ETV Bharat / state

ಪೊಲೀಸರಿಗೆ ಅಥವಾ ಕೋರ್ಟ್​ಗೆ ಪಾಸ್​ಪೋರ್ಟ್ ಮುಟ್ಟುಗೋಲು ಹಾಕುವ ಅಧಿಕಾರವಿಲ್ಲ: ಹೈಕೋರ್ಟ್ - ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದಿಂದ ಆದೇಶ

ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್​ ತೀರ್ಪೊಂದನ್ನು ನೀಡಿದ್ದು, ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ಪಾಸ್ಪೋರ್ಟ್ ಮುಟ್ಟುಗೋಲು ಹಾಕುವ ಅಧಿಕಾರವಿಲ್ಲ ಎಂದಿದೆ.

High Court
ಹೈಕೋರ್ಟ್
author img

By

Published : Mar 24, 2022, 4:59 PM IST

Updated : Mar 24, 2022, 7:18 PM IST

ಬೆಂಗಳೂರು: ಪಾಸ್​ ಪೋರ್ಟ್​ಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಪೊಲೀಸರಿಗೆ​ ಅಥವಾ ನ್ಯಾಯಾಲಯಕ್ಕೆ ಪಾಸ್​ಪೋರ್ಟ್ ಮುಟ್ಟುಗೋಲು ಹಾಕಿಟ್ಟುಕೊಳ್ಳುವ ಯಾವುದೇ ರೀತಿಯ ಅಧಿಕಾರವಿಲ್ಲ ಎಂದು ಹೇಳಿದೆ. ಪ್ರಕರಣವೊಂದರ ವಿಚಾರಣೆ ವೇಳೆ ರಾಜ್ಯ ಉಚ್ಚ ನ್ಯಾಯಾಲಯವು ಈ ರೀತಿ ಹೇಳಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ತೀರ್ಪು ನೀಡಿದೆ.

ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಪ್ತಿ ಮಾಡಿರುವ ಪಾಸ್​ಪೋರ್ಟ್​ನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ಕೋರಿ, ಬೆಂಗಳೂರಿನ ಪ್ರವೀಣ್ ಸುರೇಂದಿರನ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಇಂದು ತೀರ್ಪು ಪ್ರಕಟಿಸಿದೆ. ಪೀಠ ತನ್ನ ತೀರ್ಪಿನಲ್ಲಿ, ಸಿಆರ್​​ಪಿಸಿ ಸೆಕ್ಷನ್ 102ರ ಅಡಿ ಪೊಲೀಸರಿಗೆ ದಾಖಲೆಗಳನ್ನು ಜಪ್ತಿ ಮಾಡುವ ಅಧಿಕಾರವಿದೆ ಎಂದಿದೆ.

ಇದನ್ನೂ ಓದಿ: ಲಾಭದಲ್ಲಿ ನಡೆಯುವವರೆಗೂ ಬೆಮೆಲ್ ಮುಚ್ಚಲ್ಲ: ಸಚಿವ ನಿರಾಣಿ ಸ್ಪಷ್ಟನೆ

ಅದೇ ರೀತಿ ಸೆಕ್ಷನ್ 104ರ ಪ್ರಕಾರ, ನ್ಯಾಯಾಲಯಕ್ಕೆ ದಾಖಲೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿದೆ. ಆದರೆ, ಪಾಸ್​ಪೋರ್ಟ್ ಕಾಯ್ದೆ-1967ರ ಸೆಕ್ಷನ್ 10ರಲ್ಲಿ ಪಾಸ್​ಪೋರ್ಟ್ ಬದಲಾವಣೆ, ವಶಪಡಿಸಿಕೊಳ್ಳುವಿಕೆ ಹಾಗೂ ಹಿಂಪಡೆಯುವ ಅಧಿಕಾರ ಪಾಸ್ಪೋರ್ಟ್ ಸಕ್ಷಮ ಪ್ರಾಧಿಕಾರಕ್ಕೆ ಮಾತ್ರವೇ ಇದೆ. ಪಾಸ್ಪೋರ್ಟ್ ಕಾಯ್ದೆಯು ವಿಶೇಷ ಶಾಸನವಾಗಿದ್ದು, ಅದರ ನಿಯಮಗಳ ಮೇಲೆ ಸಿಆರ್​​ಪಿಸಿಯ ನಿಯಮಗಳನ್ನು ಬಳಸಲಾಗದು ಎಂದು ನ್ಯಾಯಾಯಲ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಪಾಸ್ಪೋರ್ಟ್​ನ್ನು ಅರ್ಜಿದಾರರಿಗೆ ಹಿಂದಿರುಗಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಪೀಠ ನಿರ್ದೇಶಿಸಿದೆ. ಅರ್ಜಿದಾರರ ವಿರುದ್ಧದ ಬಾಕಿ ಪ್ರಕರಣ ಇತ್ಯರ್ಥವಾಗುವವರೆಗೆ ದೇಶ ಬಿಟ್ಟು ಹೋಗಬಾರದು ಎಂದೂ ಹೇಳಿದೆ.

Last Updated : Mar 24, 2022, 7:18 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.