ETV Bharat / state

ವಿಪಕ್ಷಗಳ ಔತಣಕೂಟ ಮುಕ್ತಾಯ..ನಿರಂಕುಶ ಪ್ರಭುತ್ವದಿಂದ ದೇಶ ರಕ್ಷಣೆಗೆ ಸಮಾನ ಮನಸ್ಕ ಪಕ್ಷಗಳಿಂದ ಒಗ್ಗಟ್ಟು: ಕಾಂಗ್ರೆಸ್​

ತಾಜ್​ವೆಸ್ಟ್​ಎಂಡ್​ನಲ್ಲಿ ಕಾಂಗ್ರೆಸ್ ನೀಡಿದ ಔತಣಕೂಟದಲ್ಲಿ ಮೋದಿ ವಿರೋಧಿ ವಿಪಕ್ಷಗಳ ನಾಯಕರು ಭಾಗವಹಿಸಿದ್ದರು. ನಾಳೆ ಮಹತ್ವದ ಸಭೆ ನಡೆಯಲಿದೆ.

author img

By

Published : Jul 17, 2023, 9:43 PM IST

Updated : Jul 17, 2023, 9:55 PM IST

ವಿಪಕ್ಷಗಳ ಔತಣಕೂಟ ಮುಕ್ತಾಯ
ವಿಪಕ್ಷಗಳ ಔತಣಕೂಟ ಮುಕ್ತಾಯ

ಬೆಂಗಳೂರು: ಇಲ್ಲಿನ ತಾಜ್​ ವೆಸ್ಟ್​ಎಂಡ್​ನಲ್ಲಿ ಕಾಂಗ್ರೆಸ್​ ಆಯೋಜಿಸಿದ್ದ ವಿಪಕ್ಷಗಳ ಔತಣಕೂಟ ಮುಗಿದಿದ್ದು, ಎಲ್ಲ ನಾಯಕರು ತಮ್ಮ ತಮ್ಮ ನಿವಾಸಗಳತ್ತ ತೆರಳಿದರು. ನಾಳೆ 26 ವಿಪಕ್ಷಗಳ ನಾಯಕರು ಸಭೆ ಸೇರಲಿದ್ದು, ಚುನಾವಣಾ ತಂತ್ರಗಾರಿಕೆ ಮತ್ತು ಒಕ್ಕೂಟದ ಬಗ್ಗೆ ಚರ್ಚೆ ನಡೆಯಲಿದೆ. ಇದೇ ವೇಳೆ ಸಮಾನಮನಸ್ಕ ಪಕ್ಷಗಳು ಸೇರಿಕೊಂಡು ಸಾಮಾಜಿಕ ನ್ಯಾಯ, ರಾಷ್ಟ್ರಾಭಿವೃದ್ಧಿ ಆಧಾರದ ಮೇಲೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಲಾಗುವುದು ಎಂದು ಕಾಂಗ್ರೆಸ್​ ಹೇಳಿದೆ.

ಜುಲೈ 17,18 ರಂದು ಎರಡು ದಿನ ಇಲ್ಲಿ ನಡೆಯುವ ವಿಪಕ್ಷಗಳ ಸಭೆಗೆ ಕಾಂಗ್ರೆಸ್​ ಪೌರೋಹಿತ್ಯ ವಹಿಸಿದೆ. ಮೋದಿ ವಿರೋಧಿ ಒಕ್ಕೂಟ ರಚನೆಗಾಗಿ ಕಾಂಗ್ರೆಸ್​, ಆಪ್​​, ಟಿಎಂಸಿ ಸೇರಿದಂತೆ 26 ವಿಪಕ್ಷಗಳು ಒಟ್ಟುಗೂಡಿವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಬಿಜೆಪಿಯನ್ನು ಎದುರಿಸಲು ಕೈಜೋಡಿಸಿವೆ. ಇದರ ಭಾಗವಾಗಿ ಈಗಾಗಲೇ ಬಿಹಾರದ ಪಾಟ್ನಾದಲ್ಲಿ ಮೊದಲ ವಿಪಕ್ಷಗಳ ಸಭೆ ನಡೆದಿದ್ದು, ಈಗ ಬೆಂಗಳೂರಿನಲ್ಲಿ 2ನೇ ಸಭೆ ಆಯೋಜಿಸಲಾಗಿದೆ.

ನಾಳೆ ತಾಜ್​ವೆಸ್ಟ್​ಎಂಡ್​ನಲ್ಲಿ ಎಲ್ಲ ಪಕ್ಷಗಳ ಗಣ್ಯರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು, ಚುನಾವಣಾ ರೂಪುರೇಷೆ, ರಣತಂತ್ರ ಮತ್ತು ಬಿಜೆಪಿಯನ್ನು ಸೋಲಿಸುವ ಬಗ್ಗೆ ಚರ್ಚೆ ನಡೆಯಲಿದೆ. ಇದೇ ವೇಳೆ, ಒಕ್ಕೂಟ ಬಲವರ್ಧನೆಗೆ ಬೇಕಾದ ಕಾರ್ಯಸೂಚಿಗಳ ಮೇಲೂ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.

  • Well begun is half done!

    Like-minded opposition parties shall closely work together to foster an agenda of social justice, inclusive development and national welfare.

    We want to free the people of India from the autocratic and anti-people politics of hate, division, economic… pic.twitter.com/rhPxmpgL3x

    — Mallikarjun Kharge (@kharge) July 17, 2023 " class="align-text-top noRightClick twitterSection" data=" ">

ಮಲ್ಲಿಕಾರ್ಜುನ್​ ಖರ್ಗೆ ಟ್ವೀಟ್​: ಇನ್ನು ಇದೇ ವಿಚಾರವಾಗಿ ಟ್ವೀಟ್​ ಮಾಡಿ ಮಾಹಿತಿ ಹಂಚಿಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು, ವಿಪಕ್ಷಗಳ ಸಭೆ ಉತ್ತಮವಾಗಿ ಆರಂಭವಾಗಿ, ಅರ್ಧದಷ್ಟು ಮುಗಿದಿದೆ. ಸಮಾನ ಮನಸ್ಕ ವಿರೋಧ ಪಕ್ಷಗಳು ಸಾಮಾಜಿಕ ನ್ಯಾಯ, ಅಭಿವೃದ್ಧಿ ಮತ್ತು ರಾಷ್ಟ್ರ ಕಲ್ಯಾಣದ ಕಾರ್ಯಸೂಚಿಯ ಮೇಲೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತವೆ. ದ್ವೇಷ, ವಿಭಜನೆ, ಆರ್ಥಿಕ ಅಸಮಾನತೆ, ಲೂಟಿಯ ನಿರಂಕುಶ ಮತ್ತು ಜನವಿರೋಧಿ ರಾಜಕಾರಣದಿಂದ ಭಾರತದ ಜನರನ್ನು ಮುಕ್ತಗೊಳಿಸಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

ಸಾಂವಿಧಾನಿಕ ತತ್ವಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಅಡಿಪಾಯದ ಮೇಲೆ ಆಡಳಿತ ನಡೆಸಲ್ಪಡುವ ಭಾರತವನ್ನು ನಾವು ನೋಡಲು ಬಯಸುತ್ತೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಭರವಸೆ ಮತ್ತು ನಂಬಿಕೆಯನ್ನು ಹುಟ್ಟಿಸುವ ಭಾರತವನ್ನು ಕಟ್ಟಲಾಗುವುದು. ಅಂತಹ ಕನಸಿಗಾಗಿ ನಾವು ಒಂದಾಗಿದ್ದೇವೆ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

  • #WATCH | The meeting started with a good signal and it would be the end of BJP in 2024, says Congress leader BK Hariprasad on opposition leaders' dinner meeting in Bengaluru.

    On being asked about the NDA meeting scheduled to be held tomorrow in Delhi, he says, "That would be… pic.twitter.com/erdDOYGqvw

    — ANI (@ANI) July 17, 2023 " class="align-text-top noRightClick twitterSection" data=" ">

ಉತ್ತಮ ಆರಂಭ - ಹರಿಪ್ರಸಾದ್: ಮತ್ತೊಂದು ಕಡೆ ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್​ ನಾಯಕ ಬಿ ಕೆ ಹರಿಪ್ರಸಾದ್​, ಇಂದಿನ ಪ್ರತಿಪಕ್ಷಗಳ ನಾಯಕರ ಭೋಜನ ಕೂಟ ಉತ್ತಮ ಸಂಕೇತದೊಂದಿಗೆ ಪ್ರಾರಂಭವಾಯಿತು. 2024 ರಲ್ಲಿ ಬಿಜೆಪಿಯ ಅಂತ್ಯಕ್ಕೆ ಏನೆಲ್ಲ ರಣತಂತ್ರ ಹೆಣೆಯಬೇಕು ಎಂಬ ಬಗ್ಗೆ ಕೂಲಂಕಷ ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ, ದೆಹಲಿಯಲ್ಲಿ ನಾಳೆ ನಡೆಯಲಿರುವ ಎನ್‌ಡಿಎ ಸಭೆಯ ಬಗ್ಗೆ ಪತ್ರಕರ್ತರು ಕೇಳಿದಾಗ, "ಅದು ರಾಷ್ಟ್ರೀಯ ವಿಪತ್ತು ಮೈತ್ರಿ" ಎಂದು ವ್ಯಂಗ್ಯವಾಡಿದರು.

ಯಾರೆಲ್ಲಾ ಭಾಗಿ: ನಾಳಿನ ವಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ನಿರೀಕ್ಷಿಸಿದ 26 ಪಕ್ಷಗಳ ನಾಯಕರಲ್ಲಿ ಬಹುತೇಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದಿನ ಔತಣಕೂಟದಲ್ಲಿ ಜಾರ್ಖಂಡ್ ಸಿಎಂ, ಜೆಎಂಎಂ ನಾಯಕ ಹೇಮಂತ್ ಸೊರೇನ್, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್​ನ ಓಮರ್ ಅಬ್ದುಲ್ಲಾ, ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಶಿವಸೇನೆಯ ಉದ್ದವ್ ಠಾಕ್ರೆ, ಆದಿತ್ಯ ಠಾಕ್ರೆ, ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಎಸ್​ಪಿಯ ಅಖಿಲೇಶ್​ ಯಾದವ್​ ಸೇರಿದಂತೆ ಮುಂತಾದ ನಾಯಕರು ಭಾಗವಹಿಸಿದ್ದರು.

ಇದನ್ನೂ ಓದಿ: ಮಹಾ ಘಟಬಂಧನ್ ನಾಯಕರ ಔತಣಕೂಟ ಆರಂಭ.. 40ಕ್ಕೂ ಹೆಚ್ಚು ನಾಯಕರು ಭಾಗಿ

Last Updated : Jul 17, 2023, 9:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.