ETV Bharat / state

ಡಿಕೆಶಿ ಬಂಧನಕ್ಕೆ ರಾಷ್ಟ್ರೀಯ 'ಕೈ' ನಾಯಕರ ಆಕ್ರೋಶ, ಕೇಂದ್ರದ ವಿರುದ್ಧ ವಾಗ್ದಾಳಿ!

ಡಿಕೆ ಶಿವಕುಮಾರ್ ಬಂಧನಕ್ಕೊಳಗಾದ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್, ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಬಂಧನ
author img

By

Published : Sep 4, 2019, 4:12 AM IST

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನವನ್ನು ರಾಷ್ಟ್ರೀಯ ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದು, ಆಕ್ರೋಶವನ್ನು ಹೊರಹಾಕಿದ್ದಾರೆ.

Tweet
ಕೆಸಿ ವೇಣುಗೋಪಾಲ್ ಟ್ವೀಟ್

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ತಮ್ಮ ಆಕ್ರೋಶವನ್ನು ಟ್ವೀಟ್ ಮೂಲಕ ಹೊರ ಹಾಕಿದ್ದು, ಡಿಕೆ ಶಿವಕುಮಾರ್ ಅವರ ಬಂಧನವು ಕೇಂದ್ರದಲ್ಲಿ ಫ್ಯಾಸಿಸ್ಟ್ ಸರ್ಕಾರವು ರಾಜಕೀಯ ಮಾರಾಟದ ಸ್ಪಷ್ಟ ಪ್ರಕರಣವಾಗಿದೆ. ಚಿದಂಬರಂ ಬಂಧನ ನಂತರ ಕೇಂದ್ರ ಬಿಜೆಪಿಯಿಂದ ಡಿಕೆಶಿ ಬಂಧನವಾಗಿದೆ. ಕೇಂದ್ರ ಸರ್ಕಾರದ ಕುದುರೆ ವ್ಯಾಪಾರ ಮತ್ತು ಸಣ್ಣ ರಾಜಕೀಯದ ವಿರುದ್ಧ ನಿಂತಿದ್ದಕ್ಕಾಗಿ ಪ್ರತೀಕಾರವನ್ನು ಎದುರಿಸುತ್ತಿರುವ ಮತ್ತೊಬ್ಬ ನಾಯಕನ ಬಂಧನವಾಗಿದೆ ಎಂದು ಹೇಳಿದ್ದಾರೆ.

ರಣದೀಪ್ ಸಿಂಗ್ ಸುರ್ಜೆವಾಲಾ

ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿದ್ದು, ಡಿಕೆಶಿ ಬಂಧನ ಕಾನೂನು ಬಾಹಿರ. ಇವರೊಬ್ಬ ಮುಗ್ಧ ನಾಯಕರಾಗಿದ್ದು, ಇವರ ವಿರುದ್ಧ ಯಾವುದೇ ಗುರುತರ ಆರೋಪಗಳು ಇಲ್ಲ. ಕೇಂದ್ರ ಸರ್ಕಾರದ ಆರ್ಥಿಕ ವಿರೋಧಿ ನೀತಿ ಹಾಗೂ ಆರ್ಥಿಕ ಕುಸಿತವನ್ನು ಮರೆಮಾಚಲು ಇಂತಹದ್ದೊಂದು ಪ್ರಯತ್ನಕ್ಕೆ ಇಳಿಯಲಾಗಿದೆ. ಇದನ್ನು ಖಂಡಿಸಿ ನಾವು ಹೋರಾಟ ನಡೆಸಲಿದ್ದೇವೆ ಎಂದಿದ್ದಾರೆ.

Tweet
ಡಾ ಜಿ ಪರಮೇಶ್ವರ್ ಟ್ವೀಟ್

ಪರಮೇಶ್ವರ್ ಬೇಸರ:

ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದು, ಡಿಕೆ ಶಿವಕುಮಾರ್ ಅವರ ಬಂಧನದೊಂದಿಗೆ ನಾವು ಅಧಿಕಾರದ ಸಂಪೂರ್ಣ ಶೋಷಣೆಗೆ ಸಾಕ್ಷಿಯಾಗಿದ್ದೇವೆ. ಡಿ.ಕೆ.ಶಿವಕುಮಾರ್ ಅವರ ಸಂಪೂರ್ಣ ಸಹಕಾರದ ಹೊರತಾಗಿಯೂ ಅವರನ್ನು ಬಂಧಿಸಲಾಗಿದೆ. ಅವರು 'ರಾಜಕೀಯ ಮಾರಾಟಗಾರ'ದ ಬಲಿಪಶು. ನಮ್ಮ ನ್ಯಾಯಾಂಗವನ್ನು ನಾವು ನಂಬುತ್ತೇವೆ ಮತ್ತು ನ್ಯಾಯ ಒದಗಿಸಲಾಗುವುದು ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.

Intro:newsBody:ಡಿಕೆ ಶಿವಕುಮಾರ್ ಬಂಧನಕ್ಕೆ ರಾಷ್ಟ್ರೀಯ ನಾಯಕರ ಆಕ್ರೋಶ ಬೇಸರ

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನವನ್ನು ರಾಷ್ಟ್ರೀಯ ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದು, ಆಕ್ರೋಶವನ್ನು ಹೊರಹಾಕಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ತಮ್ಮ ಆಕ್ರೋಶವನ್ನು ಟ್ವೀಟ್ ಮೂಲಕ ಹೊರ ಹಾಕಿದ್ದು, ಡಿಕೆಶಿವಕುಮಾರ್ ಅವರ ಬಂಧನವು ಕೇಂದ್ರದಲ್ಲಿ ಫ್ಯಾಸಿಸ್ಟ್ ಸರ್ಕಾರವು ರಾಜಕೀಯ ಮಾರಾಟದ ಸ್ಪಷ್ಟ ಪ್ರಕರಣವಾಗಿದೆ. ಚಿದಂಬರಂ ಬಂಧನ ನಂತರ ಕೇಂದ್ರ ಬಿಜೆಪಿಯಿಂದ ಡಿಕೆಶಿ ಬಂಧನವಾಗಿದೆ. ಕೇಂದ್ರ ಸರ್ಕಾರದ ಕುದುರೆ ವ್ಯಾಪಾರ ಮತ್ತು ಸಣ್ಣ ರಾಜಕೀಯದ ವಿರುದ್ಧ ನಿಂತಿದ್ದಕ್ಕಾಗಿ ಪ್ರತೀಕಾರವನ್ನು ಎದುರಿಸುತ್ತಿರುವ ಮತ್ತೊಬ್ಬ ನಾಯಕನ ಬಂಧನವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿದ್ದು, ಡಿಕೆಶಿ ಬಂಧನ ಕಾನೂನುಬಾಹಿರ. ಇವರೊಬ್ಬ ಮುಗ್ಧ ನಾಯಕರಾಗಿದ್ದು ಇವರ ವಿರುದ್ಧ ಯಾವುದೇ ಗುರುತರ ಆರೋಪಗಳು ಇಲ್ಲ. ಕೇಂದ್ರ ಸರ್ಕಾರದ ಆರ್ಥಿಕ ವಿರೋಧಿ ನೀತಿ ಹಾಗೂ ಆರ್ಥಿಕ ಕುಸಿತವನ್ನು ಮರೆಮಾಚಲು ಇಂತದ್ದೊಂದು ಪ್ರಯತ್ನಕ್ಕೆ ಇಳಿಯಲಾಗಿದೆ. ಇದನ್ನು ಖಂಡಿಸಿ ನಾವು ಹೋರಾಟ ನಡೆಸಲಿದ್ದೇವೆ ಎಂದಿದ್ದಾರೆ.
ಪರಮೇಶ್ವರ್ ಬೇಸರ
ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದು, ಡಿಕೆಶಿವಕುಮಾರ್ ಅವರ ಬಂಧನದೊಂದಿಗೆ ನಾವು ಅಧಿಕಾರದ ಸಂಪೂರ್ಣ ಶೋಷಣೆಗೆ ಸಾಕ್ಷಿಯಾಗಿದ್ದೇವೆ. ಡಿ.ಕೆ.ಶಿವಕುಮಾರ್ ಅವರ ಸಂಪೂರ್ಣ ಸಹಕಾರದ ಹೊರತಾಗಿಯೂ ಅವರನ್ನು ಬಂಧಿಸಲಾಗಿದೆ. ಅವರು 'ರಾಜಕೀಯ ಮಾರಾಟಗಾರ'ದ ಬಲಿಪಶು. ನಮ್ಮ ನ್ಯಾಯಾಂಗವನ್ನು ನಾವು ನಂಬುತ್ತೇವೆ ಮತ್ತು ನ್ಯಾಯ ಒದಗಿಸಲಾಗುವುದು ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.