ETV Bharat / state

ಕರ್ನಾಟಕದ ಬಿಜೆಪಿ ವಿಜಯರಥ ತಡೆಯಲು ರಾಹುಲ್, ಡಿಕೆ, ಸಿದ್ದುಗೆ ಅಸಾಧ್ಯ: ಅರುಣ್ ಸಿಂಗ್ - ಕರ್ನಾಟಕದ ಬಿಜೆಪಿ ವಿಜಯರಥ

ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯದ ಅಭಿವೃದ್ಧಿಗೆ ನಿರಂತರ ಕೆಲಸ ಮಾಡುತ್ತಿರುವ ಕಾಮನ್ ಮ್ಯಾನ್ ಸಿಎಂ ಬೊಮ್ಮಾಯಿಯವರಿಗೆ ಅವಮಾನ ಮಾಡಿದ ಪಕ್ಷವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ.

Nobody can stop BJP victory
Nobody can stop BJP victory
author img

By

Published : Oct 7, 2022, 10:13 PM IST

ಬೆಂಗಳೂರು: ಕರ್ನಾಟಕದ ಬಿಜೆಪಿ ವಿಜಯರಥವನ್ನು ಕಾಂಗ್ರೆಸ್​ ನಾಯಕರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಂದ ತಡೆಯಲು ಸಾಧ್ಯವೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಪ್ರಶ್ನಿಸಿದರು.

ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಗೋವಾ ಮತ್ತು ಮಣಿಪುರ ಮಾದರಿಯಲ್ಲಿ ಹಿಂದಿಗಿಂತ ಹೆಚ್ಚು ಸ್ಥಾನದೊಂದಿಗೆ ಕರ್ನಾಟಕದಲ್ಲಿ ಅಧಿಕಾರ ನಮ್ಮದಾಗಲಿದೆ ಎಂದರು.

150ಕ್ಕೂ ಹೆಚ್ಚು ಸ್ಥಾನ ಖಚಿತ: ಬಿಜೆಪಿ ಅತ್ಯಂತ ಹೆಚ್ಚು ಸಂಘಟಿತ ಪಕ್ಷ. ಆದ್ದರಿಂದ ನಮಗೆ ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಿದೆ ಎಂದು ಅವರು ತಿಳಿಸಿದರು. ನಮ್ಮ ಕಾರ್ಯಕರ್ತರು ಯಶಸ್ವಿಯಾಗಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಾರೆ ಎಂದು ಮೆಚ್ಚುಗೆ ಸೂಚಿಸಿದರು.

ಬಡವರಿಗಾಗಿ, ರೈತರು ಮತ್ತು ಮಹಿಳೆಯರಿಗಾಗಿ ನರೇಂದ್ರ ಮೋದಿ ಅವರು ಗರಿಷ್ಠ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಹಿಂದಿನ ಆರು ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಮಾಡಿದ್ದಕ್ಕಿಂತ ಹೆಚ್ಚು ಅಭಿವೃದ್ಧಿ ಕಾರ್ಯಗಳು ಮೋದಿ ಅವರ ಅವಧಿಯಲ್ಲಿ ನಡೆದಿವೆ. ರಾಜ್ಯದಲ್ಲೂ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ನಮ್ಮ ಗೆಲುವಿಗೆ ಪೂರಕ ಎಂದರು.

ಇದನ್ನೂ ಓದಿ: SC-STಗೆ ನಾಗಮೋಹನದಾಸ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ : ಸಿದ್ದರಾಮಯ್ಯ ಒತ್ತಾಯ

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ನಳಿನ್​ ಕುಮಾರ್ ಕಟೀಲ್ ಸೇರಿದಂತೆ ಅನೇಕ ನಾಯಕರು ನಮ್ಮಲ್ಲಿದ್ದಾರೆ. ಕೇಂದ್ರದಲ್ಲೂ ಅನೇಕ ಮುಖಂಡರು ನಮ್ಮ ಪಕ್ಷದಲ್ಲಿದ್ದಾರೆ. ಅವರೆಲ್ಲರ ಶ್ರಮದಿಂದ ಪಕ್ಷವು 150ಕ್ಕೂ ಹೆಚ್ಚು ಶಾಸಕರ ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷವು ನಾಯಕರಿಲ್ಲದೆ ಸೊರಗಿದೆ. ದೇಶದ ಅತಿ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇದೆ. ಉತ್ತರಾಖಂಡ, ಉತ್ತರಪ್ರದೇಶ, ಮಣಿಪುರ ಸೇರಿ ಅನೇಕ ರಾಜ್ಯಗಳಲ್ಲಿ ಮತ್ತೊಮ್ಮೆ ಬಿಜೆಪಿಯಿಂದ ಸರ್ಕಾರ ರಚಿಸಿದ್ದೇವೆ. ಇಲ್ಲಿಯೂ ವಿಜಯರಥ ಮುಂದುವರಿಯಲಿದೆ. ಹಿಮಾಚಲ ಪ್ರದೇಶ, ಗುಜರಾತ್​​ನಲ್ಲೂ ನಮ್ಮ ಸರ್ಕಾರ ರಚನೆ ಆಗಲಿದೆ ಎಂದು ತಿಳಿಸಿದರು.

ಕಾರ್ಯಕರ್ತರು ಸಮರ ಸನ್ನದ್ಧರಾಗಬೇಕು: ಕಾರ್ಯಕರ್ತರು ಸಮರ ಸನ್ನದ್ಧರಾಗಬೇಕು. ಅಸ್ತ್ರ, ಶಸ್ತ್ರ ನಮ್ಮಲ್ಲಿದೆ. ನಾಯಕರೂ ಇದ್ದಾರೆ. ಹಗಲಿರುಳೆನ್ನದೆ ನಮ್ಮ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಬಿಜೆಪಿ ನಿರಂತರವಾಗಿ ಎಸ್‍ಸಿ, ಎಸ್‍ಟಿ, ದಲಿತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಒಳಿತಿಗಾಗಿ ಶ್ರಮಿಸುತ್ತಿದೆ. ಆದಿವಾಸಿ ಸಮುದಾಯಕ್ಕೆ ಗೌರವ ನೀಡುವ ದೃಷ್ಟಿಯಿಂದ ಈ ಬಾರಿ ಗೌರವಾನ್ವಿತ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಎಸ್‍ಸಿ/ಎಸ್‍ಟಿ ಸಮುದಾಯಕ್ಕಾಗಿ ಶ್ರಮಿಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತಿತರ ಯಾವುದೇ ಪಕ್ಷಗಳು ನಮಗೆ ಸರಿಸಾಟಿಯಲ್ಲ ಎಂದ ಅವರು, ಮೋದಿ ಅವರು ಸ್ವಚ್ಛತಾ ಜಾಗೃತಿಗಾಗಿ ಮಾಡಿದ ಕಾರ್ಯಗಳು ಶ್ಲಾಘನೀಯ ಎಂದರು.

ಪೌರಕಾರ್ಮಿಕರಿಗೆ ಅವರು ನೀಡಿದ ಗೌರವವನ್ನು ಪ್ರಶಂಸಿಸಿದ ಅರುಣ್ ಸಿಂಗ್, ಬಿಜೆಪಿ ಕಾರ್ಯಕರ್ತರು ಕೋವಿಡ್​​ನಂಥ ಸಂಕಷ್ಟ ಕಾಲ ಸೇರಿ ನಿರಂತರವಾಗಿ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ಎಸ್‍ಸಿ, ಎಸ್‍ಟಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಕೋರ್ ಕಮಿಟಿ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಮಾಡಿದ್ದೇವೆ. ರಾಹುಲ್ ಗಾಂಧಿಯವರು ದಲಿತರ ಮನೆಯಲ್ಲಿ ಊಟ ಮಾಡಿದ್ದರಿಂದ ಏನೂ ಸಾಧನೆ ಆಗುವುದಿಲ್ಲ. ಮನಸ್ಸಿನಲ್ಲಿ ಕೆಲಸದ ಬಗ್ಗೆ ಶ್ರದ್ಧೆ ಅಗತ್ಯ ಎಂದು ನುಡಿದರು.

ಇದನ್ನೂ ಓದಿ: ಗ್ರೂಪ್ ಸಿ ಹುದ್ದೆ ನೀಡಿದ್ದಕ್ಕೆ ಪಕ್ಷ, ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಪ್ರವೀಣ್​ ನೆಟ್ಟಾರು ಪತ್ನಿ ನೂತನ ಕುಮಾರಿ

ದೇಶವಿರೋಧಿ ಶಕ್ತಿಗಳು ಕೈ ಜೋಡಿಸಿವೆ: ಭಾರತ್ ಜೋಡೋ ಯಾತ್ರೆಯಲ್ಲಿ ದೇಶವಿರೋಧಿ ಶಕ್ತಿಗಳು ಕೈ ಜೋಡಿಸಿವೆ. ಪಾಕಿಸ್ತಾನ್ ಜಿಂದಾಬಾದ್ ಕೂಗುವವರು ಅವರ ಜೊತೆಗಿದ್ದಾರೆ. ಕಾಂಗ್ರೆಸ್ ಪಕ್ಷವು ತುಷ್ಟೀಕರಣ ನೀತಿಯನ್ನು ತನ್ನದಾಗಿಸಿಕೊಂಡಿದೆ. ಸಿದ್ದರಾಮಯ್ಯ ಅವರ ಸರ್ಕಾರವು ಪಿಎಫ್‍ಐ ಸಂಘಟನೆ ಮೇಲಿದ್ದ ಪ್ರಕರಣಗಳನ್ನು ರದ್ದು ಮಾಡಿ ಇಲ್ಲಿ ಗಲಭೆಗಳು ಹೆಚ್ಚಲು ಕಾರಣವಾಗಿತ್ತು ಎಂದು ದೂರಿದರು.

ಕೋವಿಡ್ ನಿಯಂತ್ರಣಕ್ಕಾಗಿ ಉಚಿತ ಲಸಿಕೆ, ಉಚಿತ ಪಡಿತರ ನೀಡಿದ್ದು ಮಹತ್ತರ ಸಾಧನೆ. ದೇಶದ ಖಜಾನೆ ಮೇಲೆ ಬಡವರು ಮತ್ತು ರೈತರ ಹಕ್ಕು ಅತ್ಯಂತ ಹೆಚ್ಚಿನದು ಎಂದು ಮೋದಿಜಿ ಹೇಳಿದ್ದರು ಎಂದು ತಿಳಿಸಿದರು. ಆದರೆ, ದೇಶದ ಖಜಾನೆ ಮೇಲೆ ಅಲ್ಪಸಂಖ್ಯಾತರ ಅಧಿಕಾರವಿದೆ ಎಂಬ ಚಿಂತನೆ ಕಾಂಗ್ರೆಸ್‍ನದು ಎಂದು ಟೀಕಿಸಿದರು.

ರಾಮಮಂದಿರಕ್ಕೆ ಕಾಂಗ್ರೆಸ್ ಯಾಕೆ ವಿರೋಧ ವ್ಯಕ್ತಪಡಿಸಿತ್ತು?. ಸಿಎಎಗೆ ಯಾಕೆ ವಿರೋಧ ಮಾಡಿದ್ದೀರಿ?. ವಿರೋಧ-ಟೀಕೆ ಹೊರತುಪಡಿಸಿದರೆ ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಅಯೋಧ್ಯೆ, ಕಾಶಿಗೆ ಪ್ರಧಾನಿಯವರು ತೆರಳಿದ್ದರ ಬಗ್ಗೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಇದೇ ವೇಳೆ ಉಲ್ಲೇಖಿಸಿದರು. ಬಿಜೆಪಿ ದೇಶದ ಸಂಸ್ಕೃತಿಯ ಗೌರವ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದೆ ಎಂದರು.

228ಕ್ಕೂ ಹೆಚ್ಚು ಪುರಾತನ ವಿಗ್ರಹ ವಾಪಸ್: ಇಲ್ಲಿಂದ ಕಳವಾಗಿದ್ದ ಪುರಾತನ ವಿಗ್ರಹಗಳನ್ನು ವಿದೇಶಗಳಿಂದ ವಾಪಸ್ ತರಲು ಕಾಂಗ್ರೆಸ್ ಏನು ಮಾಡಿತ್ತು? ಎಂದು ಕೇಳಿದ ಅವರು, ಕಾಂಗ್ರೆಸ್ ಸರ್ಕಾರವು 6 ದಶಕಗಳ ಕಾಲ ದೇಶ ಆಳ್ವಿಕೆ ವೇಳೆ 13 ವಿಗ್ರಹ ತರಿಸಿಕೊಂಡರೆ, ಮೋದಿ ಅವರು ವಿದೇಶಗಳಿಂದ 228ಕ್ಕೂ ಹೆಚ್ಚು ಪುರಾತನ ವಿಗ್ರಹಗಳನ್ನು ತರಿಸಿಕೊಂಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ತೆರೆ ಮರೆಯ ಹೋರಾಟ ಮಾಡಿದವರನ್ನೂ ಬಿಜೆಪಿ ನೆನಪಿಸಿ ಗೌರವಿಸುತ್ತಿದೆ. ಆದರೆ, ಕಾಂಗ್ರೆಸ್ ಯಾವತ್ತೂ ಇಂಥ ಕಾರ್ಯ ಮಾಡಿಲ್ಲ. ಕಾಂಗ್ರೆಸ್ ಪಕ್ಷದವರು ಕಿಸಾನ್ ಸಮ್ಮಾನ್ ಮಾದರಿಯಲ್ಲಿ ರೈತರ ಖಾತೆಗೆ ಯಾಕೆ ಹಣ ಹಾಕಲಿಲ್ಲ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ರೈತರಿಗೆ ಪ್ರತಿವರ್ಷ ಒಟ್ಟು 10 ಸಾವಿರ ಮೊತ್ತವನ್ನು ಖಾತೆಗೆ ವರ್ಗಾವಣೆ ಮಾಡುತ್ತಿದೆ. ರೈತ ವಿದ್ಯಾನಿಧಿ ನೀಡುವ ಕಾರ್ಯವನ್ನು ಬೊಮ್ಮಾಯಿಯವರ ಸರ್ಕಾರ ಮಾಡಿದೆ. ರಾಹುಲ್ ಗಾಂಧಿಯವರಿಗೆ ಇದು ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು.

ಕಿಸಾನ್ ರೈಲು ಸೇರಿದಂತೆ ರೈತರಿಗಾಗಿ ಅನೇಕ ಯೋಜನೆಗಳು ಜಾರಿಗೊಂಡಿವೆ. ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮೋದಿ ಅವರ ಕಾರ್ಯಕ್ರಮಗಳು ಮತ್ತು ರಾಜ್ಯದಲ್ಲೂ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿ ಎಂದು ಕರೆ ನೀಡಿದರು.

ಇದನ್ನೂ ಓದಿ: ಸರ್ವಪಕ್ಷ ಸಭೆ ಮುಕ್ತಾಯ.. ಎಸ್​​​​​ಟಿಗೆ ಶೇ 7, ಎಸ್​​ಸಿಗೆ ಶೇ 17ರಷ್ಟು ಮೀಸಲು: ನಾಳೆನೇ ಸಚಿವ ಸಂಪುಟ ಸಭೆ ಕರೆದು ಅಂತಿಮ ಕಾರ್ಯಾದೇಶ

ಜನಧನ್ ಮಾದರಿಯ ಯೋಜನೆ ಜಾರಿ, ಶೌಚಾಲಯ ನಿರ್ಮಾಣ ಮಾಡದ ಕಾಂಗ್ರೆಸ್ ಭ್ರಷ್ಟರ ಪಕ್ಷವಾಗಿತ್ತು. ಆದರೆ, ಬಿಜೆಪಿ ಸರ್ವತೋಮುಖ ಅಭಿವೃದ್ಧಿಗೆ ಬದ್ಧತೆ ತೋರಿದೆ ಎಂದರಲ್ಲದೆ, ದೇಶದಲ್ಲಿ ಬಡತನ ಹಾಗೇ ಉಳಿಯಲು ಕಾಂಗ್ರೆಸ್ ಪಕ್ಷವೇ ಕಾರಣ. ಆರು ದಶಕಗಳ ಕಾಲ ಆಡಳಿತ ಮಾಡಿದ್ದ ಕಾಂಗ್ರೆಸ್ ಪಕ್ಷವು ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮಾಡಿದ್ದರೆ ದೇಶದಲ್ಲಿ ಬಡತನ ಇರುತ್ತಿರಲಿಲ್ಲ ಎಂದು ವಿಶ್ಲೇಷಿಸಿದರು.

ಮಾಡಿದ ಅವಮಾನ ಜನ ಕ್ಷಮಿಸಲ್ಲ: ರಾಜ್ಯದ ಅಭಿವೃದ್ಧಿಗೆ ನಿರಂತರ ಕೆಲಸ ಮಾಡುತ್ತಿರುವ ಕಾಮನ್ ಮ್ಯಾನ್ ಸಿಎಂ ಬೊಮ್ಮಾಯಿಯವರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಆಲೂಗಡ್ಡೆ ಹೇಗೆ ಬೆಳೆಯುತ್ತದೆ ಎಂದು ತಿಳಿಯದ ನಾಯಕ ದೇಶದ ಆಡಳಿತ ನಡೆಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಮೂಲಸೌಕರ್ಯ ಕ್ಷೇತ್ರ, ಮನೆಮನೆಗೂ ಜಲ, ತಂತ್ರಜ್ಞಾನ ಕ್ಷೇತ್ರದಲ್ಲಿ ಸೇರಿ ಸರ್ವತೋಮುಖ ಅಭಿವೃದ್ಧಿ ಆಗಿರುವುದನ್ನು ಜನರಿಗೆ ನಿರಂತರವಾಗಿ ತಿಳಿಸಬೇಕು. ಸಕಾರಾತ್ಮಕ ಚಿಂತನೆ ನಮ್ಮದಾಗಲಿ; ವಿಜಯದ ಸಂಕಲ್ಪವನ್ನು ಸ್ವೀಕರಿಸಬೇಕು ಎಂದು ಕಾರ್ಯಕರ್ತರು ಮತ್ತು ಮುಖಂಡರಿಗೆ ಅರುಣ್ ಸಿಂಗ್ ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.