ETV Bharat / state

ಕಾಲೇಜುಗಳಲ್ಲಿ ಎನ್ ಸಿ ಸಿ ಬಲವರ್ಧನೆಗೆ ಸರ್ಕಾರ ಬದ್ಧ: ಅಶ್ವತ್ಥನಾರಾಯಣ - ಎನ್ ಸಿ ಸಿ ಸಲಹಾ ಸಮಿತಿ ಸಭೆ

ರಾಜ್ಯದ ಪದವಿ ಕಾಲೇಜುಗಳಲ್ಲಿ ಎನ್ ಸಿ ಸಿ ಬಲವರ್ಧನೆಗೆ ಸರಕಾರ ಬದ್ಧವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

KN_BNG_04_ASHWATHNARAYAN_NCC_SCRIPT_7201951
ಎನ್.ಸಿ.ಸಿ ಸಲಹಾ ಸಮಿತಿ ಸಭೆ
author img

By

Published : Aug 18, 2022, 10:24 PM IST

Updated : Aug 18, 2022, 11:00 PM IST

ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳಲ್ಲಿ ಎನ್ ಸಿ ಸಿ ಬಲವರ್ಧನೆಗೆ ಸರಕಾರ ಬದ್ಧವಾಗಿದೆ. ಇದಕ್ಕೆ ಅಗತ್ಯವಿರುವ ಪ್ರಸ್ತಾವನೆಗಳನ್ನು ಎನ್ ಸಿ ಸಿ ವಿಭಾಗದ ಮುಖ್ಯಸ್ಥರು ಸಲ್ಲಿಸಿದರೆ ತಕ್ಷಣ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಗುರುವಾರ ನಡೆದ ರಾಜ್ಯ ಎನ್ ಸಿ ಸಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವೆಡೆಗಳಲ್ಲಿ ಪೊಲೀಸ್ ಮೈದಾನಗಳು, ಈಜುಕೊಳಗಳು, ಪರ್ವತ ಶ್ರೇಣಿಗಳು, ಬೆಟ್ಟಗುಡ್ಡಗಳು, ನೌಕಾ ಮತ್ತು ವಾಯು ನೆಲೆಗಳಿವೆ. ಇವೆಲ್ಲವನ್ನೂ ಎನ್ ಸಿ ಸಿ. ಚಟುವಟಿಕೆಗಳಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.

ಎನ್ಇಪಿಯಲ್ಲಿ ಪಠ್ಯೇತರ ಕಲಿಕೆಗೆ ಆದ್ಯತೆ ಇದೆ. ಎನ್ ಸಿ ಸಿ ಯನ್ನು ಓಪನ್ ಎಲೆಕ್ಟಿವ್ ಆಗಿ ಆರಿಸಿಕೊಳ್ಳಲು ಅವಕಾಶ ಕೊಡಲಾಗಿದ್ದು, ಇದಕ್ಕೆ 20 ಶ್ರೇಯಾಂಕ ನಿಗದಿಪಡಿಸಲಾಗಿದೆ. ಆದ್ದರಿಂದ ಎನ್ ಸಿ ಸಿ ಯನ್ನು ಸಮಾಜಮುಖಿಯಾಗಿ ಬೆಳೆಸಬೇಕಾದ ಅಗತ್ಯವಿದೆ. ಇವರಿಗೆ ಸೂಕ್ತ ತರಬೇತಿ ನೀಡಿದರೆ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಕೂಡ ಕರ್ತವ್ಯಕ್ಕೆ ನಿಯೋಜಿಸಬಹುದು. ಎನ್ ಸಿ ಸಿ ವಿದ್ಯಾರ್ಥಿಗಳು ಸೈಕ್ಲಿಂಗ್, ಟ್ರೆಕ್ಕಿಂಗ್, ಮ್ಯಾರಥಾನ್, ಕೆರೆಗಳ ಶುದ್ಧೀಕರಣ, ಗಿಡ ನೆಡುವಿಕೆ ತರಹದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ವಿ.ವಿ.ಗಳು ಇತ್ತ ಗಮನ ಹರಿಸಬೇಕು ಎಂದು ಸೂಚಿಸಿದರು.

ಹೊಸಹಳ್ಳಿಯಲ್ಲಿ ಇರುವ ಎನ್ ಸಿ ಸಿ ಅಕಾಡೆಮಿಯಲ್ಲಿ 600 ಕೆಡೆಟ್​ಗಳಿಗೆ ತರಬೇತಿ ಕೊಡಲಾಗುವುದು. ಜತೆಗೆ ಹಾಸನದಲ್ಲಿ ಇರುವ ಅಕಾಡೆಮಿಯಲ್ಲಿ ವರ್ಷದಲ್ಲಿ 200 ದಿನಗಳ ಕಾಲ ಚಟುವಟಿಕೆಗಳನ್ನು ನಡೆಸಲಾಗುವುದು. ಕೆಡೆಟ್​ಗಳಿಗೆ ಬೇಕಿರುವ ಶೂಟಿಂಗ್ ರೇಂಜ್ ಅಭಿವೃದ್ಧಿಗೆ ರಾಜ್ಯದ ಎಲ್ಲ ವಿ ವಿ ಗಳ ಜತೆ ಸಹಭಾಗಿತ್ವ ಹೊಂದಲಾಗುವುದು ಎಂದು ವಿವರಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಸರಿಯಲ್ಲ, ಆದರೆ... : ಪ್ರತಾಪ್ ಸಿಂಹ

Last Updated : Aug 18, 2022, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.