ಹೊಸಕೋಟೆ : ಮತಗಟ್ಟೆಗಳಿಗೆ ಎಂಟಿಬಿ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ ಏಜೆಂಟ್ ಕೂರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದು ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ ಪೋಲಿಂಗ್ ಬೂತ್ ಪಕ್ಕದಲ್ಲಿ ಏಜೆಂಟ್ ಕೂರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಏಜೆಂಟ್ ಮತ್ತು ಚುನಾವಣಾಧಿಕಾರಿ ವಿರುದ್ಧ ಗುಡುಗಿದ್ದಾರೆ.
ಈ ವೇಳೆ ಕೆಲಕಾಲ ಬೂತ್ನಲ್ಲಿ ಎಂಟಿಬಿ ಮತ್ತು ಏಜೆಂಟ್ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಚುನಾವಣಾಧಿಕಾರಿಗೆ ದೂರು ನೀಡೋದಾಗಿ ಹೇಳಿ ಎಂಟಿಬಿ ಹೊರಟು ಹೋಗಿದರು.