ಬೆಂಗಳೂರು: ಜನಸಾಮಾನ್ಯರಂತೆ ಇನ್ನು ಮುಂದೆ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ ಕಟ್ಟಬೇಕೆಂದು ನಗರ ಸಂಚಾರ ವಿಭಾರಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಫರ್ಮಾನು ಹೊರಡಿಸಿದ್ದಾರೆ.
ಇದಕ್ಕೆ ಪೂರಕವಾಗಿ ಸದಾಶಿವ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಅವರಿಗೆ ನಿಯೋಜಿಸಲಾಗಿದ್ದ ಸರ್ಕಾರಿ ವಾಹನ (ಕೆಎ-02-ಜಿ-1577) ಇಂದು ನೋ ಪಾರ್ಕಿಂಗ್ನಲ್ಲಿ ನಿಲುಗಡೆಯಾಗಿತ್ತು. ಇದನ್ನು ಗಮಸಿದ ಸಂಚಾರ ವಿಭಾಗದ ಆಯುಕ್ತರು ಟ್ರಾಫಿಕ್ ಇನ್ಸ್ಪೆಕ್ಟರ್ಗೆ 2 ಸಾವಿರ ರೂ. ದಂಡ ವಿಧಿಸಿ ಇನ್ಸ್ಪೆಕ್ಟರ್ ಹಾಗೂ ಚಾಲಕ ಡಿ.ಎಸ್.ನಾಗೇಂದ್ರ ವಿರುದ್ಧ ಇಲಾಖಾ ಶಿಸ್ತು ಕ್ರಮಕ್ಕೆ ಆದೇಶಿಸಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ ಮಾಡದಂತೆ ಸಾರ್ವಜನಿಕರಲ್ಲಿ ನಿಯಮ ಪಾಲಿಸಿ ಕಾನೂನು ಜಾರಿ ಮಾಡುವ ಹೊಣೆ ಪೊಲೀಸರ ಮೇಲಿದೆ. ಸಮವಸ್ತ್ರ ಧರಿಸಿರುವ ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ ತಿದ್ದುಪಡಿ-2019ರ ಕಲಂ 2010 ಬಿ ಅನ್ವಯ ದಂಡ ವಿಧಿಸಬಹುದಾಗಿದೆ.