ETV Bharat / state

Aditya L1: ಭೂಮಿಯ ಪರ್ಯಾವರಣವನ್ನು ಆದಿತ್ಯ ಎಲ್ 1 ನೌಕೆ ದಾಟಿ ಯಶಸ್ವಿ ಹೆಜ್ಜೆಯನ್ನು ಇರಿಸಿದೆ: ಇಸ್ರೋದ ಮಾಜಿ ವಿಜ್ಞಾನಿ ಗುರುಪ್ರಸಾದ್

ಆದಿತ್ಯ ಎಲ್ 1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಕ್ಕಾಗಿ ಮಾಜಿ ಸಿಎಂಗಳಾದ ಹೆಚ್ ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

author img

By ETV Bharat Karnataka Team

Published : Sep 2, 2023, 4:11 PM IST

Updated : Sep 2, 2023, 10:17 PM IST

nehru-planetarium-where-explained-to-viewers-in-kannada-about-aditya-l1-launching
ಭೂಮಿಯ ಪರ್ಯಾವರಣವನ್ನು ಆದಿತ್ಯ ಎಲ್ 1 ನೌಕೆ ದಾಟಿ ಯಶಸ್ವಿ ಹೆಜ್ಜೆಯನ್ನು ಇರಿಸಿದೆ: ಇಸ್ರೋದ ಮಾಜಿ ವಿಜ್ಞಾನಿ ಗುರುಪ್ರಸಾದ್
ಇಸ್ರೋದ ಮಾಜಿ ವಿಜ್ಞಾನಿ ಗುರುಪ್ರಸಾದ್

ಬೆಂಗಳೂರು: ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಘೋಷಿಸಿದಂತೆ ಆದಿತ್ಯ ಎಲ್ 1 ತನ್ನ ನಿಗದಿತ ಗಮ್ಯದತ್ತ ಮುಖ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿ ರಾಕೆಟ್ ಲಾಂಚ್ ನಿಂದ ಹಿಡಿದು ಭೂಮಿಯ ಪರ್ಯಾವರಣವನ್ನು ನೌಕೆ ದಾಟಿ ಯಶಸ್ವಿ ಹೆಜ್ಜೆಯನ್ನು ಇರಿಸಿದೆ. ಭೂಮಿಯ ಪರಿಭ್ರಮಣೆಯನ್ನು ಈಗಾಗಲೇ ಆರಂಭಿಸಿದೆ ಎಂದು ಇಸ್ರೋದ ಮಾಜಿ ವಿಜ್ಞಾನಿ ಗುರುಪ್ರಸಾದ್ ತಿಳಿಸಿದರು.

ನಗರದ ಹೈ ಗ್ರೌಂಡ್ಸ್​ನ ಚೌಡಯ್ಯ ರಸ್ತೆಯಲ್ಲಿರುವ ನೆಹರು ತಾರಾಲಯದಲ್ಲಿ ಶನಿವಾರ ಆದಿತ್ಯ ಎಲ್ 1 ನೌಕೆ ಉಡಾವಣೆಯ ನೇರ ಪ್ರಸಾರವನ್ನು ದೊಡ್ಡ ಪರದೆಯ ಮೇಲೆ ಕನ್ನಡದ ವೀಕ್ಷಕ ವಿವರಣೆಯೊಂದಿಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜನರ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತ ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡಿದ ಬಳಿಕ ಮಾತನಾಡಿದ ಅವರು, ಚಂದ್ರಯಾನ 3ರ ಯಶಸ್ಸಿನ ನಂತರ ನಮ್ಮ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನೆಹರು ತಾರಾಲಯದಲ್ಲಿ ಆದಿತ್ಯ ಎಲ್ 1 ನೌಕೆ ಉಡಾವಣೆಯ ನೇರ ಪ್ರಸಾರ ವೀಕ್ಷಿಸಿದ ಸಾರ್ವಜನಿಕರು

ಇಸ್ರೋ ಅಧ್ಯಕ್ಷ ಸೋಮನಾಥ್ ಮತ್ತವರ ವಿಜ್ಞಾನಿಗಳ ತಂಡ ಹಗಲಿರುಳೆಲ್ಲದೆ ಶ್ರಮಿಸಿ ಈ ಮಹತ್ತರ ಸಾಧನೆಯನ್ನು ಮಾಡಿದೆ. ವಿಜ್ಞಾನ ಲೇಖಕನಾಗಿ ಕೂಡ ನಾನು ವಿವಿಧ ಭಾವನೆಗಳೊಂದಿಗೆ ಇದನ್ನು ವ್ಯಾಖ್ಯಾನಿಸಬೇಕು ಎಂದೆನಿಸುತ್ತಿದೆ. ಈ ಹಿಂದೆ ಇಂತಹ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಲ್ಲಿ ನಾನು ಕೂಡ ಮಾಡಿದ್ದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ಕೂಡ ಸಾಕಷ್ಟು ಶ್ರಮವಹಿಸಿ ಸಾಮಾನ್ಯ ಜನರಿಗೆ ಬಾಹ್ಯಾಕಾಶ ಜ್ಞಾನವನ್ನು ತಲುಪಿಸಬೇಕು ಎನ್ನುವ ನಿಟ್ಟಿನಲ್ಲಿ ಇಲ್ಲಿ ವಿಶೇಷ ಸಂವಾದ ಮತ್ತು ವೀಕ್ಷಣೆಯ ಸೌಲಭ್ಯವನ್ನು ಕಲ್ಪಿಸಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರಾತ್ಯಕ್ಷಿಕೆಗಳನ್ನು ಸಜ್ಜುಗೊಳಿಸಿ ಮಕ್ಕಳಿಗೂ ಸಹ ಅರ್ಥವಾಗುವಂತೆ ಮಾಡಿದ್ದಾರೆ. ಈ ಅಭಿಯಾನದ ಯಶಸ್ಸಿಗೆ ಮಾಧ್ಯಮಗಳ ಪಾತ್ರವೂ ದೊಡ್ಡದಿದೆ ಎಂದು ಹೇಳಿದರು.

ಆದಿತ್ಯ ಎಲ್1 ಮಿಷನ್ ಯಶಸ್ವಿಯಾಗಿದೆ. ಇನ್ನೂ 120 ದಿನ ಪರಿಭ್ರಮಣೆ ಮಾಡಿ ಹಲೋ ಕಕ್ಷೆಯನ್ನು ತಲುಪಲಿದೆ. ತದನಂತರ ಸೂರ್ಯನ ಛಾಯಾಚಿತ್ರಗಳನ್ನು ಮಾಹಿತಿಯನ್ನು ಇಸ್ರೋದ ಡೇಟಾ ಸೆಂಟರ್​ಗೆ ಕಳುಹಿಸಲಿದೆ. ಈ ಸಂದರ್ಭದಲ್ಲಿ ಇಸ್ರೋ ಸಂಸ್ಥೆಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ಹೇಳಿದರು.

ಆದಿತ್ಯ ಎಲ್ 1 ರಾಕೆಟ್ ಯಶಸ್ವಿಯಾಗಿ ಉಡಾವಣೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ​ಟ್ವೀಟ್ ಮಾಡಿರುವ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಕ್ರಮಗಳ ಸರಮಾಲೆಯನ್ನೇ ಸೃಷ್ಟಿಸುತ್ತಿರುವ ಇಸ್ರೋ ಸೂರ್ಯನ ಅಧ್ಯಯನಕ್ಕೆ ಆದಿತ್ಯ L-1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದು ಶ್ಲಾಘನೀಯ ಎಂದಿದ್ದಾರೆ. ನಮ್ಮೆಲ್ಲಾ ಬಾಹ್ಯಾಕಾಶ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಪರಿಶ್ರಮ, ಬದ್ಧತೆಯನ್ನು ನಾವೆಲ್ಲರೂ ಗೌರವಿಸಿ ಸ್ಮರಿಸೋಣ ಎಂದು ಹೇಳಿದ್ದಾರೆ.

ಚಂದ್ರಯಾನ 3 ಯಶಸ್ಸಿನ ನಂತರ ಸೂರ್ಯನತ್ತ ಗಮನ ಹರಿಸಿ ಆದಿತ್ಯ ಎಲ್ 1 ರಾಕೆಟ್​ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಈ ಐತಿಹಾಸಿಕ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವಿಶ್ವನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವ ನಾಯಕನಾಗುವತ್ತ ಸಾಗುತ್ತಿದ್ದು, ಅದಕ್ಕೆ ಪೂರಕವಾಗಿ ಬಾಹ್ಯಾಕಾಶದಲ್ಲಿಯೂ ಭಾರತ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವ ಮೂಲಕ ವಿಶ್ವವನ್ನು ಭಾರತದೆಡೆಗೆ ನೋಡುವಂತೆ ಮಾಡಿದೆ‌ ಎಂದಿದ್ದಾರೆ. ಇಂತಹ ಮಹೋನ್ನತ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆದಿತ್ಯ ಎಲ್​1 ರಾಕೆಟ್ ಉಡ್ಡಯನ ಯಶಸ್ವಿ .. ಲಾಗ್ರೇಂಜ್​​​ನತ್ತ ಪಯಣ.. ಇಸ್ರೋದಿಂದ ಮತ್ತೊಂದು ಸಾಧನೆ

Last Updated : Sep 2, 2023, 10:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.