ETV Bharat / state

Online​​ನಲ್ಲೇ ಕಳೆದು ಹೋಯ್ತು ಪಾಠ-ಪ್ರವಚನ: ವರ್ಷದ ಮೆಲುಕು ನೋಟ - Strike of school college employees

ವರ್ಷದ ಆರಂಭದಲ್ಲೇ ಸರ್ಕಾರಕ್ಕೆ ಎದುರಾಗಿದ್ದು ಶಾಲಾ ಕಾಲೇಜು ನೌಕರರ ಮುಷ್ಕರ. ರಕ್ತ ಕೊಟ್ಟೆವು- ಪಿಂಚಣಿ ಬಿಡೆವು ಅಂತ ಮತ್ತೊಮ್ಮೆ‌ ಅನುದಾನಿತ ಶಾಲಾ- ಕಾಲೇಜು ನೌಕರರು ಬೀದಿಗಿಳಿದರು. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಧ್ಯೆ ಸೋಶಿಯಲ್ ಮೀಡಿಯಾ ವಾರ್ ನಡೆಯಿತು. ಮೆಡಿಕಲ್ ಸೀಟ್ ಬ್ಲಾಕಿಂಗ್​ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ಅಕ್ರಮದ ಬಗ್ಗೆ ದಾಖಲೆಗಳಿದ್ದರೆ ಕೊಡಲಿ ಅಂತ ಸುಧಾಕರ್ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು.

one-year-detailed-information-about-education-system
ವರ್ಷವೆಲ್ಲ ಆನ್​ಲೈನ್​​ನಲ್ಲೇ ಕಳೆದು ಹೋಯ್ತು ಪಾಠ-ಪ್ರವಚನ
author img

By

Published : Dec 27, 2020, 11:01 PM IST

ಬೆಂಗಳೂರು: ರಾಜ್ಯದ ಶೈಕ್ಷಣಿಕ ವರ್ಷವನ್ನೇ ಅದಲು ಬದಲು ಮಾಡಿದ ವರ್ಷ ಅಂದರೆ ಅದು 2020‌. ಕೋವಿಡ್ ಕಾರಣಕ್ಕೆ ಶಾಲಾ-ಕಾಲೇಜುಗಳ ಬಾಗಿಲಿಗೆ ಬೀಗ ಹಾಕಲಾಯಿತು. ಭಾಗಶಃ ಶೈಕ್ಷಣಿಕ ವರ್ಷದ ಪಾಠ ಪ್ರವಚನ ಆನ್​ಲೈನ್​ನಲ್ಲೇ ನಡೆದು ಹೋಯ್ತು. ಸಾಮಾನ್ಯ ವರ್ಷಕ್ಕಿಂತ ಈ ವರ್ಷ ಕೋವಿಡ್ ಕಾರಣಕ್ಕೆ ಮುಖ್ಯ ಪರೀಕ್ಷೆಗಳಾದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆ, ಸಿಇಟಿ ಪರೀಕ್ಷೆಯು ಶುಚಿತ್ವದ ರಕ್ಷಣೆಯಲ್ಲಿ ನಡೆಯಿತು.

ಈ ನಡುವೆ ಶುಲ್ಕ ವಿಚಾರ, ಆನ್ ಲೈನ್ ಕ್ಲಾಸ್ ತಕರಾರು, ಶಾಲೆ ಆರಂಭದ‌ ಚಿಂತನೆ, ಬೀದಿಗೆ ಬಿದ್ದ ಶಿಕ್ಷಕರು, ವೇತನಕ್ಕಾಗಿ ಹೋರಾಟ, ವಿದ್ಯಾಗಮ‌ ಶುರು ಮಾಡಿದ್ದು ಮಧ್ಯೆ ನಿಂತಿದ್ದು ಹೀಗೆ ಹತ್ತಾರು ಸಿಹಿ-ಕಹಿ ವಿಚಾರಗಳಿಗೆ ಸಾಕ್ಷಿಯಾಗಿದ್ದು 2020ನೇ‌ ವರ್ಷ.‌

ಶೈಕ್ಷಣಿಕ ವರ್ಷದಲ್ಲಿ ಆದ ಆಗುಹೋಗುಗಳು

ವರ್ಷದ ಆರಂಭದಲ್ಲೇ ಸರ್ಕಾರಕ್ಕೆ ಎದುರಾಗಿದ್ದು, ಶಾಲಾ ಕಾಲೇಜು ನೌಕರರ ಮುಷ್ಕರ. ರಕ್ತ ಕೊಟ್ಟೆವು- ಪಿಂಚಣಿ ಬಿಡೆವು ಅಂತ ಮತ್ತೊಮ್ಮೆ‌ ಅನುದಾನಿತ ಶಾಲಾ- ಕಾಲೇಜು ನೌಕರರು ಬೀದಿಗಿಳಿದರು. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಧ್ಯೆ ಸೋಶಿಯಲ್ ಮೀಡಿಯಾ ವಾರ್ ನಡೆಯಿತು. ಮೆಡಿಕಲ್ ಸೀಟ್ ಬ್ಲಾಕಿಂಗ್​ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ಅಕ್ರಮದ ಬಗ್ಗೆ ದಾಖಲೆಗಳಿದ್ದರೆ ಕೊಡಲಿ ಅಂತ ಸುಧಾಕರ್ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು.

ಓದುಗರಿಗೆ ದೇಶದಲ್ಲೇ ಮೊದಲ ಡಿಜಿಟಲ್ ಗ್ರಂಥಾಲಯ ಆ್ಯಪ್ ಬಿಡುಗಡೆ ಮಾಡಿದಕ್ಕೆ ಈ ವರ್ಷ ಸಾಕ್ಷಿಯಾಯ್ತು. ಕೋವಿಡ್ ಹಿನ್ನೆಲೆ ಶಾಲಾ-ಕಾಲೇಜು ಆರಂಭವಾಗದ ಕಾರಣ ಆನ್​ಲೈನ್​ ಮೂಲಕ ಪಾಠ ಪ್ರವಚನ ನಡೆಯುತ್ತಿತ್ತು. ‌ಆದರೆ ಶುಲ್ಕ ಯಾಕೆ? ಅಂತಲೂ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಗರಂ ಆಗಿತ್ತು. ಲಾಕ್​ಡೌನ್​ ಅವಧಿ ವಿಸ್ತರಣೆ ಹಿನ್ನೆಲೆ ಸಾಕಷ್ಟು ಸಲ ಪರೀಕ್ಷೆಗಳು ಮುಂದೂಡಲಾಗಿತ್ತು.

ಪುನರ್ಮನನ ತರಗತಿ ದೂರದರ್ಶನದಲ್ಲಿ ವೀಕ್ಷಣೆ

ಕೋವಿಡ್ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ಪೋಷಕರು ಸಿಲುಕಿದ್ದರು. ‌ಹೀಗಾಗಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಶುಲ್ಕ ಹೆಚ್ಚಳ ಮಾಡುವಂತಿಲ್ಲ ಅಂತ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದರು. ಶಾಲೆಗಳು ಆರಂಭವಾಗದ ಕಾರಣಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಪುನರ್ಮನನ ತರಗತಿಯನ್ನ ದೂರದರ್ಶನ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು.

ಕಂಟೈನ್ಮೆಂಟ್ ಏರಿಯಾದಲ್ಲಿ ವಾಸವಿರುವ ಬೆಂಗಳೂರು ವಿವಿ ಶಿಕ್ಷಕರಿಗೆ ಕಚೇರಿಗೆ ಹಾಜರಾಗಲು ವಿನಾಯಿತಿ ನೀಡಲಾಗಿತ್ತು. ಆದರೆ ಇತರರು ಕಡ್ಡಾಯವಾಗಿ ಹಾಜರಾಗಬೇಕಿತ್ತು. 'ನೋ ಸ್ಕೂಲ್ಸ್​' ಅಭಿಯಾನಕ್ಕೂ ಸಾಕ್ಷಿಯಾಗಿದ್ದು ಇದೇ ವರ್ಷ.‌ ಕೊರೊನಾ ಜೀರೋ ಬರೋವರೆಗೆ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಅಂತ ಪೋಷಕರು ಅಭಿಯಾನವನ್ನೇ ಮಾಡಿದರು.

ಸೇತುಬಂಧ ತರಗತಿಗಳ ಆರಂಭ

ಎಲ್​ಕೆಜಿ- ಯುಜಿಕೆ, ಪ್ರಾಥಮಿಕ ತರಗತಿ ಮಕ್ಕಳಿಗೆ ಆನ್​ಲೈನ್​ ಶಿಕ್ಷಣ ನಡೆಸುವಂತಿಲ್ಲ ಅಂತ ಸಚಿವ ಸುರೇಶ್ ಕುಮಾರ್‌ ಆದೇಶಿಸಿದ್ದರು.‌ ಕೋವಿಡ್ ನಡುವೆಯೂ ಪೋಷಕರ ಅನುಮತಿ ಪಡೆದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಇಲಾಖೆಯು ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಿತು.‌ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೇತುಬಂಧ ತರಗತಿಗಳ ಆರಂಭವಾದವು.

ಕೋವಿಡ್ ಹಿನ್ನೆಲೆ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ರದ್ದು ಮಾಡಿ, ವಾರ್ಷಿಕ ಪರೀಕ್ಷೆ ಆಧಾರದ ಮೇಲೆ ಎಲ್ಲರನ್ನೂ ಪಾಸ್ ಮಾಡಲಾಯಿತು.ರಾಜ್ಯದ ಮಕ್ಕಳಿಗಾಗಿ ಆನ್​ಲೈನ್​ ಶಿಕ್ಷಣ ವಂಚಿತರಿಗಾಗಿ ವಿದ್ಯಾಗಮ ಯೋಜನೆ ಶುರುವಾಯ್ತು. ಬಳಿಕ ನಾನಾ ಕಾರಣಕ್ಕೆ ಸ್ಥಗಿತವಾಗಿದ್ದು ದೊಡ್ಡ ಸುದ್ದಿಯಾಗಿತ್ತು.

ಆಹಾರ ಧಾನ್ಯ ವಿತರಣೆ

ಎಸ್ಎಸ್​ಎಲ್​ಸಿ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ, ಸಿಇಟಿ ಪರೀಕ್ಷೆಗಳು ನಡೆದವು. ಕೊರೊನಾದಿಂದ ವಿದ್ಯಾರ್ಥಿಗಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ಕೋಕ್ ಕೊಟ್ಟು ಆಹಾರ ಧಾನ್ಯ ವಿತರಣೆ ನೀಡಲಾಯ್ತು. ಪಿಯು ಉಪನ್ಯಾಸಕರ ನೇಮಕಾತಿ ಆದೇಶ ತಡವಾಗಿದ್ದ ಕಾರಣ ಬರೋಬ್ಬರಿ 10 ದಿನಗಳಿಗೂ ಹೆಚ್ಚು ದಿನ ಧರಣಿ ನಡೆಯಿತು. ಬಳಿಕ ಆರ್ಥಿಕ ಕಾರಣ ನೀಡಿದ ಸರ್ಕಾರ ಧರಣಿಗೆ ಮಣಿದು ನೇಮಕಾತಿ ಪತ್ರ ನೀಡಲಾಯಿತು.

ಓದಿ: ಹಾದಿ ತಪ್ಪಿದ ದೆಹಲಿ ರೈತರ ಚಳವಳಿಗೆ ಸಹಮತವಿಲ್ಲ: ಪೇಜಾವರ ವಿಶ್ವಪ್ರಸನ್ನ ತೀರ್ಥರು

ಆನ್​ಲೈನ್ ಶಿಕ್ಷಣ ಎಫೆಕ್ಟ್ ನಿಂದ ಮಕ್ಕಳ ಕಣ್ಣಿಗೆ ತೊಂದರೆ ಆಗ್ತಿದೆ ಅನ್ನೋ ಕಾರಣಕ್ಕೆ ತೋಚಿದಂತೆ ಕ್ಲಾಸ್ ಮಾಡುವಂತಿಲ್ಲ ಅಂತ ಸರ್ಕಾರ ಮತ್ತೊಂದು ಆದೇಶವನ್ನು ಜಾರಿ ಮಾಡ್ತು. ಇಷ್ಟೆಲ್ಲದರ ನಡುವೆ 8 ತಿಂಗಳ ಬಳಿಕ ನವೆಂಬರ್ 17ರಿಂದ ಕಾಲೇಜು ಆರಂಭವಾದವು. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಕ್ಲಾಸ್‌ಗೆ ಹಾಜರ್‌‌ ಆಗಿ ಸಾಮಾಜಿಕ ಅಂತರ ಪಾಲನೆ ಮಾಡಬೇಕಾಯಿತು.

ಖಾಸಗಿ ಶಾಲೆಗಳು ಪ್ರತಿಭಟನೆ

ಬೆಂಗಳೂರು ಕೇಂದ್ರ ವಿವಿ ಕುಲಪತಿ ಜಾಫೆಟ್ ಅಧಿಕಾರ ಮುಕ್ತಾಯವಾಗಿ ಪ್ರೊ. ನರಸಿಂಹ ಮೂರ್ತಿ ಗೆ ಅಧಿಕಾರ ಹಸ್ತಾಂತರ ಮಾಡಲಾಯ್ತು. ತಿಂಗಳ ಕೊನೆಯಲ್ಲಿ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರವಿಲ್ಲದೆ ಇರೋ ಹತ್ತು ಸಾವಿರ ಖಾಸಗಿ ಶಾಲೆಗಳು ಬಂದ್ ಆಗುವ ಆದೇಶಕ್ಕೆ ತಿರುಗಿ ಬಿದ್ದ ಖಾಸಗಿ ಶಾಲೆಗಳು ಪ್ರತಿಭಟನೆ ನಡೆಸಿದ್ದವು. ಈಗಲೂ ನಡೆಸುತ್ತಲೇ ಇವೆ.

ಶಾಲಾ ಶುಲ್ಕ ಕಟ್ಟಿಲ್ಲ ಅಂದರೆ ಆನ್​ಲೈನ್​ ಕ್ಲಾಸ್​ ನಡೆಸೋಲ್ಲ ಅಂತ ಖಾಸಗಿ ಅನುದಾನ ರಹಿತ ಶಾಲಾ ಒಕ್ಕೂಟ ಮುಷ್ಕರ ನಡೆಸಿದವು. ಆನ್​ಲೈನ್​ನಲ್ಲಿ ಸಿಲಬಸ್ ಕಂಪ್ಲೀಟ್ ಆಗಿಲ್ಲ. ಹೀಗಿರುವಾಗ ಆಫ್ ಲೈನ್ ಎಕ್ಸಾಂ ಹೇಗೆ ಮಾಡ್ತೀರಾ?? ಅಂತ ವೈದ್ಯಕೀಯ ವಿದ್ಯಾರ್ಥಿಗಳು ತಿರುಗಿ ಬಿದ್ದಿದ್ದರು. ಬಳಿಕ ವೈದ್ಯಕೀಯ ಪರೀಕ್ಷೆಗಳನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಮುಂದೂಡಿತ್ತು.

ಶಿಕ್ಷಕರನ್ನು ಉಳಿಸುವಂತೆ ಒತ್ತಾಯ

ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ ಪ್ರೊ.ಬಿ.ತಿಮ್ಮೇಗೌಡ ನೇಮಕವಾದರು. ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದ ಶಿಕ್ಷಕರು, ಬೀದಿಗಿಳಿದು ಬೃಹತ್ ರ್ಯಾಲಿ ನಡೆಸಿದರು.‌ ಶಿಕ್ಷಕರನ್ನ ಉಳಿಸುವಂತೆ ಒತ್ತಾಯ ಮಾಡಿದರು.

ಶಾಲೆ ಆರಂಭ ಯಾವಾಗ? ಅನ್ನೋ ಪ್ರಶ್ನೆಗೆ ಸರ್ಕಾರ, ಜನವರಿ 1 ರಿಂದ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭ ಮಾಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದರು. ಆನ್​ಲೈನ್​ ಕ್ಲಾಸ್ ಬಂದ್ ಗೆ ಖಾಸಗಿ ಶಾಲೆಗಳ ವಿರುದ್ಧ ತಿರುಗಿ ಬಿದ್ದ ಪೋಷಕರು, ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇವೆಲ್ಲವೂ 2020ರ ವರ್ಷಕ್ಕೆ ಸಾಕ್ಷಿಯಾದ ವಿಷಯಗಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.