ETV Bharat / state

ಮನೆ ಮನೆಗೆ ಪೌಷ್ಟಿಕಾಂಶ ಆಹಾರ ಪದಾರ್ಥಗಳ ವಿತರಣೆ

ಲಾಕ್​ಡೌನ್‌ ವಿಸ್ತರಣೆ ಆಗುತ್ತಿರುವ ನಿಟ್ಟಿನಲ್ಲಿ ಈಗಾಗಲೇ ಒಂದು ತಿಂಗಳ ಆಹಾರ ಪದಾರ್ಥಗಳ ಕಿಟ್​ಗಳನ್ನ ಆಶಾ ಕಾರ್ಯಕರ್ತೆಯರ ಮೂಲಕ 94 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ ತಿಳಿಸಿದ್ದಾರೆ.

Nutrition food is distributing to home, directly.
ಮನೆಮನೆಗೆ ಪೌಷ್ಠಿಕಾಹಾರ ವಿತರಿಸಲಾಗುತ್ತಿದೆ: ಕೆ.ಎ.ದಯಾನಂದ
author img

By

Published : May 21, 2020, 3:23 PM IST

ಬೆಂಗಳೂರು: ಲಾಕ್​ಡೌನ್​ನಿಂದಾಗಿ ರಾಜ್ಯದಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ ನೀಡುತ್ತಿದ್ದ ಪೌಷ್ಟಿಕ ಆಹಾರ ಸ್ಥಗಿತಗೊಂಡಿತ್ತು. ಸದ್ಯ ಅವರಿಗೆ ಯಾವುದೇ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಮಹಿಳಾ‌ ಮತ್ತು ಮಕ್ಕಳ ‌ಕಲ್ಯಾಣ ಇಲಾಖೆ, ಪೌಷ್ಟಿಕ ಆಹಾರ ಪದಾರ್ಥಗಳ ಕಿಟ್​ಗಳ​​ನ್ನ ಮನೆ ಬಾಗಿಲಿಗೇ ತಲುಪಿಸುವ ಕೆಲಸ ಮಾಡಿದೆ.

ಲಾಕ್​ಡೌನ್‌ ವಿಸ್ತರಣೆ ಆಗುತ್ತಿರುವ ನಿಟ್ಟಿನಲ್ಲಿ ಈಗಾಗಲೇ ಒಂದು ತಿಂಗಳ ಆಹಾರ ಪದಾರ್ಥಗಳ ಕಿಟ್​ಗಳನ್ನ ಆಶಾ ಕಾರ್ಯಕರ್ತೆಯರ ಮೂಲಕ 94 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ ತಿಳಿಸಿದ್ದಾರೆ.

ಮಕ್ಕಳಿಗೆ ಮಧ್ಯಾಹ್ನ ಹಾಲು ಮತ್ತು ಬಿಸಿಯೂಟ ಬದಲು ಮೊಟ್ಟೆ, ಕಾಳು‌‌ ವಿತರಣೆ: ಲಾಕ್​ಡೌನ್​ ಹಿನ್ನೆಲೆ ಪ್ರತಿದಿನ ಮಕ್ಕಳನ್ನು ಅಂಗನವಾಡಿಗೆ ಕರೆದುಕೊಂಡು ಹೋಗಿ ಮಧ್ಯಾಹ್ನ ಹಾಲು ಮತ್ತು ಬಿಸಿಯೂಟ ನೀಡುವುದು ಸದ್ಯ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಅದೇ ವೆಚ್ಚದಲ್ಲಿ ಮಕ್ಕಳಿಗೆ ಮೊಟ್ಟೆ, ಹಾಲಿನ ಪುಡಿ ಸೇರಿದಂತೆ ಇತರೆ ಪದಾರ್ಥಗಳನ್ನ ಅವರ ಮನೆಗೆ ಹೋಗಿ ವಿತರಣೆ ಮಾಡಲಾಗುತ್ತಿದೆ.

ಫಲಾನುಭವಿಗಳ ವಿವರಗಳನ್ನು ನೋಡುವುದಾದರೆ: ರಾಜ್ಯದಲ್ಲಿ 6 ತಿಂಗಳಿಂದ 3 ವರ್ಷದ ಮಕ್ಕಳು ಸುಮಾರು 22.59 ಲಕ್ಷ ಇದ್ದು, 3 ವರ್ಷದಿಂದ 6 ವರ್ಷದ ಮಕ್ಕಳು 16.04 ಲಕ್ಷ ಇದ್ದಾರೆ. ಗರ್ಭಿಣಿಯರು-4.15 ಲಕ್ಷ, ಬಾಣಂತಿಯರು-4.02 ಲಕ್ಷ ಇದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು -1.28 ಲಕ್ಷವಿದ್ದು, ಇತರೆ ಫಲಾನುಭವಿಗಳು 12 ಸಾವಿರ ಇದ್ದಾರೆ.

ಇಲಾಖೆ ನೀಡುವ ಕಿಟ್​ನಲ್ಲಿ ಏನೆಲ್ಲ ಇರಲಿದೆ?: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನೀಡುವ ಆಹಾರ ಪದಾರ್ಥಗಳ ಕಿಟ್​ನಲ್ಲಿ ಅಂಗನವಾಡಿ ಮಕ್ಕಳಿಗೆ 15 ದಿನಕ್ಕೆ ಆಗುವಷ್ಟು ಆಹಾರ ಧಾನ್ಯ ಹಾಗೂ ದಿನಕ್ಕೆ 9 ರೂ. ವೆಚ್ಚದ 4 ಮೊಟ್ಟೆ, ( ತೀವ್ರ ಅಪೌಷ್ಟಿಕತೆ ಬಳುತ್ತಿರುವವರಿಗೆ ಹೆಚ್ಚುವರಿ ಮೊಟ್ಟೆ) ಹಾಲಿನ ಪುಡಿ, ಅಕ್ಕಿ, ತೊಗರಿ ಬೇಳೆ, ಹೆಸರುಕಾಳು ಸೇರಿದಂತೆ ವಿವಿಧ ಪೌಷ್ಟಿಕ ಆಹಾರ ಪದಾರ್ಥಗಳು ಇರಲಿವೆ.

6 ತಿಂಗಳಿಂದ 3 ವರ್ಷದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಹಾಲಿನ ಪುಡಿ, ಪೌಷ್ಟಿಕಾಂಶ ಮತ್ತು ಕಬ್ಬಿಣಾಂಶ ಹೊಂದಿರುವ ಕಾಳುಗಳನ್ನು ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.