ಬೆಂಗಳೂರು: ನೂರಾರು ವಿಧಗಳ ಸುಮಾರು ಎರಡು ಕೋಟಿಗೂ ಹೆಚ್ಚು ಸಸಿಗಳನ್ನು ಪೋಷಿಸಲಾಗುತ್ತಿರುವ ದಿ ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿಯ ಸ್ಥಳವನ್ನು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯ ಅನುಮಾನಾಸ್ಪದ ಮತ್ತು ಸಸಿ ಬಳೆಗಾರರ ವಿರುದ್ಧದ ಆದೇಶ ಹೊರಡಿಸಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮುಖಂಡ ಎನ್ ಆರ್ ರಮೇಶ್ ಆರೋಪಿಸಿದ್ದಾರೆ.
ಈ ಕುರಿತು ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಯಾವುದೇ ಮುನ್ಸೂಚನೆ ನೀಡದೆ ಸರ್ಕಾರಿ ರಜಾ ದಿನದಂದು ಏಕಾಏಕಿ ಬೀಗ ಹಾಕಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ದೂರಿದ್ದಾರೆ.
ಎನ್ ಆರ್ ರಮೇಶ್ ಒಟ್ಟು 350ಕ್ಕೂ ಹೆಚ್ಚು ನರ್ಸರಿ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿರುವ ದಿ ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿ 1963 ರಿಂದ ಬೆಂಗಳೂರು ಲಾಲ್ ಬಾಗ್ನ ಒಂದು ಭಾಗದ ಒಂದೂವರೆ ಎಕರೆಗಳಷ್ಟು ಪ್ರದೇಶವನ್ನು ಸರ್ಕಾರದಿಂದ ಗುತ್ತಿಗೆ ಪಡೆದು ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿ ಮೈಸೂರು ಉದ್ಯಾನ ಕಲಾ ಸಂಘ ಕಳೆದ 117 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಕಳೆದ 6 ವರ್ಷಗಳಿಂದ ಸಂಸ್ಥೆಯ ಜಾಗದ ಗುತ್ತಿಗೆಯ ನವೀಕರಣಕ್ಕೆಂದು ಹತ್ತಾರು ಬಾರಿ ತೋಟಗಾರಿಕೆ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿದ್ದರೂ ಸಹ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಎನ್ ಆರ್ ರಮೇಶ್ ಹೇಳಿದ್ದಾರೆ.
ಸುಮಾರು 350ಕ್ಕೂ ಹೆಚ್ಚು ನರ್ಸರಿಗಳನ್ನೇ ನಂಬಿಕೊಂಡಿರುವ ಸುಮಾರು 2,000 ಕ್ಕೂ ಹೆಚ್ಚು ನರ್ಸರಿ ಕಾರ್ಮಿಕರ ಜೀವನ ಬೀದಿಗೆ ಬಂದಿದ್ದು, ಈ ಸಂಬಂಧ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮುಖ್ಯಮಂತ್ರಿಗಳನ್ನು ಮತ್ತು ತೋಟಗಾರಿಕೆ ಸಚಿವರನ್ನು ಒತ್ತಾಯಿಸುವುದಾಗಿ ಎಂದಿದ್ದಾರೆ.
ಓದಿ: ಕಳೆದ 2 ವರ್ಷದಲ್ಲಿ ತೋಟಗಾರಿಕಾ ಇಲಾಖೆಯಿಂದ ಹನಿ ನೀರಾವರಿಗೆ 74,1.43 ಲಕ್ಷ ರೂ. ಅನುದಾನ