ETV Bharat / state

ಸಿಎಂಗೆ ಪತ್ರ ಬರೆದ ಸಂಸದೆ ಕರಂದ್ಲಾಜೆ: ಸರ್ಕಾರದಿಂದ ಸವಿವರ ವರದಿ - ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್

ಸಿಎಂ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಪತ್ರ ಬರೆದ ಸಂಸದೆ ಶೋಭಾ ಕರಂದ್ಲಾಜೆಗೆ ಸುದೀರ್ಘ ವಿವರವನ್ನು ನೀಡಿದ್ದಾರೆ.

MP Karandlaje letter to CM
ಸಿಎಂಗೆ ಪತ್ರ ಬರೆದ ಸಂಸದೆ ಕರಂದ್ಲಾಜೆ,
author img

By

Published : Apr 30, 2021, 9:14 PM IST

ಬೆಂಗಳೂರು: ಕೋವಿಡ್ ನಿರ್ವಣೆಯ ಕುರಿತು ಸಲಹೆ, ಜನರ ಅಭಿಪ್ರಾಯಗಳನ್ನು ಸಿಎಂಗೆ ಪತ್ರ ಮುಖೇನ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದರು. ಇದೀಗ ಸಂಸದರ ಸಲಹೆಗಳನ್ನು ಪರಿಗಣಿಸಿ, ಕೈಗೊಂಡಿರುವ ಅಗತ್ಯ ಕ್ರಮಗಳ ಕುರಿತು ಸರ್ಕಾರದ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಸವಿವರ ವರದಿಯನ್ನು ನೀಡಿದ್ದಾರೆ.

ಓದಿ: ಮಿತಿಮೀರಿದ ಕೋವಿಡ್ : ನಿರ್ವಹಣೆ ಸಂಬಂಧ ಸಿಎಂಗೆ ಪತ್ರ ಬರೆದ ಸಂಸದೆ ಕರಂದ್ಲಾಜೆ

ಸಿಎಂ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಸಂಸದೆ ಕರಂದ್ಲಾಜೆಗೆ ಸುದೀರ್ಘ ವಿವರವನ್ನು ನೀಡಿದ್ದಾರೆ. ಕೋವಿಡ್ ಹೆಲ್ಪ್ ಲೈನ್ ಸಂಖ್ಯೆ 14410 ರಲ್ಲಿ 25 ಲೈನ್‌ಗಳು ಇರುತ್ತದೆ. ಹೆಲ್ಪ್ ಲೈನ್ 104 ರಲ್ಲಿ 25 ಲೈನ್‌ಗಳು ಇರುತ್ತದೆ ಹಾಗೂ ಆಪ್ತಮಿತ್ರ 5 ಲೈನ್ ಇರುತ್ತವೆ. ಇವುಗಳು, ಕೋವಿಡ್‌ಗಾಗಿಯ ಮೀಸಲಿರುವ ಲೈನ್‌ಗಳಾಗಿವೆ.

ಉಳಿದ ಸಹಾಯವಾಣಿ ಸಂಖ್ಯೆ 1912 ಮತ್ತು 108 ರಲ್ಲಿ ಕ್ರಮವಾಗಿ 60 ಹಾಗೂ 65 ಲೈನ್ ಗಳು ಇರುತ್ತದೆ. ಇವುಗಳು ಕೋವಿಡ್ ಹೆಲ್ಪ್ ಲೈವ್ ನಂಬರ್‌ಗಳು ಅಲ್ಲದಿದ್ದರೂ, ಕೋವಿಡ್ ಕುರಿತಂತೆ ಒಳಬರುವ ಕರೆಗಳನ್ನು ಆಪ್ತಮಿತ್ರ 14,410 ಹೆಲ್ಪ್ ಲೈನ್ ಗೆ ಕಳುಹಿಸಿಕೊಡಲಾಗುತ್ತಿತ್ತು. ಒಟ್ಟು 85 ಲೈನ್‌ಗಳು ಕೋವಿಡ್ ಸಹಾಯಕ್ಕಾಗಿಯೇ ಪಾರಂಭದಲ್ಲಿದ್ದವು. ಉಳಿದವು ತಮ್ಮ ಇಲಾಖೆಯ ಕರೆಗಳ ಜೊತೆಗೆ ಕೋವಿಡ್ ಕರೆಗಳನ್ನು ಸಹ ಸ್ವೀಕರಿಸುತ್ತವೆ.

ಕೋವಿಡ್ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 1912 ಸಹಾಯವಾಣಿಯನ್ನು ಬಲಗೊಳಿಸಿ 550 ಲೈನ್‌ಗಳ ಕೋವಿಡ್ ಸಂಖ್ಯೆಯಾಗಿ ಮೇಲ್ದರ್ಜೆಗೇರಿಸಿದ್ದು, ಕಳೆದ 2 ದಿನಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಈ ಎಲ್ಲ ಹಲ್ಪ್ ಲೈನ್ ಗಳು 24*7 ಕಾರ್ಯನಿರ್ವಹಿಸುವ ಹಾಗೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಕಾಲ್ ಸೆಂಟರಿನಲ್ಲಿ ಉಚಿತ ದೂರವಾಣಿ ಸಂಖ್ಯೆ SAST-18004258330 ಅಥವಾ 18004252646 ಕೋವಿಡ್ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಯವರು ಹೆಚ್ಚುವರಿ ಹಣ ಸಂಗ್ರಹಿಸುತ್ತಿರುವ ದೂರುಗಳನ್ನು ನೀಡುತ್ತಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಎಲ್ಲ ಕಡೆ ಸಹಾಯವಾಣಿ ಲಭ್ಯ

ಅಲ್ಲದೇ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ತುಂಬಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋವಿಡ್ 19ರ ಲಕ್ಷಣಗಳು ಹಾಗೂ ಅದನ್ನ ಹೋಲುವ ಲಕ್ಷಣಗಳು ಇರುವ ವ್ಯಕ್ತಿಗಳಿಗೆ ಸೂಕ್ತ ಸಲಹೆ/ಮಾರ್ಗದರ್ಶನ ಆರೋಗ್ಯ, ಶಿಕ್ಷಣ ಸಮಾಲೋಚನೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ ಕೋವಿಡ್ 19 ರೋಗವನ್ನು ತಡೆಗಟ್ಟಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಪ್ತಮಿತ್ರ ಟೆಲಿಮೆಡಿಸನ್ ಸಹಾಯವಾಣಿ ಮುಖಾಂತರ ಸಮಾಲೋಚನೆ ನಡೆಸಲು ಆದೇಶ ನೀಡಲಾಗಿರುತ್ತದೆ.

ಈ ಸಂಬಂಧ 1100 ಸಿಬ್ಬಂದಿಗಳನ್ನೊಳಗೊಂಡ ಸಹಾಯವಾಣಿಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದ್ದು, 1100 ಸಿಬ್ಬಂದಿಗಳು ದಿನವೊಂದಕ್ಕೆ, 50,000 ಕರೆಗಳನ್ನು ಸ್ವೀಕರಿಸಲು ಆದೇಶ ಮಾಡಲಾಗಿರುತ್ತದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸಾಂಕ್ರಾಮಿಕ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಆಪ್ತಮಿತ್ರ ಸಹಾಯವಾಣಿ ಸೇವೆಯ ವೇಗವನ್ನು ಹಂತ ಹಂತವಾಗಿ ಏಜೆನ್ಸಿಯವರ ಮುಖಾಂತರ ಹಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಓದಿ: ಸರ್ಕಾರಕ್ಕೆ ಸಲಹೆ ರೂಪದಲ್ಲಿ ಪತ್ರ ಬರೆದಿದ್ದೇನೆ: ಸಂಸದೆ ಕರಂದ್ಲಾಜೆ

ಕೋವಿಡ್ ಮೊದಲನೆಯ ಅಲೆಯ ಬಳಿಕ 22,001 ಆಕಿಜನ್ ಹಾಸಿಗೆಗಳು, 1248 HFNC ಹಾಸಿಗೆಗಳು, 701 ICU ಹಾಸಿಗೆಗಳು, 2000 ವೆಂಟಿಲೇಟರ್ಸೆಯುಕ್ತ ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಆರೋಗ್ಯ ಸಂಸ್ಥೆಗಳಲ್ಲಿ ಹೆಚ್ಚಿಸಲಾಗಿದೆ. ಹಾಗೆಯೇ ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 9905 ಆಕ್ಸಿಜನ್ ಹಾಸಿಗೆಗಳು, 646 ವೆಂಟಿಲೇಟರ್ಸ್‌ಯುಕ್ತ ಹಾಸಿಗೆಗಳು, 570 HFNC ಯುಕ್ತ ಹಾಸಿಗೆಗಳು, ಹಾಗೂ liquid Medical Oxygen ಸಾಮರ್ಥ್ಯವನ್ನು 234 KL ಹೆಚ್ಚುವರಿಯಾಗಿ ಮಾಡಲಾಗಿದೆ. ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ನಿಯಮಿತದಲ್ಲಿ 400 ವೆಂಟಿಲೇಟರ್ ಗಳು ಲಭ್ಯವಿದ್ದು, ಅವುಗಳನ್ನು ಅಗತ್ಯವಿರುವ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದಿದ್ದಾರೆ.

ವೆಂಟಿಲೇಟರ್ ಗಳ ಬೇಡಿಕೆ ಹಿಂದೆಂದಿಗಿಂತಲು ಹೆಚ್ಚಿನ ಬೇಡಿಕೆ

ಕೋವಿಡ್ 19ರ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದ ಹಾಗೆ ವೆಂಟಿಲೇಟರ್ ಗಳ ಬೇಡಿಕೆ ಹಿಂದೆಂದಿಗಿಂತಲು ಹೆಚ್ಚಿನ ಬೇಡಿಕೆ ಉಂಟಾಗಿದ್ದು, ರಾಜ್ಯದ ಎಲ್ಲ ತಾಲೂಕು ಮಟ್ಟದ ಆಸ್ಪತ್ರೆಗಳಿಗೆ 6 ವೆಂಟಿಲೇಟರ್‌ಗಳನ್ನು ಹಂಚಿಕೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಗಳಿಗೆ ಕನಿಷ್ಠ 20, ಹಾಗೂ ಜಿಲ್ಲಾಸ್ಪತ್ರೆಗಳ ಬೇಡಿಕೆ ಅನುಸಾರ ಹಂಚಿಕೆ ಮಾಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ರೆಮ್ಡೆಸಿವಿರ್ ಹಾಗೂ ಆಕ್ಸಿಜನ್ ಲಭ್ಯತೆ ಬಗ್ಗೆ ಕಾಲ್ ಸೆಂಟರ್ ನಂಬರ್ 8951755722 ಸ್ಥಾಪಿಸಲಾಗಿದೆ. ಅದರ ಉಸ್ತುವರಿಗಾಗಿ IAS ದರ್ಜೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. 80,000 ವಯಲ್ಸ್ ರೆಮ್ಡಿಸಿವಿರ್ ಇಂಜಕ್ಷನ್ ಗಳ ಪೂರೈಕೆಗೆ ಆದೇಶ ನೀಡಲಾಗಿದೆ. ಅವುಗಳಲ್ಲಿ 73,000 ಈಗಾಗಲೇ ಪಡೆಯಲಾಗಿರುತ್ತದೆ. ಇದಲ್ಲದೆ ಮತ್ತೊಂದು 193,000 vials ರೆಮ್ಡಿಸಿವಿರ್ ಪೂರೈಕೆಗಾಗಿ ಆದೇಶ ನೀಡಲಾಗಿದ್ದು, 7 ರಿಂದ 15 ದಿನಗಳೊಳಗಾಗಿ ಸರಬರಾಜು ಪಡೆಯಲಾಗುವುದು. ಭಾರತ ಸರ್ಕಾರ 1,22,000 ವಯಲ್ಸ್ ರೆಮ್ಡಿಸಿವಿರ್ ಗಳನ್ನು ಹಂಚಿಕೆ ಮಾಡಿರುತ್ತದೆ ಎಂದು ವಿವರಿಸಿದ್ದಾರೆ.

ಆಯಾಯ ಸ್ಥಳಗಳಲ್ಲೇ ನಿರಂತರ ಪರೀಕ್ಷಾ ಕೆಲಸ

ಈಗಾಗಲೇ ಬೆಂಗಳೂರು ನಗರದ ವಾರ್ಡುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಗ್ರಾಮೀಣ ಭಾಗದ PHC/CHC/ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಆಯಾಯ ಸ್ಥಳದಲ್ಲಿಯೇ ಪರೀಕ್ಷಿಸುವ ಕಾರ್ಯವು ಈಗಾಗಲೇ ಆಗುತ್ತಿದೆ. ಕೊರೊನಾ ಕಾರಣದಿಂದ ಮರಣ ಹೊಂದಿವರಿಗೆ ಸರ್ಕಾರ ರಾಜ್ಯಾದ್ಯಂತ ಉಚಿತ ಆಂಬುಲೆನ್ಸ್‌ಗಳ ವ್ಯವಸ್ಥೆಯನ್ನು ಮಾಡಿರುತ್ತದೆ. ಹೆಚ್ಚು ದರವನ್ನು ತೆಗೆದುಕೊಳ್ಳುವ ಖಾಸಗಿ ಅಂಬುಲೆನ್ಸ್ ಗಳ ಮೇಲೆ ಕ್ರಮ ಕೈಗೊಳ್ಳಲು ಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗುವುದು. ಈಗಾಗಲೇ ಬಿಬಿಎಂಪಿ ಯಲ್ಲಿ 400 ಆಂಬುಲೆನ್ಸ್ ಗಳನ್ನು ಹಾಗೂ 90 ಶವ ಸಾಗಿಸುವ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ಅವಶ್ಯಕತೆಗನುಗುಣವಾಗಿ ಆಂಬುಲೆನ್ಸ್‌ಗಳು ಲಭ್ಯವಿರುತ್ತವೆ. ಇನ್ನು ಹೆಚ್ಚಿನ ಅಂಬುಲೆನ್ಸ್ ಗಳ ಕೋರಿಕೆ ಬಂದಲ್ಲಿ ಅದನ್ನು ಪರಿಶೀಲಿಸಿ ಒದಗಿಸಲು ವ್ಯವಸ್ಥೆ ಮಾಡಲಾಗುವುದು‌ ಎಂದು ತಿಳಿಸಿದ್ದಾರೆ.

ಕಳೆದ 4 ದಿನಗಳಲ್ಲಿ 800 ಹೆಚ್ಚುವರಿ ಹಾಸಿಗೆಗಳನ್ನು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಒಂದು ವಾರದ ಒಳಗಾಗಿ ಹೆಚ್ಚುವರಿ 1500 ಹಾಸಿಗೆಗಳನ್ನು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಒಟ್ಟು 2100 ಹಾಸಿಗೆಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ 12 ಕೋವಿಡ್‌ ಕೇರ್ ಸೆಂಟರ್ ಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಸುದೀರ್ಘ ವರದಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.