 24, ಹರಿಹರ 1, ಜಗಳೂರು 3, ಚನ್ನಗಿರಿ 1, ಹೊನ್ನಾಳಿಯಲ್ಲಿ 5 ಹಾಗೂ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ನಗರಕ್ಕೆ ಬಂದಿದ್ದ ಒಬ್ಬರಲ್ಲಿ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಜಗಳೂರಿನ 5 ವರ್ಷದ ಬಾಲಕಿ ಸೇರಿ 15 ಮಹಿಳೆಯರಲ್ಲಿ ಹಾಗೂ 10 ವರ್ಷದ ಬಾಲಕ ಸೇರಿ ಒಟ್ಟು 20 ಮಂದಿ ಪುರುಷರಲ್ಲಿ ಕೊರೊನಾ ವಕ್ಕರಿಸಿದೆ.
ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 34 ಕೊರೊನಾ ಪ್ರಕರಣಗಳು ದೃಡಪಟ್ಟಿವೆ. ಅಲ್ಲದೆ, ಕೊರೊನಾಗೆ ಮೂವರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು 548 ಕೊವಿಡ್ ಪ್ರಕರಣ ದೃಡಪಟ್ಟಿದ್ದು, 220 ಜನ ಗುಣಮುಖರಾಗಿದ್ದಾರೆ. 308 ಜನ ಕೊವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 220 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 308 ಸಕ್ರಿಯ ಪ್ರಕರಣಗಳು ಇವೆ.
ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಮಹಾಸ್ಪೋಟ ಸಂಭವಿಸಿದೆ. ಇಂದು ಒಂದೇ ದಿನ 80 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 976ಕ್ಕೆ ಏರಿಕೆಯಾಗಿದೆ. ಇಂದು ಪಾಸಿಟಿವ್ ಬಂದವರಲ್ಲಿ 6 ವರ್ಷದ ಬಾಲಕಿ, 7ವರ್ಷದ ಬಾಲಕ, 45 ಪುರುಷರು, 23 ಮಹಿಳೆಯರು, 8 ಜನ ಯುವಕರು, ಇಬ್ಬರು ಯುವತಿಯರು ಸೇರಿದ್ದಾರೆ. ಒಟ್ಟು ಇಲ್ಲಿಯವರೆಗೆ 36,371 ಜನರನ್ನು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ. 32,604 ಜನರ ವರದಿ ನೆಗಟಿವ್ ಬಂದಿದೆ. 976 ಜನರ ವರದಿ ಪಾಸಿಟಿವ್ ಬಂದಿದೆ. ಇನ್ನೂ ಕೂಡ 2791 ಜನರ ವರದಿ ಬರಬೇಕಾಗಿದೆ.
ಇಲ್ಲಿಯವರೆಗೆ ಸೊಂಕು ಹಾಗೂ ಇತರೆ ಕಾಯಿಲೆಯಿಂದ 19 ಜನ ಸಾವನ್ನಪ್ಪಿದ್ದಾರೆ.
ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಬ್ಬರು ಪೊಲೀಸರು ಮತ್ತು ಬಾಣಂತಿ ಸೇರಿದಂತೆ ಒಟ್ಟು 32 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 597 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಇಂದು ಒಂದೇ ದಿನ 49 ಮಂದಿ ಗುಣಮುಖರಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 213 ಗುಣಮುಖರಾಗಿದ್ದಾರೆ.
ಇನ್ನು 367 ಜನ ಸೋಂಕಿತರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಐಸಿಯುನಲ್ಲಿ ಎಂಟು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು 58 ವರ್ಷದ ಮಹಿಳೆಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದು ಮೃತರ ಸಂಖ್ಯೆ 17ಕ್ಕೆ ಏರಿಕೆ ಆದಂತಾಗಿದೆ.
ಧಾರವಾಡ: ನಗರದಲ್ಲಿ ಇಂದು 138 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮುಖಾಂತರ ಸೋಂಕಿತರ ಸಂಖ್ಯೆ 1397 ಕ್ಕೇರಿದೆ. ಇದುವರೆಗೆ 499 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 854 ಸಕ್ರಿಯ ಪ್ರಕರಣಗಳುಗಳಿದ್ದು, ಈವರೆಗೆ ಜಿಲ್ಲೆಯಲ್ಲಿ 44 ಜನರು ಸಾವಿಗೀಡಾಗಿದ್ದಾರೆ.