ETV Bharat / state

ರಾಜ್ಯದಲ್ಲಿಂದು 100ರ ಗಡಿ ದಾಟಿದ ಮೃತರ ಸಂಖ್ಯೆ: 5,985 ಜನರಲ್ಲಿ ಕೊರೊನಾ ಪತ್ತೆ - coronavirus latest news

ರಾಜ್ಯ ರಾಜಧಾನಿಯಲ್ಲೂ ಇಂದು 1,948 ಹೊಸ ಸೋಂಕಿತರು ಪತ್ತೆಯಾಗಿದ್ದು, ಈವರೆಗೆ 74,185 ಜನರಿಗೆ ಸೋಂಕು ತಗುಲಿದೆ. 22 ಮಂದಿ ಬೆಂಗಳೂರು ಒಂದರಲ್ಲೇ ಕೋವಿಡ್​ನಿಂದ ಮೃತಪಟ್ಟಿದ್ದು, 1,240 ಜನರು ಬಲಿಯಾಗಿದ್ದಾರೆ. 33,815 ಸಕ್ರಿಯ ಪ್ರಕರಣಗಳು ಬಾಕಿ ಇದ್ದು, 39,129 ಜನರು‌ ಗುಣಮುಖರಾಗಿದ್ದಾರೆ.

coronavirus latest news
ಕೊರೊನಾ ವೈರಸ್ ನ್ಯೂಸ್
author img

By

Published : Aug 9, 2020, 8:47 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, 107 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ 3,198 ಜನರು ಕೊರೊನಾಗೆ ಬಲಿಯಾಗಿದ್ದಾರೆ.

ಇಂದು ಒಂದೇ ದಿನ 5,985 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 1,78,087 ಖಚಿತ ಪ್ರಕರಣಗಳು ಪತ್ತೆಯಾಗಿವೆ. 93,908 ಜನ ಗುಣಮುಖರಾಗಿದ್ದು, 80,973 ಸಕ್ರಿಯ ಪ್ರಕರಣಗಳಿವೆ. 678 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‌ಬರೋಬ್ಬರಿ 3,83,377 ಮಂದಿ ನಿಗಾದಲ್ಲಿದ್ದಾರೆ.

ರಾಜ್ಯ ರಾಜಧಾನಿಯಲ್ಲೂ ಇಂದು 1,948 ಹೊಸ ಸೋಂಕಿತರು ಪತ್ತೆಯಾಗಿದ್ದು, ಈವರೆಗೆ 74,185 ಜನರಿಗೆ ಸೋಂಕು ತಗುಲಿದೆ. 22 ಮಂದಿ ಬೆಂಗಳೂರು ಒಂದರಲ್ಲೇ ಕೋವಿಡ್​ನಿಂದ ಮೃತಪಟ್ಟಿದ್ದು, 1,240 ಜನರು ಬಲಿಯಾಗಿದ್ದಾರೆ. 33,815 ಸಕ್ರಿಯ ಪ್ರಕರಣಗಳು ಬಾಕಿ ಇದ್ದು, 39,129 ಜನರು‌ ಗುಣಮುಖರಾಗಿದ್ದಾರೆ.

ಮೃತದೇಹ ಹಸ್ತಾಂತರಕ್ಕೆ ಸಚಿವರ ಕ್ರಮ:

ಸಾಗರ್ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದ ಕುಮಾರಸ್ವಾಮಿ ಲೇಔಟ್​ನ ರೋಗಿಯ ಮೃತದೇಹ ಹಸ್ತಾಂತರಕ್ಕೆ ಸಚಿವ ಡಾ.ಕೆ.ಸುಧಾಕರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಎರಡು ದಿನಗಳಿಂದ ಮೃತದೇಹವನ್ನು ಇಟ್ಟುಕೊಂಡಿದ್ದ ಆಸ್ಪತ್ರೆಯ ಸಿಬ್ಬಂದಿ, 9 ಲಕ್ಷ ರೂ. ಶುಲ್ಕ ಪಾವತಿಸಿದ ಬಳಿಕವೇ ಮೃತದೇಹ ಹಸ್ತಾಂತರಿಸುವುದಾಗಿ ಕುಟುಂಬ ಸದಸ್ಯರಿಗೆ ಹೇಳಿದ್ದರು.

ಹಣ ಪಾವತಿಸಿದ ನಂತರ ಮೃತದೇಹ ಕೊಡುತ್ತೇವೆ ಎಂದು ಹೇಳಿ ಕುಟುಂಬದವರನ್ನು ಹಿಂಸೆ ಮಾಡಿರುವುದು ಖಂಡನೀಯ. ಕೊರೊನಾ ಸಂಕಷ್ಟದ ಕಾಲದಲ್ಲಿ ಹಣ ಗಳಿಸುವುದು ಖಾಸಗಿ ಆಸ್ಪತ್ರೆಗಳಿಗೆ ಮಾನದಂಡವಾಗಬಾರದು. ಆಸ್ಪತ್ರೆ ಮುಖ್ಯಸ್ಥರೊಂದಿಗೆ ಮಾತನಾಡಿ, ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಇತ್ತ ಈ ವಿಷಯ ಆರೋಗ್ಯ ಸಚಿವ ಶ್ರೀರಾಮುಲು ಅವರ ಗಮನಕ್ಕೂ ಬಂದ ಕೂಡಲೇ ಮೃತದೇಹವನ್ನ ಕುಟುಂಬಕ್ಕೆ ಹಸ್ತಾಂತರಿಸಲು ನೆರವಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.