ETV Bharat / state

ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ರೆ ಹುಷಾರ್​... ರೌಡಿಗಳಿಗೆ ಚಳಿ ಬಿಡಿಸಿದ್ರು ಡಿಸಿಪಿ ಶಶಿಕುಮಾರ್​

author img

By

Published : Aug 8, 2019, 8:24 PM IST

ಉತ್ತರ ವಿಭಾಗದ ರೌಡಿಗಳಿಗೆ ಪರೇಡ್ ನಡೆಸಿದ ಡಿಸಿಪಿ ಶಶಿಕಕುಮಾರ್, ಒಟ್ಟು 781 ಜನ ರೌಡಿ ಶೀಟರ್​ಗಳನ್ನ ಕರೆಸಿ, ಚಳಿ ಬಿಡಿಸಿದ್ರು. ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ರೆ ಗೂಂಡಾ ಕಾಯ್ದೆ, ಸಿಆರ್​ಪಿಸಿ ಸೆಕ್ಷನ್ 110 ಹಾಕುವುದಾಗಿ ಎಚ್ಚರಿಕೆ ನೀಡಿದ್ರು.

ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್

ಬೆಂಗಳೂರು: ಉತ್ತರ ವಿಭಾಗದ ರೌಡಿಗಳಿಗೆ ಇಂದು ಪರೇಡ್ ನಡೆಸಿದ ಡಿಸಿಪಿ ಶಶಿಕಕುಮಾರ್ ಫುಲ್ ಕ್ಲಾಸ್ ತೆಗೆದುಕೊಂಡರು. ಒಟ್ಟು 781 ಜನ ರೌಡಿ ಶೀಟರ್​ಗಳನ್ನ ಕರೆಸಿ, ಅಕ್ರಮ ಚಟುವಟಿಕೆ ನಡೆಸಿದ್ರೆ ಗೂಂಡಾ ಕಾಯ್ದೆ, ಸಿಆರ್​ಪಿಸಿ ಸೆಕ್ಷನ್ 110 ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್

ನೂತನ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರೌಡಿಗಳ‌ ಮೇಲೆ ನಿಗಾವಹಿಸುವಂತೆ ಸೂಚಿಸಿದ್ರು. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಮೈದಾನದಲ್ಲಿ ಇಂದು ರೌಡಿ ಪರೇಡ್ ನಡೆಸಲಾಯ್ತು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಶಶಿಕುಮಾರ್ ಬಕ್ರಿದ್, ವರಮಹಾಲಕ್ಷ್ಮಿ ಹಾಗೂ 15ರಂದು ಸ್ವಾತಂತ್ರ್ಯ ದಿನಾಚರಣೆ ಹಬ್ಬದ ಹಿನ್ನೆಲೆ ಉತ್ತರ ವಿಭಾಗ 781 ರೌಡಿಗಳ ಪರೇಡ್ ನಡೆಸಲಾಗಿದೆ. ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಅನೇಕ ವಿಚಾರಗಳ ಕುರಿತು ವಿಚಾರಿಸಲು ರೌಡಿಶೀಟರ್​ಳನ್ನ ಕರೆ ತರಲಾಗಿದೆ.

ಸನ್ನಡತೆ ಆಧಾರದ ಮೇಲೆ ಕೆಲವು ರೌಡಿಶೀಟರ್ಸ್ ಪಟ್ಟಿಯಿಂದ ಕೈಬಿಡಲು ವರದಿ ಒಪ್ಪಿಸಿದ್ದೇವೆ. ಇಲ್ಲಿ ಬಂದವರ ವೇಷಭೂಷಣ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತಿದ್ದು, ಕರೆದು ಬುದ್ಧಿವಾದ ಹೇಳಿದ್ದೇವೆ ಎಂದರು. ಹಾಗೆ ರೌಡಿಗಳಿಂದ ಸಾರ್ವಜನಿಕರಿಗೆ ತೊಂದರೆ‌ಯಾಗದ ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮುಂಜಾಗೃತ ಕ್ರಮವಾಗಿ ರೌಡಿಶೀಟರ್ಸ್ ಗಳಿಂದ ಮುಂದೆ ತಪ್ಪಾಗದಂತೆ ಸಹಿ ಹಾಕಿಸಿಕೊಳ್ಳಲಾಗಿದೆ. ಕೆಲವರ ಮೊಬೈಲ್ ಹಾಗೂ ಬೈಕ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತೆ. ಒಂದು ವೇಳೆ ರೌಡಿ ಚಟುವಟಿಕೆ ಕಂಡು ಬಂದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದ ಮಾಹಿತಿ ನೀಡಿದ್ರು.

Intro:ಉತ್ತರ ವಿಭಾಗದ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಪಿ ಶಶಿಕುಮಾರ್

ಉತ್ತರ ವಿಭಾಗದ ರೌಡಿಗಳಿಗೆ ಇಂದು ಪರೇಡ್ ನಡೆಸಿ ಉತ್ತರ ವಿಭಾಗ ಡಿಸಿಪಿ ಶಶಿಕಕುಮಾರ್ ಫುಲ್ ಕ್ಲಾಸ್ ತೆಗೆದುಕೊಂಡ್ರು‌. ಉತ್ತರ ವಿಭಾಗದ‌ ಒಟ್ಟು 781 ಜನ ರೌಡಿ ಶೀಟರ್ಗಳನ್ನ ಕರೆದು
ಅಕ್ರಮ ಚಟುವಟಿಕೆ ಹೊಂದಿದ್ರೆ ಗೂಂಡಾ ಆಕ್ಟ್ , ಸಿಆರ್ ಪಿಸಿ ಸೆಕ್ಷನ್ 110 ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನೂತನ ಕಮಿಷನರ್ ಅಧಿಕಾರ ಸ್ವೀಕರಿಸಿದ ಬಳಿಕ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರೌಡಿಗಳ‌ ಮೇಲೆ ನಿಗಾವಹಿಸುವಂತೆ ಸೂಚಿಸಿದ್ರುಈ ಹಿನ್ನಲೆಯಲ್ಲಿ ಮಲ್ಲೇಶ್ವರಂ ಮೈದಾನದಲ್ಲಿ ಇಂದು ರೌಡಿ ಪರೇಡ್ ನಡೆಸಲಾಯ್ತು.

ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಮಾಧ್ಯಮ ಜೊತೆ ಮಾತಾಡಿ ಬಕ್ರಿದ್, ವರಮಹಾಲಕ್ಷ್ಮಿ ಹಾಗೂ 15ರಂದು ಸ್ವಾತಂತ್ರ್ಯ ದಿನಾಚರಣೆ ಹಬ್ಬದ ಹಿನ್ನಲೆ ಉತ್ತರ ವಿಭಾಗ 781 ರೌಡಿಗಳ ಪರೇಡ್ ನಡೆಸಲಾಯ್ತು ಕೊಲೆ, ಕೊಲೆಯತ್ನ, ದರೋಡೆ ರಾಬರಿ ಸೇರಿದಂತೆ ಅನೇಕ ರೌಡಿಶೀಟರ್ಸ್ಗಳನ್ನ ಕರೆ ತರಲಾಗಿದೆ.

ಸನ್ನಡತೆ ಆಧಾರದಮೇಲೆ ಕೆಲವು ರೌಡಿಶೀಟರ್ಸ್ ಗಳ ಪಟ್ಟಿಯಿಂದ ಕೈ ಬಿಡಲು ವರದಿ ಒಪ್ಪಿಸಿದ್ದೇವೆ.ಇಲ್ಲಿ ಬಂದವರ ವೇಷಭೂಷಣ ನೋಡಿದ್ರೆ ಹೆದರಿಕೆ ಬರುವ ರೀತಿ ಇದ್ರು.ಕರೆದು ಬುದ್ದಿವಾದ ಹೇಳ್ತಿದ್ದಂತೆ ವಾಲೆಂಟ್ರಿಯಾಗಿ ಇಲ್ಲೆ ಕಟಿಂಗ್ ಶೇವಿಂಗ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ

ಹಾಗೆ ಸಾರ್ವಜನಿಕರಿಗೆ ತೊಂದರೆ‌ಯಾಗದ ರೀತಿ ಕಟ್ಟುನಿಟ್ಟು ವಾರ್ನ್ ಮಾಡಲಾಗಿದೆ.ಮುಂಜಾಗೃತ ಕ್ರಮವಾಗಿ ರೌಡಿಶೀಟರ್ಸ್ ಗಳಿಂದ ಮುಂದೆ ತಪ್ಪಾಗದಂತೆ ಸಹಿ ಹಾಕಿಸಿಕೊಳ್ಳಲಾಗಿದೆ. ಹಾಗೆ ಕೆಲವರ ಮೊಬೈಲ್ ಹಾಗೂ ಬೈಕ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗತ್ತೆ ಒಂದುವೇಳೆ ರೌಡಿ ಆಕ್ಟಿವಿಟಿಸ್ ಕಂಡು ಬಂದ್ರೆ
ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದ್ರು
Body:KN_BNG_04_ROWDY_PARED_7204498Conclusion:KN_BNG_04_ROWDY_PARED_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.