ETV Bharat / state

ನಮ್ಮ ಮೆಟ್ರೋ ನೇರಳೆ ಮಾರ್ಗ ಸೆಪ್ಟೆಂಬರ್ ಒಳಗೆ ಪೂರ್ಣ: ಬಿಎಂಆರ್‌ಸಿಎಲ್​ನಿಂದ ಪ್ರಯಾಣಿಕರ ಭದ್ರತೆಗೆ ಹೈ ಎಂಡ್ ಕ್ಯಾಮರಾ ಅಳವಡಿಕೆ - ನಮ್ಮ ಮೆಟ್ರೋ ರೈಲ್ವೆ ನಿಲ್ದಾಣ

ಬೈಯಪ್ಪನಹಳ್ಳಿ- ಕೆ ಆರ್ ಪುರ ಮೆಟ್ರೋ ಜೊತೆಗೆ ಕೆಂಗೇರಿ - ಚಲ್ಲಘಟ್ಟ ನಡುವಿನ ಮೆಟ್ರೋ ಮಾರ್ಗವನ್ನೂ ಏಕಕಾಲಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ.

namma-metro-purple-line-will-be-complete-by-september-says-bmrcl
ನಮ್ಮ ಮೆಟ್ರೋ ನೇರಳೆ ಮಾರ್ಗ ಸೆಪ್ಟೆಂಬರ್ ಒಳಗೆ ಪೂರ್ಣ: ಬಿಎಂಆರ್‌ಸಿಎಲ್​ನಿಂದ ಪ್ರಯಾಣಿಕರ ಭದ್ರತೆಗೆ ಹೈ ಎಂಡ್ ಕ್ಯಾಮರಾ ಅಳವಡಿಕೆ
author img

By

Published : Jul 9, 2023, 7:57 PM IST

ಬೆಂಗಳೂರು: ಬೈಯಪ್ಪನಹಳ್ಳಿ- ಕೆ ಆರ್ ಪುರ ಮೆಟ್ರೋ ಜೊತೆಗೆ ಕೆಂಗೇರಿ - ಚಲ್ಲಘಟ್ಟ ನಡುವಿನ ಮೆಟ್ರೋ ಮಾರ್ಗವನ್ನೂ ಏಕಕಾಲಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಸೆಪ್ಟೆಂಬರ್ ಎರಡನೇ ವಾರದೊಳಗೆ ಜನರು ಈ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಾಗುವ ನಿರೀಕ್ಷೆಯಿದೆ. ಮುಂದುವರೆದು ನಮ್ಮ ಮೆಟ್ರೋ ಸಂಸ್ಥೆ ಹೈ ರೆಸಲ್ಯೂಷನ್ ಕ್ಯಾಮರಾಗಳನ್ನು ಅಳವಡಿಸಿ ಪ್ರಯಾಣಿಕರ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಮುಂದಾಗಿದೆ.

ಬೈಯಪ್ಪನಹಳ್ಳಿ - ಕೆ.ಆರ್.ಪುರ ಮೆಟ್ರೋ ನಿಲ್ದಾಣಗಳ ಮಧ್ಯದ 2.1ಕಿ.ಮೀ ಹಾಗೂ ಕೆಂಗೇರಿ - ಚಲ್ಲಘಟ್ಟ ನಡುವಿನ 1.9 ಕಿ.ಮೀ ಮೆಟ್ರೋ ಕಾಮಗಾರಿ ಬಾಕಿ ಇದೆ. ಇವೆರಡೂ ಪೂರ್ಣಗೊಂಡಲ್ಲಿ ನೇರಳೆ ಮಾರ್ಗದ 43.5ಕಿ.ಮೀ ಲೈನ್ ಪೂರ್ಣವಾದಂತಾಗಲಿದೆ. ಹೀಗಾಗಿ ಎರಡೂ ಮಾರ್ಗವನ್ನು ಬೇರೆ ಬೇರೆ ಸಂದರ್ಭದಲ್ಲಿ ಜನತೆಗೆ ಮುಕ್ತಗೊಳಿಸುವ ಬದಲು ಒಂದೇ ಸಮಯಕ್ಕೆ ಪ್ರಯಾಣದ ಅವಕಾಶ ಮಾಡಿಕೊಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮೇಲ್ಸೇತುವೆ ತಡೆಗೋಡೆಗೆ ಬೈಕ್​ ಡಿಕ್ಕಿ.. ಹಿಂಬದಿ ಸವಾರ ಸಾವು

ಸಿಗ್ನಲಿಂಗ್, ಟ್ರ್ಯಾಕಿಂಗ್ ಸೇರಿ ಇತರೆ ಕಾಮಗಾರಿಗಳು ಇವೆರಡೂ ಮಾರ್ಗದಲ್ಲಿ ಬಾಕಿ ಇವೆ. ಪೂರ್ಣ ಸ್ಟ್ರೆಚ್‌ನ್ನು ಏಕಕಾಲಕ್ಕೆ ಪ್ರಯಾಣಕ್ಕೆ ಮುಕ್ತಗೊಳಿಸಬೇಕಾದ ಕಾರಣ ಸಂಪೂರ್ಣ ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆಯನ್ನು ಮರು ರೂಪಿಸಿಕೊಳ್ಳಬೇಕಿದೆ. ಈ ಕಾರಣಕ್ಕೆ ಸೋಮವಾರದಿಂದ ರಾತ್ರಿ ಸಿಗ್ನಲಿಂಗ್ ವರ್ಕ್‌ಗಳು ನಡೆಯಲಿವೆ. ಬಳಿಕ ಪ್ರಯೋಗಿಕ ಚಾಲನೆಯೂ ನಡೆಯಲಿದೆ. ಬೆಳಗಿನ ಜಾವ 7ಗಂಟೆಯೊಳಗೆ ಈ ಕೆಲಸ ಮುಗಿಸಲು ಸಾಧ್ಯವಿಲ್ಲದ ಕಾರಣ ಒಂದು ತಿಂಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ನೇರಳೆ ಮಾರ್ಗದ ಪೂರ್ವ - ಪಶ್ಚಿಮ ಪೂರ್ಣ ಮಾರ್ಗವನ್ನು ಏಕಕಾಲಕ್ಕೆ ಜನತೆಯ ಪ್ರಯಾಣಕ್ಕೆ ಮುಕ್ತಗೊಳಿಸಲಿದ್ದೇವೆ. ಆಗಸ್ಟ್ ಎರಡನೇ ವಾರದಲ್ಲಿ ಸಿಎಂಆರ್‌ಎಸ್‌ನಿಂದ ಗುಣಮಟ್ಟ ಪರಿಶೀಲನೆ ನಡೆಯಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಭದ್ರತೆಗಾಗಿ ಹೈ ಎಂಡ್ ಕ್ಯಾಮರಾ ನಿಗಾ: ನಮ್ಮ ಮೆಟ್ರೋ ರೈಲ್ವೆ ನಿಲ್ದಾಣ ಹಾಗೂ ಡಿಪೋಗಳ ಭದ್ರತೆಗಾಗಿ ಹೈ ಎಂಡ್ ರೆಸಲ್ಯೂಶನ್ ಕಣ್ಗಾವಲು ಕ್ಯಾಮರಾಗಳನ್ನು ಅಳವಡಿಸಲು ನಮ್ಮ ಮೆಟ್ರೋ ಸಂಸ್ಥೆ ಮುಂದಾಗಿದೆ. ಇತ್ತೀಚೆಗೆ ಇನ್ಫಿನೋವಾ ಕಂಪನಿ ಸುಮಾರು 2 ಸಾವಿರ 'ವಿಟಿ210' ಸರಣಿಯ ಕ್ಯಾಮರಾಗಳನ್ನು ಪೂರೈಸಿದೆ. ಮೊದಲ ಹಂತವಾಗಿ ನಗರದಲ್ಲಿನ 28 ಮೆಟ್ರೋ ನಿಲ್ದಾಣದಲ್ಲಿ ಕ್ಯಾಮರಾವನ್ನು ಅಳವಡಿಸುವ ಗುರಿಯಿದ್ದು, ಈಗಾಗಲೇ ಬಹುತೇಕ ನಿಲ್ದಾಣ ಡಿಪೋಗಳಲ್ಲಿ ಅಳವಡಿಕೆ ಮಾಡಲಾಗಿದೆ. ಸೆಪ್ಟೆಂಬರ್ ಒಳಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಕ್ಯಾಮರಾ ಕಾರ್ಯನಿರ್ವಹಿಸಲಿವೆ.

'ವಿಟಿ210' ಸರಣಿಯ ಕ್ಯಾಮರಾ ಅಸಾಧಾರಣ ಫೋಟೋ ಗುಣಮಟ್ಟ ಹೊಂದಿದ್ದು, ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ವಿಡಿಯೋ ರೆಕಾರ್ಡ್ ಆಗಲಿದೆ. ಇವುಗಳ ಕಂಟ್ರೋಲ್ ರೂಮ್‌ನ ಸಿಬ್ಬಂದಿಗೆ ವಿಶೇಷ ತರಬೇತಿಯನ್ನು ನೀಡಲಾಗಿದೆ. ನಮ್ಮ ಮೆಟ್ರೋ ಆರಂಭದಿಂದಲೂ ಪ್ರತಿ ನಿಲ್ದಾಣದಲ್ಲಿ ಸುಮಾರು 70 ಸಿಸಿಟಿವಿ ಕ್ಯಾಮರಾಗಳಿವೆ. ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಹೈ ಎಂಡ್ ರೆಸಲ್ಯೂಶನ್ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಡಿಕೆಶಿ ಬೆಂಗಳೂರು ಸಿಟಿ ರೌಂಡ್ಸ್: ಇಂದಿರಾ ಕ್ಯಾಂಟೀನ್​ಗೆ ದಿಢೀರ್ ಭೇಟಿ, ತಿಂಡಿ ಸೇವನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.