ETV Bharat / state

ಬಜೆಟ್ ಪೂರ್ವಭಾವಿಯಾಗಿ ಉದ್ಯಮ ರಂಗದ ಪ್ರಮುಖರೊಂದಿಗೆ ಸಂಸದ ತೇಜಸ್ವಿ ಸೂರ್ಯ ಸಭೆ.. - Union Finance Minister Nirmala Sitharaman

ಬೆಂಗಳೂರಿನಲ್ಲಿ ಇಂದು ಆಯೋಜನೆಗೊಂಡಿದ್ದ ಬಜೆಟ್ ಪೂರ್ವ ಸಮಾಲೋಚನೆ ಕಾರ್ಯಕ್ರಮದಲ್ಲಿ, ನಗರದ ಪ್ರಮುಖ ಉದ್ಯಮಿಗಳು ಪಾಲ್ಗೊಂಡು ತಮ್ಮ ತಮ್ಮ ಕ್ಷೇತ್ರದಲ್ಲಿ ಆಗಬೇಕಿರುವ ಸುಧಾರಣಾ ಕಾರ್ಯಗಳ ಕುರಿತು ಸಂವಾದ ನಡೆದಿದೆ. ಡಿಸೆಂಬರ್ ತಿಂಗಳಿನಲ್ಲಿ ಪ್ರತಿಯೊಂದು ಉದ್ಯಮ ವಿಭಾಗಕ್ಕೆ ವಿಶೇಷ ಸಭೆ ಆಯೋಜಿಸಿ ಅವರ ಸಲಹೆಗಳಿಗೆ ಪೂರಕವಾದ ನೀತಿ ನಿಯಮಾವಳಿಗಳ ರಚನೆಯಲ್ಲಿ ಸಂಸದರ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

Pre Budget Consultation Programme
ಬಜೆಟ್ ಪೂರ್ವ ಸಮಾಲೋಚನೆ ಕಾರ್ಯಕ್ರಮ
author img

By

Published : Nov 27, 2022, 10:51 PM IST

ಬೆಂಗಳೂರು: ಬಜೆಟ್ ಪೂರ್ವಭಾವಿಯಾಗಿ ಉದ್ಯಮ ರಂಗದ ಪ್ರಮುಖರೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಪರಿಗಣಿಸಿ, ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ರೂಪುರೇಷೆಗಳನ್ನು ತಯಾರಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಿಗೆ ತಲುಪಿಸುವ ಕಾರ್ಯ ನಡೆಸುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಪೂರ್ವಭಾವಿ ಸಂವಾದವನ್ನು ಇಂದು 120ಕ್ಕೂ ಅಧಿಕ ವಿವಿಧ ಕ್ಷೇತ್ರಗಳ ಉದ್ಯಮಿಗಳು, ಸಿ.ಇ.ಓ ಗಳು, ತಂತ್ರಜ್ಞರೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ನಗರದ ಬೌರಿಂಗ್ ಇನ್ಸ್ಟಿಟ್ಯೂಟನಲ್ಲಿ ನಡೆಸಿ, ಆರೋಗ್ಯ, ರಿಯಲ್ ಎಸ್ಟೇಟ್, ಫಾರ್ಮಾ, ವಿವಿಧ ಸ್ಟಾರ್ಟ್ ಅಪ್ ಗಳು, ಆಹಾರ ಸಂಸ್ಕರಣೆ ಸೇರಿದಂತೆ ಇತರ ಉದ್ಯಮ ರಂಗದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ, ಸರ್ಕಾರಾದ ವತಿಯಿಂದ ಆಗಬೇಕಿರುವ ಕ್ರಮಗಳ ಕುರಿತು ಚರ್ಚೆಸಿದರು.

ಡಿಸೆಂಬರ್ ತಿಂಗಳಿನಲ್ಲಿ ಉದ್ಯಮ ರಂಗದ ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಸಭೆ ನಡೆಸಿ, ಅವರಿಂದ ಸಲಹೆ ಪಡೆದು ಮುಂಬರುವ ಬಜೆಟ್ -2023ನಲ್ಲಿ ಅವುಗಳಿಗೆ ಪೂರಕವಾದ ಕ್ರಮ ಕೈಗೊಳ್ಳಲು ಇದರಿಂದ ಸಹಾಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ಕಳೆದ ಕೆಲ ವರ್ಷಗಳಿಂದ ದೇಶದ ಅಭಿವೃದ್ಧಿಗೆ ಗಣನೀಯ ಸೇವೆ ಸಲ್ಲಿಸುತ್ತಿರುವ ಪ್ರತಿ ಔದ್ಯಮಿಕ ವಿಭಾಗದಿಂದಲೂ ಸಲಹೆಗಳನ್ನು ಪಡೆದು, ಅದಕ್ಕೆ ಪೂರಕವಾದ ಬಜೆಟ್ ನಿರೂಪಣೆಗೊಳಿಸುತ್ತಿದ್ದು, ದೇಶದ ಸುಧಾರಣೆ, ಸರ್ವತೋಮುಖ ಬೆಳವಣಿಗೆಯಲ್ಲಿ ಇಂತಹ ಕ್ರಮಗಳು ಪೂರಕವಾಗಿವೆ ಎಂದು ಸಂಸದ ಸೂರ್ಯ ತಿಳಿಸಿದರು.

ಈ ಹಿಂದೆ ನಾವು ಬಜೆಟ್ ಮಂಡನೆಗೆ ಮುನ್ನ ಕೇಂದ್ರ ಸರ್ಕಾರಕ್ಕೆ ನೀಡಿರುವ ಹಲವಾರು ಸಲಹೆಗಳು ಕಾರ್ಯರೂಪಕ್ಕೆ ಬಂದಿದ್ದು, ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಉದ್ಯಮ ರಂಗದ ಪ್ರಮುಖರೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಸರ್ಕಾರಕ್ಕೆ ರವಾನಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಂಗಳೂರು , ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ರೂಪುರೇಷೆಗಳನ್ನು ತಯಾರಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ರಿಗೆ ತಲುಪಿಸುವ ಕಾರ್ಯ ನಡೆಯಲಿದೆ ಎಂದರು.

ಬಜೆಟ್ ಪೂರ್ವ ಸಮಾಲೋಚನೆ ಕಾರ್ಯಕ್ರಮ: ಭಾನುವಾರ ಆಯೋಜನೆಗೊಂಡಿದ್ದ ಬಜೆಟ್ ಪೂರ್ವ ಸಮಾಲೋಚನೆ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಪ್ರಮುಖ ಉದ್ಯಮಿಗಳು ಪಾಲ್ಗೊಂಡು, ತಮ್ಮ ತಮ್ಮ ಕ್ಷೇತ್ರದಲ್ಲಿ ಆಗಬೇಕಿರುವ ಸುಧಾರಣಾ ಕಾರ್ಯಗಳ ಕುರಿತು ಸಂವಾದ ನಡೆಸಿದ್ದು, ಡಿಸೆಂಬರ್ ತಿಂಗಳಿನಲ್ಲಿ ಪ್ರತಿಯೊಂದು ಉದ್ಯಮ ವಿಭಾಗಕ್ಕೆ ವಿಶೇಷ ಸಭೆ ಆಯೋಜಿಸಿ ಅವರ ಸಲಹೆಗಳಿಗೆ ಪೂರಕವಾದ ನೀತಿನಿಯಮಾವಳಿಗಳ ರಚನೆಯಲ್ಲಿ ಸಂಸದರ ಕಚೇರಿ ಕಾರ್ಯ ನಿರ್ವಹಿಸಲಿದೆ.

ಸಭೆಯಲ್ಲಿ ಮಾತನಾಡಿದ ಹಲವು ಉದ್ಯಮಿಗಳು ತೆರಿಗೆ ಪದ್ಧತಿ, ಬೌದ್ಧಿಕ ಹಕ್ಕುಗಳ ರಕ್ಷಣೆ, ಸಾರಿಗೆ ಕ್ಷೇತ್ರದಲ್ಲಿ ಆಗಬೇಕಿರುವ ಮೂಲಭೂತ ಸೌಕರ್ಯ ಅಭಿವೃದ್ಧಿ ಮುಂತಾದ ವಿಷಯಗಳಲ್ಲಿ ಆಗಬೇಕಿರುವ ಸುಧಾರಣಾ ಕ್ರಮಗಳ ಕುರಿತು ಚರ್ಚಿಸಿದ್ದು ಗಮನಾರ್ಹವಾಗಿದೆ ಎಂದರು.

ಕಳೆದ ಕೆಲವು ಬಜೆಟ್ ಮಂಡನೆಯ ಪೂರ್ವದಲ್ಲಿ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಗಳು, ಆಡಿಟರ್ ಗಳು ನೀಡಿರುವ ಸಲಹೆಗಳಿಗೆ ಸೂಕ್ತವಾಗಿ ಸ್ಪಂದಿಸಿರುವ ಸರ್ಕಾರವು, ಹೋಟೆಲ್ ಉದ್ಯಮಿಗಳಿಗೆ ಜಿಎಸ್​ಟಿ, ಏಂಜೆಲ್ ಟ್ಯಾಕ್ಸ್ ಕ್ರಮಗಳಲ್ಲಿ ಹಲವು ಸುಧಾರಣಾ ಕ್ರಮಗಳಿಗೆ ಸ್ಪಂದಿಸಿರುವುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದ ಸಂಸದರು ಇಂತಹ ಬಜೆಟ್ ಪೂರ್ವ ಸಮಾಲೋಚನೆ, ಸಲಹೆಗಳು ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗುವುದರಲ್ಲಿ ತುಂಬಾ ಸಹಾಯಕವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ:ಚಿಲುಮೆ ಸಂಸ್ಥೆ ಹಗರಣ: ತನಿಖಾ ಸಂಸ್ಥೆಗಳು ಮಾನಸಿಕ ಹಿಂಸೆ ನೀಡುತ್ತಿವೆ; ಬಿಬಿಎಂಪಿ ಸಿಬ್ಬಂದಿ ಅಳಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.