ETV Bharat / state

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ : ನಮ್ಮ ಮೆಟ್ರೋದಲ್ಲಿ ತ್ರಿವರ್ಣ ರಂಗು..

ಎರಡು ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಒಂದು ರೈಲಿಗೆ ಆತ್ಮ ನಿರ್ಭರ ಭಾರತ ಹಾಗೂ ಅಮೃತ ಮಹೋತ್ಸವದ ಚಿಹ್ನೆಯುಳ್ಳ ಪೋಸ್ಟರ್ ಹಾಕಲಾಗಿದೆ. ತ್ರಿವರ್ಣ ಧ್ವಜದ ಬಣ್ಣದಲ್ಲಿ ಬೋಗಿಗಳ ಹೊರಭಾಗವನ್ನು ಚಿತ್ರಿಸಲಾಗಿದೆ..

Namma Metro Azadi Ka Amrit Mahotsav celebrating
ನಮ್ಮ ಮೆಟ್ರೋದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ
author img

By

Published : Mar 11, 2022, 4:46 PM IST

ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಒಂದು ಮೆಟ್ರೋ ರೈಲಿನ ಎಲ್ಲಾ ಬೋಗಿಗಳ ಮೇಲೆ ಆತ್ಮ ನಿರ್ಭರ ಭಾರತ ಮತ್ತು ಸ್ವಾತಂತ್ರ ಅಮೃತ ಮಹೋತ್ಸವದ ಚಿಹ್ನೆಗಳನ್ನು ಪ್ರದರ್ಶಿಸಲಾಗಿದೆ.‌

ಈ ವಿಶೇಷ ತ್ರಿವರ್ಣ ರಂಗಿನ ರೈಲಿಗೆ ಇಂದು ಬಿಎಂಆರ್​ಸಿಎಲ್​ನ ವ್ಯವಸ್ಥಾಪಕ ಅಂಜುಂ ಪರ್ವೇಜ್ ಅವರು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.

ನಮ್ಮ ಮೆಟ್ರೋದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ..

ನಂತರ ಮಾತನಾಡಿದ ಅವರು, ಎರಡು ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಒಂದು ರೈಲಿಗೆ ಆತ್ಮ ನಿರ್ಭರ ಭಾರತ ಹಾಗೂ ಅಮೃತ ಮಹೋತ್ಸವದ ಚಿಹ್ನೆಯುಳ್ಳ ಪೋಸ್ಟರ್ ಹಾಕಲಾಗಿದೆ. ತ್ರಿವರ್ಣ ಧ್ವಜದ ಬಣ್ಣದಲ್ಲಿ ಬೋಗಿಗಳ ಹೊರಭಾಗವನ್ನು ಚಿತ್ರಿಸಲಾಗಿದೆ ಎಂದರು.

ಸದ್ಯ ಒಂದು ರೈಲಿಗೆ ಮಾತ್ರ ಈ ರೀತಿ ಮಾಡಲಾಗಿದ್ದು, ಮುಂದೆ ಸ್ವಾತಂತ್ರ್ಯಕ್ಕೆ ಹೋರಾಡಿದವರ ಕುರಿತಾಗಿ ಕವರ್​ ಮಾಡಲಾಗುವುದು. ಮುಂದಿನ ತಿಂಗಳಲ್ಲಿ ಆರು ರೈಲುಗಳಿಗೆ ಅರ್ಧದಷ್ಟು ಭಾಗ ಕವರ್​ ಮಾಡಲಾಗುವುದು ಎಂದರು.

ಇದನ್ನೂ ಓದಿ: ಹುಬ್ಬಳ್ಳಿ: ಜನರಿಗೆ ಸಕಾಲಕ್ಕೆ ಸಿಗದ '112' ತುರ್ತು ಸೇವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.