ಬೆಂಗಳೂರು: ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಕಳೆದ 9ನೇ ತಾರೀಖಿನಂದು 24 ರೋಗಿಗಳಿಗೆ ಕಣ್ಣಿನ ಪೊರೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಅವರಲ್ಲಿ ಕೆಲ ರೋಗಿಗಳಿಗೆ ಚಿಕಿತ್ಸೆ ನಂತರ ಕಣ್ಣೇ ಕಾಣದಂತಾಗಿದೆ.
ಇನ್ನು ಈ ಕುರಿತು ಮಿಂಟೋ ಆಸ್ಪತ್ರೆಯ ನಿರ್ದೇಶಕರನ್ನ ಕೇಳಿದರೆ, ಸರ್ಜರಿಯಲ್ಲಿ ಬಳಸಿದ ಔಷಧವೇ ಕಾರಣ ಅಂತಿದ್ದಾರೆ. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಆಕ್ಯುಜೆಲ್ ಎನ್ನುವ ಔಷಧ ಬಳಸಲಾಗುತ್ತದೆ. ಈ ಔಷಧ ಲ್ಯಾಬ್ನಲ್ಲಿ ಪರೀಕ್ಷಿಸಿದಾಗ ಕೀಟಾಂಶ ಇರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಸಂಬಂಧ ಇಂದು ಮಿಂಟೋ ಆಸ್ಪತ್ರೆಗೆ ಡ್ರಗ್ ಕಂಟ್ರೋಲರ್ನಿಂದ ಡ್ರಗ್ ಸ್ಟ್ಯಾಂಡರ್ಡ್ ಲ್ಯಾಬ್ ಟೆಕ್ನಾಲಜಿ ಅವರು ಬಂದು, ಈಗಾಗಲೇ ಸ್ಯಾಂಪಲ್ಸ್ ಕಲೆಕ್ಟ್ ಮಾಡಿಕೊಂಡು ಹೋಗಿದ್ದಾರೆ. ಇದರ ಫಲಿತಾಂಶಕ್ಕೆ ಅಂದಾಜು 15-20 ದಿನವಾದರು ಬೇಕು ಅಂತ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಸುಜಾತಾ ರಾಥೋಡ್ ಮಾಹಿತಿ ನೀಡಿದರು.
ಮಿಂಟೋ ಆಸ್ಪತ್ರೆಯಲ್ಲಿ ಸದ್ಯ ತುರ್ತು ಸರ್ಜರಿ ಚಿಕಿತ್ಸೆಯನ್ನು ಮಾತ್ರ ನಿಲ್ಲಿಸಿದ್ದು, ಈಗಾಗಲೇ ದಿನಾಂಕ ನೀಡಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಒಪಿಡಿ ಸೇವೆ ಮುಂದುವರೆಸಲಾಗುತ್ತಿದೆ. ನಿತ್ಯಾ 100ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದ ಆಸ್ಪತ್ರೆಯಲ್ಲೀಗ ಇದೊಂದು ಘಟನೆ ಬೇಸರ ತಂದಿದೆ ಅಂತಾರೆ. ಸದ್ಯ ಡ್ರಗ್ ಕಂಟ್ರೋಲರ್ನಿಂದ ವರದಿ ಬಂದ ನಂತರವಷ್ಟೇ ಔಷಧದಲ್ಲಿ ಕೀಟಾಂಶ ಇತ್ತಾ? ಇದರಿಂದಲೇ ರೋಗಿಗಳು ಕಣ್ಣು ಕಳೆದುಕೊಂಡ್ರಾ ಎಂಬುದು ತಿಳಿಯಬೇಕಿದೆ.
ಆಕ್ಯುಜೆಲ್ ಬಳಕೆ ಮಾಡದಂತೆ ಆರೋಗ್ಯ ಇಲಾಖೆ ಆದೇಶ:
![Minto Eye Hospital](https://etvbharatimages.akamaized.net/etvbharat/prod-images/kn-bng-03-minto-effect-notice-script-7201801_16072019134221_1607f_1563264741_974.png)
ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಆಕ್ಯುಜೆಲ್ ಎನ್ನುವ ಔಷಧ ಬಳಸಿದ್ದರಿಂದಲೇ ಈ ಸಮಸ್ಯೆ ಉಂಟಾಗಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆ ರಾಜ್ಯ ಸರ್ಕಾರದ ಎಲ್ಲಾ ಆಸ್ಪತ್ರೆಗಳಲ್ಲಿ ಆಕ್ಯುಜೆಲ್ ಬಳಕೆ ನಿಲ್ಲಿಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡ್ರಗ್ ಕಂಟ್ರೋಲರ್ ಕಡೆಯಿಂದ ಆದೇಶ ರವಾನೆಯಾಗಿದೆ.
ಕಳೆದ ಫೆಬ್ರವರಿಯಲ್ಲಿ ಮ್ಯಾನುಫ್ಯಾಕ್ಚರಿಂಗ್ ಆಗಿದ್ದ ಆಕ್ಯುಜೆಲ್-2021ಕ್ಕೆ ಎಕ್ಸ್ಪೆರಿ ಡೇಟ್ ಇರುವುದನ್ನ ಬಳಕೆ ಮಾಡದಂತೆ ಆದೇಶಿಸಿದ್ದು, ಈಗಾಗಲೇ ಎಲ್ಲಿಯಾದರು ಬಳಕೆ ಮಾಡಿದರೆ ಕೂಡಲೇ ಇಲಾಖೆಗೆ ಮಾಹಿತಿ ನೀಡುವಂತೆ ಆದೇಶಿಸಿದೆ ಹಾಗೂ ಮುಂದಿನ ಆದೇಶದವರೆಗೆ ಬಳಸದಂತೆ ಕ್ರಮ ವಹಿಸಲಾಗಿದೆ.