ಬೆಂಗಳೂರು: ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ನೈಜೀರಿಯಾ ಪ್ರಜೆಯ ಬಂಧನಕ್ಕೆ ಬಳಸಲಾಗಿದ್ದ PIT NDPS ಕಾಯ್ದೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.
ವಿದೇಶಿ ಪ್ರಜೆ ಮಕುಕಾ ಚುಕುವಾಕ ಎಂಬಾತನ ಬಂಧನಕ್ಕೆ ಈ ಕಾಯ್ದೆ ಅನ್ವಯ ರಾಜ್ಯದಲ್ಲಿ ಮೊದಲ ಬಾರಿಗೆ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಈತನ ಮೇಲೆ ಮಾದಕ ವಸ್ತುಗಳ ಮಾರಾಟ ಆರೋಪದಲ್ಲಿ ನಗರದ ಐದು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ರಾಜ್ಯದಲ್ಲಿ ಯಾರಾದರು ಇನ್ನು ಮುಂದೆ ಡ್ರಗ್ಸ್ ಮಾರಾಟ ಮಾಡಿದರೆ ಈ ಕಾಯ್ದೆಯಡಿ ಬಂಧನವಾಗಿ ಜೈಲು ವಾಸ ಅನುಭವಿಸಲಿದ್ದಾರೆ. ಈ ಆರೋಪಿ 2012ರಲ್ಲಿ ಭಾರತಕ್ಕೆ ಬಂದು ನಗರದಲ್ಲಿ ನಿರಂತರವಾಗಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ. ಹಾಗೆಯೇ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪದೇ ಪದೆ ಮನೆ ಬದಲಾವಣೆ ಮಾಡುತ್ತಿದ್ದ. ಈತನ ಈ ಕೃತ್ಯಕ್ಕೆ ಹೆಂಡತಿ ಕೂಡಾ ಸಾಥ್ ಕೊಟ್ಟಿದ್ದಳಂತೆ.
ಬಾಡಿಗೆ ಮನೆ ಪಡೆಯುವಾಗ ಮನೆಯ ಮಾಲೀಕರಿಗೆ ನಕಲಿ ಪಾಸ್‌ಪೋರ್ಟ್ ನೀಡಿ ಬಟ್ಟೆ ವ್ಯವಹಾರ ಮಾಡುತ್ತಿದ್ದಾಗಿ ಸುಳ್ಳು ಹೇಳುತ್ತಿದ್ದ. ಹೀಗಾಗಿ ಈತನನ್ನು ಸಿಸಿಬಿ ಪೊಲೀಸರು PIT NDPD ACT ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.