ಹುಬ್ಬಳ್ಳಿ/ಬೆಂಗಳೂರು : ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿರುವ ಬೆಂಗಳೂರು ಎನ್ಸಿಬಿ ಅಧಿಕಾರಿಗಳು ಸುಮಾರು 1.5 ಕೋಟಿ ರೂ. ಮೌಲ್ಯದ 995 ಗ್ರಾಂ ಡ್ರಗ್ಸ್ (Methamphetamine) ವಶಕ್ಕೆ ಪಡೆದಿದ್ದಾರೆ. ಮಾದಕ ವಸ್ತು ಸಾಗಿಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ. ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಶುಕ್ರವಾರ ಈ ಕಾರ್ಯಾಚರಣೆ ನಡೆದಿದೆ.
ಉಗಾಂಡ ಮೂಲದ ಮಹಿಳೆಯು ದೆಹಲಿಯಿಂದ ಡ್ರಗ್ಸ್ ತರಿಸಿಕೊಂಡು ರಾಜ್ಯದಲ್ಲಿ ಮಾರಾಟಕ್ಕೆ ಮುಂದಾಗಿದ್ದಳು ಎಂದು ತಿಳಿದು ಬಂದಿದೆ. ಮಕ್ಕಳಿಗೆ ಆಹಾರವಾಗಿ ನೀಡಲಾಗುವ ಸೆರ್ಲಾಕ್ನ ಎರಡು ಪ್ಯಾಕ್ನಲ್ಲಿ ಇಟ್ಟು ಸಾಗಿಸಲಾಗುತ್ತಿತ್ತು.
![NCB officers arrested ugandan lady with drugs in hubballi railway station](https://etvbharatimages.akamaized.net/etvbharat/prod-images/14129887_thusmb.jpg)
ಪ್ರತಿ ಪ್ಯಾಕ್ನಲ್ಲಿ ಸುಮಾರು 500 ಗ್ರಾಂ ಮಾದಕ ವಸ್ತು ಪತ್ತೆಯಾಗಿದೆ. ಇದರ ಮೌಲ್ಯವು ಸುಮಾರು ಸುಮಾರು 1.5 ಕೋಟಿ ರೂ. ಎಂದು ತಿಳಿದು ಬಂದಿದೆ. ಸದ್ಯ ಡ್ರಗ್ಸ್ ವಶಕ್ಕೆ ಪಡೆದು ಮಹಿಳೆಯನ್ನು ಬಂಧಿಸಿರುವ ಎನ್ಸಿಬಿ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇದನ್ನೂ ಓದಿ: ಗುಟ್ಕಾ ವ್ಯಾಪಾರಿ ನಿವಾಸದ ಮೇಲೆ ಜಿಎಸ್ಟಿ ಅಧಿಕಾರಿಗಳಿಂದ ದಾಳಿ
ನ್ಯಾಯಾಧೀಶರ ಮುಂದೆ ಹಾಜರು:
ಉಗಾಂಡಾ ಮೂಲದ ಆರೋಪಿ ಮಹಿಳೆಯನ್ನು ಎನ್ಸಿಬಿ ತಂಡ ಧಾರವಾಡಕ್ಕೆ ಕರೆತಂದು ಧಾರವಾಡದ ಜಿಲ್ಲಾ ನ್ಯಾಯಾಧೀಶರ ಎದುರು ಹಾಜರುಪಡಿಸಿದರು.