ಬೆಂಗಳೂರು : ಓಲಾ, ಉಬರ್ ಮತ್ತು ಟ್ಯಾಕ್ಸಿ ಪ್ರಯಾಣ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿರವುದಾಗಿ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಖಾಸಗಿಯವರಿಗೆ ತೀರಾ ಅವರ ಹಕ್ಕು ಕಸಿಯಲು ಸಾಧ್ಯವಿಲ್ಲ. ಕನಿಷ್ಠ ಮತ್ತು ಗರಿಷ್ಟ ದರ ನಿಗದಿ ಮಾಡಿದ್ದೇವೆ. ಅದರಂತೆ ಹೋದರೆ ಸಮಸ್ಯೆಯಾಗಲ್ಲ ಎಂದರು.
ಚಾಲಕರು ಕಡಿಮೆ ದರಕ್ಕೆ ಹೋದರೆ ಕಷ್ಟ. ಇದು ಅವರಿಗೂ ಸಮಸ್ಯೆಯಾಗಬಹುದು ಎಂದು ಸಚಿವ ಸವದಿ ಹೇಳಿದರು.
ಇದನ್ನೂ ಓದಿ.. ಸಾವಿನಂಚಿಗೆ ಹೋದರೂ ತನ್ನ ಗುರಿ ಮಾತ್ರ ಕೈಬಿಡಲಿಲ್ಲ'ಜಮುನಾ'.. ಕಾನನವೇ ಈಕೆಗೆ ಸರ್ವಸ್ವ!