ETV Bharat / state

ಬೆಂಗಳೂರು: ಕೋವಿಡ್​​ ಮಾರ್ಗಸೂಚಿ ಉಲ್ಲಂಘಿಸಿದ 20,000ಕ್ಕೂ ಹೆಚ್ಚು ವಾಹನಗಳು ಸೀಜ್‌! - bangalore lock down updates

ಅನಗತ್ಯವಾಗಿ ಓಡಾಡುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈವರೆಗೆ 20 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಸೀಜ್‌ ಮಾಡಲಾಗಿದೆ‌. ನಿನ್ನೆ 558 ವಾಹನಗಳನ್ನು ಜಪ್ತಿ ಮಾಡಿದ್ದು, ಒಟ್ಟು 11 ಜನರ ವಿರುದ್ಧ ಎನ್.ಡಿ.ಎಂ.ಎ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

Over 20,000 Vehicles Seized in bangalore !
ಕೋವಿಡ್​​ ಮಾರ್ಗಸೂಚಿ ಉಲ್ಲಂಘಿಸಿದ 20,000ಕ್ಕೂ ಹೆಚ್ಚು ವಾಹನಗಳು ಸೀಜ್‌!
author img

By

Published : May 18, 2021, 12:31 PM IST

ಬೆಂಗಳೂರು: ಪ್ರಸ್ತುತ ಲಾಕ್​ಡೌನ್ ಅವಧಿಯಲ್ಲಿ ಕೋವಿಡ್​​ ಮಾರ್ಗಸೂಚಿ ಪಾಲನೆ ಮಾಡದ 20 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಸೀಜ್‌ ಮಾಡಲಾಗಿದೆ‌.

ಕಳೆದ‌ ಎರಡು ದಿನಗಳ ಹಿಂದೆ 19,895 ಜಪ್ತಿಯಾದ ವಾಹನಗಳ ಪೈಕಿ 18,056 ಬೈಕ್​ಗಳೇ ಇದ್ದವು.‌ ಇನ್ನು 879 ಆಟೋಗಳು, 960 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಹಲವು ಮಾಲೀಕರು ತಮ್ಮ ವಾಹನ ಬಿಡಿಸಿಕೊಳ್ಳಲು ಕೋರ್ಟ್ ಮೊರೆ ಹೋಗಿದ್ದಾರೆ.

ಜಪ್ತಿ ಮಾಡುವ ಮುನ್ನ ಪೊಲೀಸರು ಕೆಲ ವಾಹನ ಮಾಲೀಕರಿಂದ ದಂಡ ಪಾವತಿಸಿಕೊಂಡು ಬಿಟ್ಟು ಕಳುಹಿಸಿದ್ದರು. ಕೋವಿಡ್ ಇರುವ ಹಿನ್ನೆಲೆ ಅಗತ್ಯ ವಸ್ತುಗಳಿಗೆ, ಅಗತ್ಯ ಕಾರಣಕ್ಕೆ ಮಾತ್ರ ವಾಹನ ಬಳಸಲು ಸರ್ಕಾರ ಅನುಮತಿ ನೀಡಿತ್ತು‌. ಆದರೆ ಹಲವರು ಸುಖಾಸುಮ್ಮನೆ ವಾಹನ ಚಲಾಯಿಸಿದ್ದರು. ಹಾಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪೊಲೀಸರು ವಾಹನ ಸೀಜ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯುವಕರ ವಾಹನಗಳೇ ಹೆಚ್ಚು:

ಲಾಕ್​ಡೌನ್ ಅವಧಿಯಲ್ಲಿ ಸುಖಾಸುಮ್ಮನೆ ರಸ್ತೆಗಿಳಿದಿದ್ದವರ ಪೈಕಿ ಬಹುತೇಕರು ಯುವಕರೇ ಆಗಿದ್ದಾರೆ. ರಾಜ್ಯದಲ್ಲಿ ಲಾಕ್​ಡೌನ್ ಬೆನ್ನಲ್ಲೇ 18,056ಕ್ಕೂ ಅತಿ ಹೆಚ್ಚು ಬೈಕ್​​ಗಳನ್ನು ಪೊಲೀಸರು ಸೀಜ್ ಮಾಡಿಕೊಂಡಿದ್ದಾರೆ. ಫುಡ್ ಡೆಲಿವರಿ ಬಾಯ್ಸ್,​ ಲಸಿಕೆ ಹಾಕಿಸಿಕೊಳ್ಳಬೇಕು ಎನ್ನುವವರು, ಸಂಬಂಧಿಕರ ಸಾವು, ನಕಲಿ ವೈದ್ಯಕೀಯ ದಾಖಲೆ ಹೀಗೆ ಸುಖಾಸುಮ್ಮನೆ ಕಾರಣ ನೀಡಿ ರಸ್ತೆಗಿಳಿದಿದ್ದ ಬಹುತೇಕರು ಯುವ ಸವಾರರಾಗಿದ್ದಾರೆ.

ಇದನ್ನೂ ಓದಿ: ಕೊರೊನಾ ನಿರ್ವಹಣೆ: ರಾಜ್ಯದ 17 ಡಿಸಿಗಳ ಜೊತೆಗಿನ ಪ್ರಧಾನಿ ವಿಡಿಯೋ ಸಂವಾದ ಆರಂಭ

ಕೆಲವರು ಫಸ್ಟ್ ಡೋಸ್ ತೆಗೆದುಕೊಂಡಿದ್ದ ಎರಡೇ ದಿನಕ್ಕೆ ಸೆಕೆಂಡ್ ಡೋಸ್ ತೆಗೆದುಕೊಳ್ಳಬೇಕು ಎಂದು ಸುಳ್ಳು ಕಾರಣ ನೀಡಿದ್ದಾರೆ. ಅಂತಹವರ ವಾಹನ ಹಾಗೂ ಲೈಸೆನ್ಸ್ ಹೊಂದಿರದವರ ವಾಹನ ವಾಪಸ್ ನೀಡದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Over 20,000 Vehicles Seized in bangalore !
ನಿನ್ನೆ ಜಪ್ತಿಯಾದ ವಾಹನಗಳು

ನಿನ್ನೆ 558 ವಾಹನಗಳು ಜಪ್ತಿ- 11 ಮಂದಿಯ ವಿರುದ್ಧ FIR:

ನಿನ್ನೆ ಬೆಳಗ್ಗೆ 6 ಗಂಟೆಯಿಂದ ಸಂಜೆ 8ರವರೆಗೆ ಪೊಲೀಸರ ಕಾರ್ಯಾಚರಣೆ ಮುಂದುವರೆದಿತ್ತು. ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಒಟ್ಟು 558 ವಾಹನಗಳನ್ನು ಜಪ್ತಿ ಮಾಡಿದ್ದಾರೆ. 505 ದ್ವಿಚಕ್ರ ವಾಹನ, 27 ಆಟೋ, 26 ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೋವಿಡ್​​ ರೂಲ್ಸ್ ಬ್ರೇಕ್ ಮಾಡಿದವರ ವಿರುದ್ಧ ಎನ್.ಡಿ.ಎಂ.ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಒಟ್ಟು 11 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.