ETV Bharat / state

ಕೆಲಸ ಮಾಡದೇ ನಕಲಿ ಬಿಲ್ ಮಾಡಿದವರಲ್ಲಿ ಬಹುತೇಕರು ಅಶ್ವತ್ಥ್ ನಾರಾಯಣ್, ಅಶೋಕ್ ಬೇನಾಮಿಗಳೇ: ಎಂ.ಲಕ್ಷ್ಮಣ್ - ಗವರ್ನರ್​ಗೆ ಬರೆದಿರುವ ಪತ್ರಕ್ಕೆ ಒಬ್ಬನೇ ಎಂಟು ಸಹಿ

ಗವರ್ನರ್​ಗೆ ಬರೆದಿರುವ ಪತ್ರಕ್ಕೆ ಒಬ್ಬನೇ ಎಂಟು ಸಹಿ ಹಾಕಿದ್ದಾನೆ, ಇದರ ರೂವಾರಿ ಯಾರು ಎನ್ನುವುದು ಗೊತ್ತಾಗಿದೆ ಎಂದು ಆರ್. ಲಕ್ಷ್ಮಣ್​ ಹೇಳಿದ್ದಾರೆ.

KPCC General Secretary M. Laxman
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್
author img

By

Published : Aug 11, 2023, 5:44 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಆಗದೇ ನಕಲಿ ಬಿಲ್ ಮಾಡಿದ ಗುತ್ತಿಗೆದಾರರ ಪೈಕಿ ಬಹುತೇಕರು ಅಶ್ವತ್ಥ್ ನಾರಾಯಣ್ ಹಾಗೂ ಆರ್. ಅಶೋಕ್ ಅವರ ಬೇನಾಮಿಗಳೇ ಇದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಶ್ವತ್ಥ್ ನಾರಾಯಣ್ ಅವರೇ ನಿಮ್ಮ ನೆಂಟರು, ನಿಮ್ಮ ತಮ್ಮ ಆದಿಯಾಗಿ ಐದು ವರ್ಷದಲ್ಲಿ ಬಿಬಿಎಂಪಿ, ಬಿಡಿಎದಲ್ಲಿ ಎಷ್ಟು ಕೋಟಿಗೆ ಗುತ್ತಿಗೆದಾರರನ್ನು ತೆಗೆದುಕೊಂಡಿದ್ದೀರಿ. ಆರ್. ಅಶೋಕ್‌ ಅವರೇ ನಾಲ್ಕೈದು ಜನರು ಬೇನಾಮಿ ಹೆಸರಲ್ಲಿ ಎಷ್ಟು ಮೊತ್ತಕ್ಕೆ ಗುತ್ತಿಗೆ ತೆಗೆದುಕೊಂಡಿದ್ದಾರೆ? ಕಳೆದ ನಾಲ್ಕು ವರ್ಷಗಳಲ್ಲಿ ಬಿಬಿಎಂಪಿಯಲ್ಲಿ ಉಳಿಸಿದ ಬಾಕಿ ಬಿಲ್ ಮೊತ್ತ ಏನು?. ನಮಗೆ ಇರುವ ಮಾಹಿತಿಯಂತೆ ಸುಮಾರು 2,500 ಕೋಟಿ ರೂ. ಬಾಕಿ ಬಿಲ್ ಇದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ ಕೊನೆಯ 10 ತಿಂಗಳಲ್ಲಿ ಒಟ್ಟು 118 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. 114 ಕೋಟಿ ರೂ. ಮೊತ್ತದಲ್ಲಿ 64 ಕಾಮಗಾರಿಗಳು ಎಲ್ಲಿ ಆಗಿವೆ ಎಂಬುದೇ ಗೊತ್ತಿಲ್ಲ. ಆದರೆ ಬಿಲ್ ಆಗಿದೆ. ನನಗೆ ಇರುವ ಮಾಹಿತಿ ಪ್ರಕಾರ 2,500 ಕೋಟಿ ಪೈಕಿ ಕೇವಲ 1,000 ಕೋಟಿ ರೂ. ನಷ್ಟು ಮಾತ್ರ ಕಾಮಗಾರಿಯಾಗಿದೆ. ಉಳಿದ 1,500 ಕೋಟಿಯಷ್ಟು ನಕಲಿ ಬಿಲ್ ಆಗಿದೆ. ಈ ನಕಲಿಯಲ್ಲಿ ಬಹುತೇಕರು ಅಶ್ವತ್ಥ್ ‌ನಾರಾಯಣ್ ಹಾಗೂ ಆರ್. ಅಶೋಕ್ ಅವರ ಬೇನಾಮಿಗಳೇ ಇದ್ದಾರೆ ಎಂದು ಎಂದರು.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಫಲ ಪ್ರಯತ್ನ ಮಾಡ್ತಿದ್ದಾರೆ. ಆರ್ ಅಶೋಕ್, ಅಶ್ವತ್ಥ್​ ನಾರಾಯಣ್ ಅವರು ಗುತ್ತಿಗೆದಾರರ ಪರವಾಗಿ ಪರ್ಸೆಂಟೇಜ್ ಆರೋಪ ಮಾಡ್ತಾ ಇದ್ದಾರೆ. ಎಸ್​ಐಟಿಯನ್ನು ನಾವು ರಚನೆ ಮಾಡಿದ್ದೇವೆ. ಒಂದೊಂದೇ ಕಂಡು ಹಿಡಿಯುತ್ತಿದ್ದೇವೆ. 15% ಡಿಕೆಶಿ ಕೇಳಿದ್ದಾರೆ ಎಂದು ಹೇಳ್ತೀರಿ, ಯಾರು ಕೇಳಿದ್ದಾರೆ ಹೇಳಿ?. ನಿಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಸುಮ್ಮನೆ ಮಾತಾಡ್ತಿದ್ದೀರಿ. ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರನ್ನು ಮಾಡೋಕೆ ಆಗಲಿಲ್ಲ. ಸುಖಾಸುಮ್ಮನೆ ಡಿಕೆಶಿ ವಿರುದ್ಧ ಆರೋಪ ಎಂದು ವಾಗ್ದಾಳಿ ನಡೆಸಿದರು.

ಹೆಚ್​ ಡಿ ಕುಮಾರಸ್ವಾಮಿ ಪಾಪ ಬರ್ತಾರೆ, ಹಿಟ್ ಆ್ಯಂಡ್​ ರನ್​ ಸ್ಟೇಟ್​ಮೆಂಟ್ ಕೊಟ್ಟು, ಫಾರಿನ್​ಗೆ ಹೋಗ್ತಾರೆ. ನಿವೇನು ಒಕ್ಕಲಿಗ ಸಮುದಾಯವನ್ನು ಗುತ್ತಿಗೆ ತೆಗೆದು ಕೊಂಡಿದ್ದೀರಾ?. ನೀವು ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳೇ ಪುಡಿ ಪುಡಿಯಾಗಿವೆ‌. ಚೆಲುವರಾಯಸ್ವಾಮಿ ಮಂಡ್ಯದಲ್ಲಿ ಕೆಲಸ ಮಾಡೋದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಗವರ್ನರ್​ಗೆ ಪತ್ರ ಬರೆಯುತ್ತೀರಿ. ಈ ಮೂಗರ್ಜಿಯ ರೂವಾರಿ ಯಾರು ಎಂದು ಗೊತ್ತಾಗಿದೆ. ಪತ್ರದಲ್ಲಿ ಒಬ್ಬನೇ ಎಂಟು ಸಹಿ ಹಾಕಿದ್ದಾನೆ. ಎಲ್ಲವೂ ಇನ್ನು ಎರಡು ಮೂರು ದಿನಗಳಲ್ಲಿ ಹೊರಗೆ ಬರಲಿದೆ ಎಂದು ತಿಳಿಸಿದರು.

ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿ ಆಗಿದ್ಯಾ?: ಗವರ್ನರ್ ಆಫೀಸ್ ಇಷ್ಟರ ಮಟ್ಟಿಗೆ ಸಕ್ರಿಯ ಇರೋದನ್ನು ನೋಡಿಲ್ಲ. ಗವರ್ನರ್ ಕಚೇರಿ ಬಿಜೆಪಿ ಕಚೇರಿ ಆಗಿದ್ಯಾ, ಜೆಡಿಎಸ್ ಕಚೇರಿ ಆಗಿದ್ಯಾ?. ದಯಮಾಡಿ ರಾಜ್ಯಪಾಲರೇ ತನಿಖೆ ಮಾಡಿಸಿ. ಎಲ್ಲಾದ್ರೂ ಪ್ರೂವ್ ಆಗಿದ್ಯಾ ಹಣ ಕೇಳಿರೋದು. ಪೇಸಿಎಂನ್ನು ನಾವು ದಾಖಲೆ ಸಮೇತ ಮಾಡಿದ್ವಿ. ಆದ್ರೆ ಇವರು ಪೇಸಿಎಸ್ ಎಂದು ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿರೋಧ ಪಕ್ಷದ ನಾಯಕನ ಸ್ಥಾನ ಸಿಗುತ್ತೆ ಅಂತಾ ಮಾಧ್ಯಮದ ಮುಂದೆ ಅಶೋಕ್ ಬರ್ತಿದ್ದಾರೆ. ಸುಳ್ಳು ಹೇಳೋದ್ರಲ್ಲಿ ಪಿಎಚ್​ಡಿ ಮಾಡಿಕೊಂಡಿದ್ದಾರೆ, ಸ್ಟಡಿ ಮಾಡಿ ಬರ್ತಾರೆ. ಇವರು ಮಾಡಿರೋ ಅನಾಚಾರಗಳನ್ನು ತನಿಖೆ ಮಾಡ್ತೇವೆ. ಬಿಟ್ ಕಾಯಿನ್​ನಲ್ಲಿ ಬೊಮ್ಮಾಯಿ ಬಗ್ಗೆನೂ ತನಿಖೆ ಮಾಡುತ್ತೇವೆ. ಮಂಪರು‌ ಪರೀಕ್ಷೆ ಮಾಡಿಸಿ ಸತ್ಯ ಹೊರಗೆ ಎಳೆಯುತ್ತೇವೆ. ಇನ್ನೊಂದು ಹದಿನೈದು ದಿನ ತಡೆದುಕೊಳ್ಳಿ ಎಂದರು.

ಒಂದು ಸಾವಿರ ಕೋಟಿ ವರ್ಗಾವಣೆ ದಂಧೆ ಎಂದು ಹೆಚ್​ಡಿಕೆ ಹೇಳಿದ್ದಾರೆ. ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು 15% ಮಾತ್ರ ವರ್ಗಾವಣೆ ಮಾಡಬಹುದು. 150 ಅಧಿಕಾರಿಗಳು ಟ್ರಾನ್ಸ್​ಫರ್ ಆಗಿರಬಹುದು. ಸಾವಿರ ಕೋಟಿ ಎಲ್ಲಾಗುತ್ತದೆ. ನಾನು ಕೂಡ ಟ್ರಾನ್ಸ್​ಫರ್ ಮಾಡಿಸಿದ್ದೇನೆ. ಅವರಿಂದ ಅರ್ಧ ಟೀ ಕುಡಿದಿದ್ರೆ ಹೇಳಿ, ನೇಣು ಹಾಕಿಕೊಳ್ತೇನೆ. ಸುಳ್ಳು ಆಪಾದನೆ ಮಾಡೋದನ್ನು ಹೆಚ್​ಡಿಕೆ ಬಿಡಬೇಕು. ನೀವು ಸಣ್ಣಪುಟ್ಟ ಸೆಕ್ರೆಟರಿಗಳಿಗೆಲ್ಲಾ ರೇಟ್ ಫಿಕ್ಸ್ ಮಾಡಿದ್ರಿ. ಪೆಂಡ್ರೈವ್ ಬಿಡಿ ಏನಿದ್ಯೋ ನೋಡೋಣ. ನನ್ನ ಹತ್ತಿರನೂ ನಿಮ್ಮ‌ ಪೆಂಡ್ರೈವ್ ಇದೆ, ನಿಮ್ಮ ಕರ್ಮಕಾಂಡದ್ದು. ದೆಹಲಿಗೆ ಹೋಗಿ ದಾಖಲೆ ಬಿಡುಗಡೆ ಮಾಡ್ತಾರಂತೆ. ಎಸ್​ಐಟಿಗೆ ಒಂದು ತಿಂಗಳು ಟೈಮ್ ಕೊಟ್ಟಿದ್ದೇವೆ. ಎಲ್ಲಿ ಸಿಕ್ಕಾಕಿಕೊಳ್ತೀವೋ ಅಂತಾ ಥೈಯ್ಯಾತಕ್ಕ ಅಂತಾ ಕುಣಿಯುತ್ತಿದ್ದಾರೆ. ಸರ್ಕಾರ ನೂರಕ್ಕೆ ನೂರು ಸುಭದ್ರವಾಗುತ್ತೆ ಎಂದು ಹೇಳಿದರು.

ಇದನ್ನೂ ಓದಿ: Priyank Kharge: ದೇವಸ್ಥಾನ ಯಾಕೆ, ಸಾಕ್ಷಿಸಮೇತ ನ್ಯಾಯಾಲಯಕ್ಕೆ ಬನ್ನಿ- ಸಚಿವ ಪ್ರಿಯಾಂಕ್​ ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.