ಬೆಂಗಳೂರು: ಮಹಾನಗರ ಬೆಂಗಳೂರು ಮತ್ತು ಕೋಲ್ಕತ್ತಾದಿಂದ ಸಿಂಗಾಪುರಕ್ಕೆ ತಡೆರಹಿತ ವಿಮಾನ ಸೌಲಭ್ಯವನ್ನು ಇಂದು ಘೋಷಿಸಲಾಗಿದೆ. 18 ಅಕ್ಟೋಬರ್ 2019ರಿಂದ ಬೆಂಗಳೂರು-ಸಿಂಗಾಪುರ-ಬೆಂಗಳೂರು ವಿಮಾನ ಸೌಲಭ್ಯವನ್ನು ವಾರದಲ್ಲಿ ನಾಲ್ಕು ಬಾರಿ ಮತ್ತು 2019 ಅಕ್ಟೋಬರ್ 19ರಿಂದ ಕೋಲ್ಕತ್ತಾ-ಸಿಂಗಾಪುರ-ಕೋಲ್ಕತ್ತಾ ವಿಮಾನ ವಾರದಲ್ಲಿ ಮೂರು ಬಾರಿ ಪ್ರಯಾಣಿಸಲಿದೆ. ಹೊಸ ಅಂತಾರಾಷ್ಟ್ರೀಯ ಸ್ಥಳದ ಜೊತೆಗೆ ಮಿಜೋರಾಮ್‌ನ ಐಜ್ವಾಲ್‌ಗೆ 25ನೇ ದೇಶಿ ಸ್ಥಳವಾಗಿ ಗೋ ಏರ್ ನಿತ್ಯ ವಿಮಾನ ಸಂಚಾರವನ್ನು ಆರಂಭಿಸಿದೆ.
ಗೋ ಏರ್‌ನ ಆರಂಭಿಕ ವಿಮಾನ ಜಿ8 27, 2019 ಅಕ್ಟೋಬರ್ 18ರಂದು ಬೆಂಗಳೂರಿನಿಂದ ಸಿಂಗಾಪುರಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ 19:45ಕ್ಕೆ ಹೊರಡಲಿದೆ. 2019 ಅಕ್ಟೋಬರ್ 19ರಂದು 03:20ಕ್ಕೆ ತಲುಪಲಿದೆ. ರಿಟರ್ನ್ ವಿಮಾನ ಜಿ8 28 ಸಿಂಗಾಪುರದ ಚಂಗಿ ಏರ್‌ಪೋರ್ಟ್‌ನಿಂದ 2019 ಅಕ್ಟೋಬರ್ 19ರಿಂದ 04:50 ಗಂಟೆಗೆ ಹೊರಟು ಬೆಂಗಳೂರಿಗೆ 07:35ಕ್ಕೆ ಆಗಮಿಸಲಿದೆ.
ಗೋ ಏರ್‌ನ ಆರಂಭಿಕ ವಿಮಾನ ಜಿ8 35, 2019 ಅಕ್ಟೋಬರ್ 19ರಂದು ಕೋಲ್ಕತ್ತಾದಿಂದ ಸಿಂಗಾಪುರಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 20:25ಕ್ಕೆ ಹೊರಡಲಿದೆ. 2019 ಅಕ್ಟೋಬರ್ 20ರಂದು 03:35ಕ್ಕೆ ತಲುಪಲಿದೆ. ರಿಟರ್ನ್ ವಿಮಾನ ಜಿ8 36 ಸಿಂಗಾಪುರದಿಂದ 2019 ಅಕ್ಟೋಬರ್ 20ರಂದು 04:40 ಗಂಟೆಗೆ ಹೊರಟು ಕೋಲ್ಕತ್ತಾಗೆ 06:25ಕ್ಕೆ ಆಗಮಿಸಲಿದೆ.
ಐಜ್ವಾಲ್‌ನಿಂದ ನಿತ್ಯ ವಿಮಾನವು ಐಜ್ವಾಲ್‌ನಿಂದ 32 ಕಿ.ಮೀ. ದೂರದಲ್ಲಿರುವ ಲೆಂಗ್‌ಪುಯಿ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸಲಿದೆ. ಗೋ ಏರ್ ವಿಮಾನ ಜಿ8 248 ಗುವಾಹಟಿಯಿಂದ 06:50 ಗಂಟೆಗೆ ಹೊರಟು 07:50ಕ್ಕೆ ಐಜ್ವಾಲ್ ತಲುಪಲಿದೆ ಮತ್ತು ವಿಮಾನ ಜಿ8 249 ಐಜ್ವಾಲ್‌ನಿಂದ 08:40ಕ್ಕೆ ಹೊರಟು ಗುವಾಹಟಿಗೆ 09:50 ಗಂಟೆಗೆ ವಾಪಸಾಗಲಿದೆ.
ಗೋ ಏರ್ ಸದ್ಯ 325ಕ್ಕೂ ಹೆಚ್ಚು ನಿತ್ಯದ ವಿಮಾನಗಳನ್ನು ನಿರ್ವಹಿಸುತ್ತಿದೆ. 2019 ಆಗಸ್ಟ್‌ನಲ್ಲಿ 13.91 ಲಕ್ಷ ಪ್ರಯಾಣಿಕರನ್ನು ಸಾಗಿಸಿದೆ. ಗೋ ಏರ್ 25 ದೇಶಿ ತಾಣಗಳಾದ ಅಹಮದಾಬಾದ್, ಐಜ್ವಾಲ್, ಬಗ್ದೋಗ್ರಾ, ಬೆಂಗಳೂರು, ಭುವನೇಶ್ವರ, ಚಂಡೀಘಡ, ಚೆನ್ನೈ, ದೆಹಲಿ, ಗೋವಾ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕೊಚ್ಚಿ, ಕೋಲ್ಕತ್ತಾ, ಕಣ್ಣೂರು, ಲೇಹ್, ಲಖನೌ, ಮುಂಬೈ, ನಾಗ್ಪುರ, ಪಟ್ನಾ, ಪೋರ್ಟ್ ಪ್ಲೇರ್, ಪುಣೆ, ರಾಂಚಿ ಮತ್ತು ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಗೋ ಏರ್ 8 ಇಂಟರ್‌ನ್ಯಾಷನಲ್ ಸ್ಥಳಗಳಾದ ಫುಕೆಟ್, ಮಾಲೆ (ಸೀಸನಲ್), ಮಸ್ಕಟ್, ಅಬುಧಾಬಿ, ಬ್ಯಾಂಕಾಕ್, ದುಬೈ, ಕುವೈತ್ ಮತ್ತು ಈಗ ಸಿಂಗಾಪುರಕ್ಕೆ ಸಂಪರ್ಕ ಹೊಂದಿದೆ.