ETV Bharat / state

ಹೆಸರಘಟ್ಟದಲ್ಲಿ ನಾಳೆಯಿಂದ ರಾಷ್ಟ್ರೀಯ ತೋಟಗಾರಿಕೆ ಮೇಳ - National Horticulture Fair 2023

“ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ” ಎಂಬ ವಿಷಯದಡಿ ಫೆಬ್ರವರಿ 22 ರಿಂದ 25 ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ 2023 ಹಮ್ಮಿಕೊಳ್ಳಲಾಗಿದೆ.

national-horticulture-fair-2023
ಹೆಸರಘಟ್ಟದಲ್ಲಿ ನಾಳೆಯಿಂದ ರಾಷ್ಟ್ರೀಯ ತೋಟಗಾರಿಕೆ ಮೇಳ: ಹೊಸ ತಂತ್ರಜ್ಞಾನಗಳ ಪ್ರದರ್ಶನ
author img

By

Published : Feb 21, 2023, 5:06 PM IST

Updated : Feb 21, 2023, 10:18 PM IST

ಹೆಸರಘಟ್ಟದಲ್ಲಿ ನಾಳೆಯಿಂದ ರಾಷ್ಟ್ರೀಯ ತೋಟಗಾರಿಕೆ ಮೇಳ

ಯಲಹಂಕ: ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (IIHR) ಅವರಣದಲ್ಲಿ ನಾಳೆಯಿಂದ ರಾಷ್ಟ್ರೀಯ ತೋಟಗಾರಿಕಾ ಮೇಳ 2023 ಆರಂಭವಾಗಲಿದೆ. ನಾಲ್ಕು ದಿನ ನಡೆಯುವ ತೋಟಗಾರಿಕ ಮೇಳದಲ್ಲಿ 120ಕ್ಕೂ ಹೆಚ್ಚು ತಳಿಗಳ ಪ್ರದರ್ಶನ, 63 ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಮತ್ತು ರೈತರೊಂದಿಗೆ ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ರೈತರು, ಕೃಷಿ ವಿಜ್ಞಾನಿಗಳು ಮತ್ತು ತೋಟಗಾರಿಕಾ ಸಂಸ್ಥೆಯ ನಡುವೆ ಸೇತುವೆಯಾಗಿ ಕೆಲಸ ಮಾಡಲು ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಪ್ರತೀ ವರ್ಷ ಆಯೋಜಿಸಲಾಗುತ್ತದೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಆನ್​ಲೈನ್ ಮೂಲಕ ಮೇಳ ಉದ್ಘಾಟಿಸಲಿದ್ದಾರೆ.

ಈ ಸಲದ ಮೇಳದ ವಿಷಯ “ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ”. ತೋಟಗಾರಿಕೆ ಉದ್ಯಮಿಗಳ ಸಹಯೋಗದಲ್ಲಿ ಮೇಳ ನಡೆಯಲಿದೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ರೈತರು ಆಗಮಿಸಲಿದ್ದಾರೆ. ರೈತರು ಮತ್ತು ತೋಟಗಾರಿಕೆ ಉದ್ಯಮಿಗಳು ತಯಾರಿಸಿದ ಹೊಸ ತಂತ್ರಜ್ಞಾನಗಳು ಪ್ರದರ್ಶನಗೊಳ್ಳಲಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹೊಸದಾಗಿ ಸೃಷ್ಠಿಸಿದ ತಳಿಗಳು, ಅಭಿವೃದ್ಧಿಪಡಿಸಲಾದ ತೋಟಗಾರಿಕೆ ಬೀಜಗಳ ಪ್ರದರ್ಶನ ನಡೆಯಲಿದೆ ಎಂದು ನಿರ್ದೇಶಕ ಡಾ. ಸಂಜಯ್ ಕುಮಾರ್ ಸಿಂಗ್ ತಿಳಿಸಿದರು.

ಇದನ್ನೂ ಓದಿ: ತುರ್ತು ನೆರವಿಗೆ ಸಾರ್ವಜನಿಕರು ಸುರಕ್ಷಾ ಆ್ಯಪ್​ ಬಳಸಬಹುದು: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಪ್ರದರ್ಶನಗಳಲ್ಲಿ ಹೂವಿನ ತ್ಯಾಜ್ಯ ಬಳಕೆ ಪ್ರಯೋಜನ, ತರಕಾರಿ ಮತ್ತು ಔಷಧಿ ಬೆಳೆಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ರೈತರು, ಯುವ ಕೃಷಿಕರು ಸಂಸ್ಥೆಯ ಸಿಬ್ಬಂದಿಯಿಂದ ಮಾಹಿತಿ ಪಡೆಯಬಹುದು. ತೋಟಗಾರಿಕೆಗೆ ಸಂಬಂಧಪಟ್ಟ 250 ಮಳಿಗೆಗಳನ್ನು ತೆರೆಯಲಾಗಿದೆ ಎಂದರು.

ಇಲ್ಲಿನ ಜೈವಿಕ ಗೊಬ್ಬರ, ವಿಶೇಷ ತಳಿಯ ಹಣ್ಣಿನ ಗಿಡಗಳು ಮತ್ತು ಮರಗಳು, ಬಿತ್ತನೆ ಬೀಜಗಳು, ಜೈವಿಕ ಗೊಬ್ಬರ, ಕೃಷಿ ಯಂತ್ರೋಪಕರಣಗಳ ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ. ಫೆ.25 ರಂದು ನಡೆಯುವ ಸಮರೋಪ ಸಮಾರಂಭದಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ಬೆಳೆದ 20 ಉತ್ತಮ ರೈತರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಡಾ. ನಂದೀಶ್.ಪಿ, ಸಂಘಟನಾ ಕಾರ್ಯದರ್ಶಿ ಡಾ.ವೆಂಕಟ್ ಕುಮಾರ್.ಆರ್ ಮತ್ತಿತರರು ಇದ್ದರು.

ಇದನ್ನೂ ಓದಿ: ಬೀದರ್ ಕೆಕೆಆರ್​ಟಿಸಿ ಡಿಪೋ ಬಸ್​ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ.. ಬಸ್​​​ಗಾಗಿ ತೀವ್ರ ಶೋಧ!

Last Updated : Feb 21, 2023, 10:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.