ಬೆಂಗಳೂರು: ಇಂದು ಹೊಸದಾಗಿ ರಾಜ್ಯದಲ್ಲಿ 8 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರಲ್ಲಿ- 1, ಮಂಡ್ಯದಲ್ಲಿ-1, ದಕ್ಷಿಣ ಕನ್ನಡದಲ್ಲಿ- 2, ಬಾಗಲಕೋಟೆಯಲ್ಲಿ- 2, ವಿಜಯಪುರದಲ್ಲಿ- 2 ಪ್ರಕರಣಗಳು ಸೇರಿಂದತೆ ಒಂದೇ ದಿನ 8 ಜನರಿಗೆ ಸೋಂಕು ತಗುಲಿದೆ. ಈವರೆಗೆ 188 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 19 ಜನರು ಸಾವನ್ನಪ್ಪಿದ್ದಾರೆ.
ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿ ನಂ -466, 50 ವರ್ಷದ ವ್ಯಕ್ತಿ ಏ. 24 ರಂದು ನಗರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ನಿಮೋನಿಯಾ ತೊಂದರೆ, ರಕ್ತದೊತ್ತಡ ಮತ್ತು ಹೆಪಟೈಟಿಸ್-ಸಿ ನಿಂದ ಬಳಲುತ್ತಿದ್ದಾರೆ. ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ ಡಯಾಲಿಸಿಸ್ ಸೇವೆಯನ್ನ ಪಡೆಯುತ್ತಿದ್ದರು. ಆದರೆ ಇಂದು ಬೆಂಗಳೂರಿನ ವಿಕ್ಟೋರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟ್ರಾವೆಲ್ ಹಿಸ್ಟರಿ:
- ರೋಗಿ ನಂ-504: ಬೆಂಗಳೂರಿನ 13 ವರ್ಷದ ಯುವಕನಿಗೆ ಸೋಂಕು-ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
- ರೋಗಿ ನಂ -505: ನಾಗಮಂಡಲ ಮಂಡ್ಯದ 50 ವರ್ಷದ ವ್ಯಕ್ತಿಗೆ ಸೋಂಕು-ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಂಡ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
- ರೋಗಿ ನಂ-506 : ದಕ್ಷಿಣ ಕನ್ನಡದ 45 ವರ್ಷದ ವ್ಯಕ್ತಿಗೆ ಸೋಂಕು-ರೋಗಿ ನಂ,432 ರ ಸಂಪರ್ಕ- ದಕ್ಷಿಣಕನ್ನಡದಲ್ಲಿ ಚಿಕಿತ್ಸೆ.
- ರೋಗಿ ನಂ-507 : ದಕ್ಷಿಣ ಕನ್ನಡದ 80 ವರ್ಷದ ವೃದ್ಧೆಗೆ ಸೋಂಕು-ರೋಗಿ ನಂ,432 ರ ಸಂಪರ್ಕ- ದಕ್ಷಿಣಕನ್ನಡದಲ್ಲಿ ಚಿಕಿತ್ಸೆ.
- ರೋಗಿ ನಂ-508 : ಜಮಖಂಡಿ ಬಾಗಲಕೋಟೆಯ 32 ವರ್ಷದ ಮಹಿಳೆಗೆ ಸೋಂಕು-ರೋಗಿ ನಂ,456ರ ಸಂಪರ್ಕ- ಬಾಗಲಕೋಟೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
- ರೋಗಿ ನಂ-509 : ಜಮಖಂಡಿ ಬಾಗಲಕೋಟೆಯ 21 ವರ್ಷದ ಮಹಿಳೆಗೆ ಸೋಂಕು-ರೋಗಿ ನಂ,456 ರ ಸಂಪರ್ಕ- ಬಾಗಲಕೋಟೆಯಲ್ಲಿ ಆಸ್ಪತ್ರೆಗೆ ದಾಖಲು.
- ರೋಗಿ ನಂ-510 : ವಿಜಯಪುರದ 45 ವರ್ಷದ ವ್ಯಕ್ತಿಗೆ ಸೋಂಕುರೋಗಿ ನಂ,221ರ ಸಂಪರ್ಕ-ವಿಜಯಪುರದಲ್ಲಿ ಚಿಕಿತ್ಸೆ ಮುಂದುವರೆದಿದೆ.
- ರೋಗಿ ನಂ-511:ವಿಜಯಪುರದ 27 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ ಮಾಹಿತಿ ಇಲ್ಲ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ-ವಿಜಯಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.