ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಇಂದು ವಾಮಿಕಾ ಹೆಸರಿನ ಸುರಂಗ ಕೊರೆಯುವ ಯಂತ್ರ ಹೊರ ಬಂದಿದೆ.
2021ರ ಜೂನ್ 29 ರಂದು ಸುರಂಗ ಕೊರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದೀಗ 7 ತಿಂಗಳ ಬಳಿಕ ವಾಮಿಕ ಯಂತ್ರವೂ ಹೊರ ಬಂದಿದೆ. ಡೈರಿ ಸರ್ಕಲ್ನಲ್ಲಿ ಸುರಂಗ ಕೊರೆಯಲು ಪ್ರಾರಂಭಿಸಿದ ವಾಮಿಕ ಹೆಸರಿನ ಸುರಂಗ ಕೊರೆಯುವ ಸ್ಲರಿ ಆಧಾರಿತ ಯಂತ್ರವು 614 ಮೀಟರ್ ಸುರಂಗ ಕೊರೆಯುವುದನ್ನು ಪೂರ್ಣಗೊಳಿಸಿದೆ.
ಡೈರಿ ಸರ್ಕಲ್ ಮತ್ತು ಲಕ್ಕಸಂದ್ರ ಮೆಟ್ರೋ ನಿಲ್ದಾಣಗಳ ನಡುವಿನ ಸುರಂಗ ಕೊರೆಯುವ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿದೆ. ಈ ಹಿಂದೆ ಸುರಂಗ ಕೊರೆಯುವ ಊರ್ಜಾ, ವಿಂಧ್ಯಾ, ಅವನಿ ಯಂತ್ರಗಳು ಹೊರ ಬಂದಿದ್ದವು. ಇದೀಗ ವಾಮಿಕ ಯಂತ್ರ ಹೊರ ಬಂದಿರುವುದಾಗಿ ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ