ETV Bharat / state

ಮೋಟಾರು ವಾಹನಗಳ ತೆರಿಗೆ ಪರಿಷ್ಕರಣೆ ತಿದ್ದುಪಡಿ ವಿಧೇಯಕ ಅಂಗೀಕಾರ: ಇನ್ಮುಂದೆ ತೆರಿಗೆ ಹೆಚ್ಚಳ, ಯಾವ ವಾಹನಕ್ಕೆ ಎಷ್ಟು? - ಮೋಟಾರು ವಾಹನಗಳ ತೆರಿಗೆಯಲ್ಲಿ ಹೆಚ್ಚಳ

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಸದ್ಯದಲ್ಲೇ ವಾಹನಗಳ ತೆರಿಗೆ ಹೆಚ್ಚಳವಾಗಲಿದೆ.

Etv Bharat vehicle tax
Etv Bharat ವಾಹನ ತೆರಿಗೆ
author img

By

Published : Jul 21, 2023, 7:11 AM IST

ಬೆಂಗಳೂರು: ಮೋಟಾರು ವಾಹನ ತೆರಿಗೆಗಳನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಗುರುವಾರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ 2023 ಅಂಗೀಕೃತವಾಯಿತು. ಸಿಎಂ ಸಿದ್ದರಾಮಯ್ಯ 2023-24ರ ಸಾಲಿಗೆ ಮಂಡಿಸಿದ ಬಜೆಟ್ ಪ್ರಸ್ತಾವನೆಯಂತೆ ತೆರಿಗೆ ಪರಿಷ್ಕರಣೆ ಸಂಬಂಧ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ಹೀಗಾಗಿ, ‌ಇನ್ನು ಮುಂದೆ ವಾಹನ ಮಾಲೀಕರ ಜೇಬಿಗೆ ಹೆಚ್ಚಿನ ಹೊರೆ ಬೀಳಲಿದೆ.

ಸರಕು ವಾಹನಗಳ ಪೂರ್ಣಾವಧಿ ತೆರಿಗೆ ಪರಿಷ್ಕರಣೆ: ಸರಕು ವಾಹನದ ಒಟ್ಟಾರೆ ತೂಕ 1,500 ಕೆ.ಜಿ - 12,000 ಕೆ.ಜಿ. ವರೆಗಿದ್ದರೆ, ಅಂಥ ಸರಕು ವಾಹನಗಳಿಗೆ ನೋಂದಣಿ ಸಮಯದಲ್ಲಿ 6 ವರ್ಗಗಳಲ್ಲಿ ಪೂರ್ಣಾವಧಿ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಈ ಹಿಂದೆ 1,500 ಕೆ.ಜಿ-5,500 ಕೆ.ಜಿ.ವರೆಗೆ ಕೇವಲ 3 ವರ್ಗಗಳು ಇದ್ದವು.

ತಿದ್ದುಪಡಿ ವಿಧೇಯಕದಂತೆ ಹೊಸ ಸರಕು ವಾಹನಗಳಿಗೆ ಒಟ್ಟಾರೆ ತೂಕ 1,500 ಕೆ.ಜಿ ಯಿಂದ 2,000 ಕೆ.ಜಿ.ವರೆಗೆ ಇದ್ದರೆ 20,000 ರೂ ಪೂರ್ಣಾವಧಿ ತೆರಿಗೆ ವಿಧಿಲಾಗುತ್ತದೆ. ಈ ಹಿಂದೆ 10,000 ರೂ. ಇತ್ತು. 2,000 ಕೆ.ಜಿ - 3,000 ಕೆ.ಜಿ. ವರೆಗಿನ ಸರಕು ವಾಹನಗಳಿಗೆ 30,000 ರೂ ಪೂರ್ಣಾವಧಿ ತೆರಿಗೆ, 3,000 ಕೆ.ಜಿ - 5,500 ಕೆ.ಜಿ. ವರೆಗಿನ ಸರಕು ವಾಹನಗಳಿಗೆ 40,000 ರೂ., 5,500 ಕೆ.ಜಿ - 7,500 ಕೆ.ಜಿ.ವರೆಗಿನ ಸರಕು ವಾಹನಗಳಿಗೆ 60,000 ರೂ., 7,500 ಕೆ.ಜಿ - 9,500 ಕೆ.ಜಿ.ವರೆಗಿನ ತೂಕದ ಸರಕು ವಾಹನಗಳಿಗೆ 80,000 ರೂ. ಮತ್ತು 9,500 ಕೆ.ಜಿ. - 12,000 ಕೆ.ಜಿ.ವರೆಗಿನ ತೂಕದ ಸರಕು ವಾಹನಗಳ ಪೂರ್ಣಾವಧಿ ತೆರಿಗೆಯನ್ನು 1 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.

ಈಗಾಗಲೇ ನೋಂದಣಿಯಾಗಿರುವ ಸರಕು ವಾಹನಗಳ ಪೂರ್ಣಾವಧಿ ತೆರಿಗೆಯನ್ನೂ ಹೆಚ್ಚಿಸಲಾಗಿದೆ. ಸರಕು ವಾಹನ ನೋಂದಣಿಯಾದಾಗಿನಿಂದ ಅದರ ಬಳಕೆ ವರ್ಷದ ವರೆಗಿನ ತೆರಿಗೆಯನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ. 1,500 ಕೆ.ಜಿ-2,000 ಕೆ.ಜಿ ತೂಕದ ಸರಕು ವಾಹನದಿಂದ ಹಿಡಿದು 9,500ಕೆ.ಜಿ-12,000 ಕೆ.ಜಿ.ವರೆಗೆ ಇರುವ ವಿವಿಧ ಆರು ಸರಕು ವಾಹನ ವರ್ಗಗಳಿಗೆ ತೆರಿಗೆ ಏರಿಸಲಾಗಿದೆ. ವಿವಿಧ ಆರು ವರ್ಗಗಳ ಸರಕು ವಾಹನದ ಆಧಾರದಲ್ಲಿ 2 ವರ್ಷ ಮೀರಿದ ಸರಕು ವಾಹನಕ್ಕೆ ಕನಿಷ್ಠ 18,600ರೂ. ನಿಂದ ಗರಿಷ್ಠ 93,000 ರೂ. ವರೆಗೆ ಪೂರ್ಣಾವಧಿ ತೆರಿಗೆ ಹೆಚ್ಚಿಸಲಾಗಿದೆ. ಅದೇ ರೀತಿ 3 ವರ್ಷದಿಂದ 15 ವರ್ಷ ಹಳೆಯದಾದ ಸರಕು ವಾಹನಗಳ ಪೂರ್ಣಾವಧಿ ತೆರಿಗೆಗಳು ದುಪ್ಪಟ್ಟಾಗಿವೆ.

ಇದನ್ನೂ ಓದಿ: Karnataka Budget: 3.27 ಲಕ್ಷ ಕೋಟಿ ರೂ. ಬಜೆಟ್​ ಮಂಡನೆ, ವಿವಿಧ ತೆರಿಗೆ ಹೆಚ್ಚಳ

ಮೋಟಾರು ಕ್ಯಾಬ್​ಗಳ ಪೂರ್ಣಾವಧಿ ತೆರಿಗೆಯನ್ನೂ ಹೆಚ್ಚಿಸಲಾಗಿದೆ. ಈ‌ ಮುಂಚೆ 15 ಲಕ್ಷ ರೂ ಮೀರಿರುವ ಮೋಟಾರು ಕ್ಯಾಬ್​ಗೆ ವಾಹನ ಬೆಲೆಯ ಶೇ.15ರಷ್ಟು ಪೂರ್ಣಾವಧಿ ತೆರಿಗೆ ವಿಧಿಸಲಾಗುತ್ತಿತ್ತು. ಇದೀಗ 10 ಲಕ್ಷ ರೂ. ಯಿಂದ 15 ಲಕ್ಷ ರೂ. ವರೆಗಿನ ಹೊಸ ಮೋಟಾರು ಕ್ಯಾಬ್​ಗಳಿಗೆ ವಾಹನ ಬೆಲೆಯ ಶೇ.9ರಷ್ಟು ತೆರಿಗೆ ವಿಧಿಸಲಾಗುತ್ತದೆ. ಉಳಿದಂತೆ 15 ಲಕ್ಷ ರೂ ಮೀರಿದ ಹೊಸ ಕ್ಯಾಬ್​​ಗಳಿಗೆ ವಾಹನ ಬೆಲೆಯ ಶೇ.15 ತೆರಿಗೆಯನ್ನೇ ಮುಂದುವರಿಸಲಾಗಿದೆ.

ಸಂಚಾರಿ ಕ್ಯಾಂಟೀನ್, ಸಂಚಾರಿ ಗ್ರಂಥಾಲಯ ವಾಹನ, ಸಂಚಾರಿ ಕಾರ್ಯಾಗಾರ, ಸಂಚಾರಿ ಕ್ಲಿನಿಕ್, ಎಕ್ಸ್ರೇ ವಾಹನ, ಕ್ಯಾಷ್ ವಾಹ‌ನವನ್ನು ಒಳಗೊಂಡ ಸರಕು ವಾಹನಗಳ ಪೈಕಿ 5,500 ಕೆ.ಜಿ ಯಿಂದ 12,000 ಕೆ.ಜಿ. ವರೆಗಿನ ವಾಹನಗಳಿಗೆ ವಿಧಿಸಲಾಗುತ್ತಿದ್ದ 1,800 ರೂ. ತ್ರೈಮಾಸಿಕ ತೆರಿಗೆಯನ್ನು ಕೈಬಿಡಲಾಗಿದೆ.

ಶಾಲೆಗಳ ಒಡೆತನದಲ್ಲಿರುವ ಮತ್ತು ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ಪ್ರಯಾಣಕ್ಕಾಗಿ ಮಾತ್ರ ಓಮ್ನಿ ಬಸ್​​ ಮತ್ತು ಖಾಸಗಿ ಸೇವಾ ವಾಹನಗಳನ್ನು ಬಳಸುತ್ತಿದ್ದರೆ ಫ್ಲೋರ್ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ ತ್ರೈಮಾಸಿಕ ತೆರಿಗೆಯನ್ನು 20 ರೂ.ರಿಂದ 100 ರೂ.ಗೆ ಹೆಚ್ಚಿಸಲಾಗಿದೆ.

ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿರುವ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಪ್ರಯಾಣದ ಸಲುವಾಗಿ ಮಾತ್ರ ಓಮ್ನಿ ಬಸ್​​ ಮತ್ತು ಖಾಸಗಿ ಸೇವಾ ವಾಹನಗಳನ್ನು ಬಳಸುತ್ತಿದ್ದರೆ ಫ್ಲೋರ್ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ ತ್ರೈಮಾಸಿಕ ತೆರಿಗೆಯನ್ನು 80 ರೂ. ಯಿಂದ 200 ರೂ.ಗೆ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: ಫಾರ್ಮ್‌ 16 ಇಲ್ಲದೇ ಆದಾಯ ತೆರಿಗೆ ರಿಟರ್ನ್ಸ್ ಫೈಲ್‌ ಮಾಡುವುದು ಹೇಗೆ?: ಇಲ್ಲಿವೆ ಕೆಲವು ಟಿಪ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.