ಬೆಂಗಳೂರು : ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುವುದಕ್ಕೆ ಸಾರ್ವಜನಿಕರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ನಿಸಾರ್ ಅಹಮದ್ ಅವರ ಪುತ್ರ ನವೀದ್ ಈಟಿ ಭಾರತಕ್ಕೆ ತಿಳಿಸಿದ್ದಾರೆ.
ಮನೆಯ ಮುಂಭಾಗ ಪಾರ್ಥೀವ ಶರೀರ ಇಡಲು ಸರ್ಕಾರ ಅವಕಾಶ ನೀಡಿದೆ. ಹಾಗಾಗಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಬಂದು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಬಹುದು ಎಂದು ತಿಳಿಸಿದರು.
ನಾಳೆ ಬೆಳಗ್ಗೆ 11 ಗಂಟೆಗೆ ಮುನಿರೆಡ್ಡಿ ಪಾಳ್ಯದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಅವರ ಆಸೆಯಂತೆಯೇ ಅವರ ಮಡದಿಯ ಗೋರಿ ಪಕ್ಕದಲ್ಲೇ ಅಂತ್ಯ ಸಂಸ್ಕಾರ ನಡೆಸುವುದಾಗಿ ಹೇಳಿದರು.
ಮಗಳು ಅಮೇರಿಕಾದಲ್ಲಿ ಇದ್ದಾರೆ. ಈಗ ಅವರು ಬರುವುದಕ್ಕೆ ಆಗುತ್ತಿಲ್ಲ. ಅವಳು ತಂದೆಯ ಪಾರ್ಥೀವ ಶರೀರ ನೋಡಬೇಕು ಎಂದು ತುಂಬಾ ಹಠ ಮಾಡುತ್ತಿದ್ದು, ಏನ್ ಮಾಡಬೇಕೆಂದು ತೋಚುತ್ತಿಲ್ಲ ಎಂದು ಸೊಸೆ ರುಮೀನಾ ಹೇಳಿದರು.